ವಾಲ್ಮೀಕಿ ರಾಮಾಯಣ : ಮೌಲ್ಯಗಳ ಪ್ರಸ್ತುತತೆ

ಡಾ.ಪಿ. ನಾಗರಾಜ

ಜಾಗತಿಕ ಮಹಾಕಾವ್ಯಗಳ ಸಾಲಿನಲ್ಲಿ ಭಾರತದ ಮಹಾಕವಿಗಳಿಗೆ ಮಹತ್ವದ ಸ್ಥಾನವಿದೆ. ಚರಿತ್ರೆ ಪರಂಪರೆಗಳೊAದಿಗೆ ಸಂಬAಧ ಪ್ರಸ್ತುತ ಸಂದರ್ಭಗಳಿಗೆ ಮುಖಮುಖಿಯಾಗುವ ಅಪರೂಪದ ಕಾವ್ಯಗಳಲ್ಲಿ ವ್ಯಾಸ ಮತ್ತು ವಾಲ್ಮೀಕಿ ಕೃತಿಗಳು ಇಂದಿಗೂ ಮಹತ್ವ ಪಡೆದಿವೆ. ಇದುವರೆಗೆ ಜಗತ್ಪçಸಿದ್ಧ ವಿಮರ್ಶಕರು ಗುರುತಿಸಿರುವ ಮತ್ತು ವ್ಯಾಖ್ಯಾನಿಸಿರುವ ಸಂದರ್ಭಗಳ ಹಿನ್ನಲೆಯಲ್ಲಿ ಹೇಳುವುದಾದರೆ ಮಹಾಭಾರತ ಮತ್ತು ರಾಮಾಯಣ ಮಾನವ ಬದುಕಿನ ಅಸಂಖ್ಯ ಆಯಾಮಗಖನ್ನು ಬಿಂಬಿಸುವ ಕೃತಿಗಳಾಗಿವೆ. ಮೂಲತ: ಕೌಟುಂಬಿಕ ಕೃತಿ ಎಂದೆನಿಸಬಹುದಾದರೂ ಆಳದಲದಲ್ಲಿ ಮತ್ತು ವ್ಯಾಪ್ತಿಯಲ್ಲಿ ವಿರಾಟ್ ಸ್ವರೂಪವನ್ನು ಈ ಎರಡೂ ಕೃತಿಗಳು ಹೊಂದಿವೆ.

ಸಮಕಾಲೀನ ಸಂದರ್ಭದಲ್ಲಿ ವಾಲ್ಮೀಕಿ ರಾಮಾಯಣವನ್ನು ಬೇರೆ ಬೇರೆ ಆಯಾಮಗಳಿಂದ ವಿಶ್ಲೀಷಿಸುವ ಅಗತ್ಯವಿದೆ. ರಾಮಾಯಣವು ಪ್ರತಿಪಾದಿಸುವ ಮೌಲ್ಯಗಳ ನೆಲೆಯಲ್ಲಿರಾಮಾಯಾಣವನ್ನು ಮತ್ತೆ ಪರಿಶೀಲಿಸುವುದು ಈ ಪ್ರಬಂಧದ ಉದ್ದೇಶವಾಗಿದೆ. ಮೌಲ್ಯಗಳು ಸಮುದಾಯಿಕ ಬದುಕಿನ ಮಾರ್ಗಸೂತ್ರಗಳು, ಬದುಕು ಅರ್ಥಪೂರ್ಣವಾಗಲು, ಅದನ ವ್ಯವಸ್ಥಿತವಾಗಿಸಲು ಜನಸಮುದಾಯವೇ ಕಾಲಾಂತರದಲ್ಲಿ ರೂಪಿಸಿಕೂಂಡ ಇತ್ಯಾತ್ಮಕವಾದ, ಪ್ರಗತಿಪರವಾದ, ರಚನಾತ್ಮಕವಾದ ನೀತಿಗಳ ಸಾರ. ಮೌಲ್ಯಗಳು ಒಂದು ರೀತಿಯಲ್ಲಿಅಲಿಖಿತ ಸೂತ್ರಗಳು. ಅವು ಜನಾಂಗವೊAದು ಉಸಿರಾಡುವ ಗಾಳಿಯಲ್ಲಿ ಬೆರೆತಿತುತ್ತದೆ. ಅಷ್ಟೇ ಅಲ್ಲಯುಗಧರ್ಮದೊಂದಿಗೆ ಮೌಲ್ಯಗಳನ್ನು ಬದಲಾಗಲೂ ಸಾಧ್ಯ. ಪಲ್ಲಟಗೊಳ್ಳಲೂ ಸಾಧ .ನಾಗರಿಕತೆಗಳ ನಡುವೆ ಮೌಲ್ಯಗಳ ವಿಷಯದಲ್ಲಿ ಭಿನ್ನತೆ ಇರಬುಹುದು, ಮೌಲ್ಯಗಳ ಸಂಘರ್ಷವೂ ಇದ್ದೀತು. ಒಂದೇ ಸಂಸ್ಕೃತಿಯೊಳಗೆ, ಸಮುದಾಯದೂಳಗೆ ಮೌಲ್ಯಗಳನ್ನು ಕುರಿತಂತೆ ಭೇಧಗಳಿರುವುದೂ ಕಂಡುಬರುವ ವಿಷಯವೇ. ಆದರೆ ಮಾನವ ಸಂಘಟಿತವಾಗಿ ಬದುಕು ಪ್ರಾರಂಭಿದಾಗಿನಿAದಲೂ ಸಾರ್ವಕಾಲಿವೂ ಸರ್ವಕಾಲಿವೂ, ಸರ್ವವ್ಯಾಪಿಯೂ ಆಗಿರುವ ಕೆಲವು ಮೌಲ್ಯಗಳನ್ನು ನಾವು ಗುರುತಿಸಿದ್ದೇವೆ. ಪ್ರಪಂಚದ ಶ್ರೇಷ್ಠ ನಾಗರಿಕತೆಗಳನ್ನು ಈ ನಿಟ್ಟಿನಲ್ಲಿ ಹೋಲಿಸಿ ನೋಡಿದರೆ ಸಾಮ್ಯತೆಯ ಅನೇಕ ಅಂಶಗಳು ಪ್ರಕಟವಾದವು. ಸತ್ಯ ನ್ಯಾಯಬ್ಧತೆ, ಗುರು-ಹಿರಿಯರಲ್ಲಿ ಗೌರವಭಾವ, ಭ್ರಾತೃಪ್ರೇಮ; ದೈವನಿಷ್ಠೆ , ಪ್ರಾಮಾಣಿಕತೆ, ಪ್ರಕೃತಿಯ ಬಗ್ಗೆ ಪೂಜ್ಯಭಾವ ಎಲ್ಲಕ್ಕೂ ಮಿಗಿಲಾಗಿ ತಂದೆ-ತಾಯಿಯನ್ನು ದೈವಕ್ಕೆ ಸಮಾನವಾಗಿ ಪರಿಗಣಿಸುವುದು ಇವು ಕೆಲವು ಸಾರ್ವಕಾಲಿಕ ಮೌಲ್ಯಗಳಾಗಿವೆ.

ಸಹಾಸ್ರಾರು ವರ್ಷಗಳು ದೀಪ್ತ ಪರಂಪರೆ ಛಾಯೆಯಲ್ಲಿ ವಿಕಸನಗೊಂಡ ಭಾರತೀಯ ಸಂಸ್ಕೃತಿಯೂ ಮೇಲೆ ಹೇಳಿರುವ ಮೌಲ್ಯಗಳನ್ನು ಉಸಿರಾಡುತ್ತಲೇ ಅರಳಿ ನಿಂತಿದೆ.ಬೆರಗುಗಣ್ಣುಗಳಿAದ ಇಡೀ ವಿಶ್ವವೇ ಭಾರತದತ್ತ ಸದಾಕಾಲವೂ ದಿಟ್ಟಿಸಿ ನೋಡುವುದು ಭಾರತೀಯರ ಬದುಕಿನಲ್ಲಿ ಬೆರೆತಿರುವ ಜೀವ ಪರವಾದ ಈ ಮೌಲ್ಯಗಳಿಗಾಗಿಯೇ. ಇಲ್ಲಿ ಸೃಷ್ಠಿಯಾದ ಕಲೆ, ಸಾಹಿತ್ಯ ಸಂಗೀತ ಎಲ್ಲದರ ಜೀವನಾಡಿಗಿರುವುದು ಈ ಮೌಲ್ಯಳೇ. ಕಾಲಾನುಕಾಲದಿಂದ ಭಾರತೀಯರ ಬದುಕನ್ನು ಕಡೆದು ನಿಲ್ಲಿಸಿರುವ ಮೌಲ್ಯವೆಂದರೆ ಕೇವಲ ಬೆಲೆ ನಿಗದಿ ಮತ್ತು ತೂಕವನ್ನುಮಾಡುವಂತಹದ್ದಲ್ಲ. ಬದುಕಿನ ರೀತಿ, ಸಾಂಸ್ಕೃತಿಕ ಸಂದರ್ಭ, ಇತಿಹಾಸದ ಮಜಲುಗಳನ್ನು ಆಧರಿಸಿ ಮೌಲ್ಯಗಳ ವಿವೇಚನೆ ನಡೆಯುತ್ತದೆ. ಈ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಕಲಾಕೃತಿಯೆಂದರೆ ಆದಿಕವಿ ವಾಲ್ಮೀಕಿ ರಾಮಾಯಣವಾಗಿದೆ. ಈ ಹಿನ್ನಲೆಯಲ್ಲಿ ರಾಮಾಯಣ ಬಲವಾಗಿ ಬಿಂಬಿಸುವ ಹಲವು ಮೌಲ್ಯಗಳತ್ತ ಒಂದು ಮರುನೋಟ ಬೀರುವ ಅಗತ್ಯವಿದೆ.

ಭಾರತ ದೇಶದ ವೈಚಾರಿಕತೆಯ ಶ್ರೇಷ್ಠ ಪ್ರತಿನಿಧಿಗಳಲ್ಲಿ ಒಬ್ಬರಾದ ಡಾ.ರಾಮಮನೋಹರ ಲೋಹಿಯಾ ಅವರು `ರಾಮ-ಕೃಷ್ಣ-ಶಿವ ' ಎಂಬ ಶೀರ್ಷಿಕೆಯ ಲೇಖನವೊಂದರಲ್ಲಿ ಭಾರತೀಯರ ಬದುಕನ್ನು ಅತ್ಯಂತ ಗಾಢವಾಗಿ ಪ್ರಭಾವಿಸಿರುವ ದಿವ್ಯ ಮನುಷ್ಯ ಸತ್ವಗಳಾದ ರಾಮ, ಕೃಷ್ಣ, ಶಿವ ಇವರನ್ನು ಕುರಿತು ಹೀಗೆ ಹೇಳುತ್ತಾರೆ, `ರಾಮ-ಕೃಷ್ಣ-ಶಿವ' ಈ ಮೂವರು ಇಂಡಿಯಾದ ಮೂರು ಮಹತ್ ಸ್ವಪ್ನಗಳು. ರಾಮನದು ಸೀಮಿತ ವ್ಯಕ್ತಿತ್ವದಲ್ಲಿ ಪೂರ್ಣತೆ, ಕೃಷ್ಣನದು ಸಮೃದ್ಥ ವ್ಯಕ್ತಿತ್ವದಲ್ಲಿ ಪೂರ್ಣತೆ, ಶಿವನದಾದರೋ ಪ್ರಮಾಣಾತೀತ ವ್ಯಕ್ತಿತ್ವದಲ್ಲಿ ಪೂರ್ಣತೆ. ರಾಮ ಮತ್ತು ಕೃಷ್ಣ ಮನಷ್ಯಜೀವನವನ್ನೇ ಬದುಕಿದವರಾದರೆ ಶಿವ ಹುಟ್ಟು ಇಲ್ಲದವನು, ಸಾವು ಇಲ್ಲದವನು, ದೇವ ಸಹಜವೆನ್ನವಂತೆ ಅನಂತ ''. ನಮ್ಮ ದೇಶದ ಅನೇಕ ಮಹಾಕಾವ್ಯ ಮತ್ತು ಪುರಾಣಗಳ ವಸ್ತು ರಾಮ-ಕೃಷ್ಣ-ಶಿವ ಇವರುಗಳೇ ಆಗಿದ್ದಾರೆ. ವಾಲ್ಮೀಕಿ, ವ್ಯಾಸ, ಕಾಳಿದಾಸ ಮುಂತಾದವರು ಈ ಮೂರು ವ್ಯಕ್ತಿಗಳ ಬದುಕನ್ನು ಕೇಂದ್ರವಾಗುಳ್ಳ ಕೃತಿಗಳನ್ನು ರಚಿಸಿ ಈ ದೇಶದ ಮಹಾಕಾವ್ಯ ಪರಂಪರೆಯಲ್ಲಿ ಅವರ ಸ್ಥಾನವನ್ನು ಚಿರಸ್ಥಾಯಿಯಾಗಿಸಿದ್ದಾರೆ.

ರಾಮಾಯಣವು ಮಹಾಕಾವ್ಯ ಎನ್ನುವ ತನ್ನ ಅಭಿದಾನವನ್ನು ಸಾರ್ಥಕಗೊಳಿಸುವ ರೀತಿಯಲ್ಲಿ ಭಾರತೀಯ ಸಂಸ್ಕೃತಿ ಪರಮೋಚ್ಛ ಮೌಲ್ಯಗಳನ್ನು ಪಾತ್ರಗಳು ಹಾಗೂ ಸಂದರ್ಭ ಸನ್ನಿವೇಶಗಳ ಮೂಲಕ ಸಾಕಾರಗೊಳಿಸುತ್ತದೆ. ಒಂದರ್ಥದಲ್ಲಿ ಈ ಮಹಾಕಾವ್ಯವು ಸಮಕಾಲೀನ ಭಾರತೀಯ ಬದುಕಿಗೆ ಮಾತ್ರವಲ್ಲದೆ ಒಟ್ಟಾರೆ ಭಾರತೀಯ ಮನೋಧರ್ಮಕ್ಕೆ ಅದರ ಸುಸಂಸ್ಕೃತಿ ಗುಣಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಮೌಲ್ಯಗಳು ಒಟ್ಟಾರೆ ಸಂಸ್ಕೃತಿ ಮೂಲ ಸೆಲೆಯಾಗಿದ್ದು ಕಾಲಾನುಕಾಲದಿಂದ ಭಾರತೀಯರ ಬದುಕನ್ನು ಕಡೆದು ನಿಲ್ಲಿಸಿವೆ.

ಮಾನವ-ದೈವ, ಮಾನವ-ಪ್ರಕೃತಿ ಮಾನವ-ದಾನವ, ಮಾನವ-ಮಾನವ ಮುಂತಾದ ಸಂಬAಧಗಳು ಈ ಹಿಂದೆ ಪ್ರಸ್ತಾಪಿಸಲಾಗಿರುವ ಮೌಲ್ಯಗಳ ವಿವಿಧ ಆಯಾಮಗಳನ್ನು ಸೂಕ್ಷö್ಮವಾಗಿ ಹೇಗೆ ಅನಾವರಣಗೊಳಿಸುತ್ತವೆ ಎನ್ನುವುದನ್ನು ರಾಮಾಯಣ ಮಹಾಕಾವ್ಯದ ಅಧ್ಯಯನ ಶೃತಪಡಿಸುತ್ತದೆ. ವಾಲ್ಮೀಕಿಯು ಜೀವನದ ಮೌಲ್ಯಗಳೊಂದಿಗೆ ಚಾರಿತ್ರö್ಯದ ಆದರ್ಶಗಳನ್ನು ಪುರುಷ ಪ್ರಮಾಣದಲ್ಲಿ ಕಡೆದು ನಿಲ್ಲಿಸಿದ್ದಾನೆ. ಕೌಟುಂಬಿಕ ಮೌಲ್ಯ ಮತ್ತು ನೈತಿಕಮೌಲ್ಯಗಳ ನೆಲೆಗಳಲ್ಲಿ ಇಲ್ಲಿನ ಮೌಲ್ಯ ಪ್ರಪಂಚವನ್ನು ಸ್ಥೂಲವಾಗಿ ವಿಭಾಗಿಸಬಹುದಾಗಿದೆ. ರಾಮಾಯಣದಲ್ಲಿ ಬಿಂಬಿತವಾಗಿರುವ ಅನೇಕ ಮೌಲ್ಯಗಳು ಇಂದಿಗೂ ಪ್ರಸುತ್ತವಾಗಿದೆ.

ಕುಟುಂಬ ವ್ಯವಸ್ಥೆ ಸಮಾಜವೊಂದರ ಮೂಲ ಘಟಕ. ರಾಮಾಯಣ ಆರಂಭವಾಗುವುದೇ ಕುಟುಂಬದಿAದ, ಅದರಲ್ಲೂ ಅವಿಭಕ್ತ ಕುಟುಂಬದಿAದ ರಾಜ-ಯುವರಾಜ, ಮಂತ್ರಿ, ರಾಜಪುರೋಹಿತ, ರಾಜಸೇವಕ ಸೇನಾನಿ ಮಾತ್ರವಲ್ಲ ತಂದೆ, ಮಗ, ಸೋದರ, ತಾಯಿ, ಹೆಂಡತಿ, ಗೆಳೆಯ ಇತ್ಯಾದಿ ಆತ್ಮೀಯ ಮಾನವೀಯ ಕೌಟುಂಬಿಕ ವ್ಯಕ್ತಿ ಸಂಬAಧಗಳ ಬಹುಮುಖೀ ಆಯಾಮಗಳನ್ನು ವಾಲ್ಮೀಕಿ ತನ್ನ ಪಾತ್ರಗಳನ್ನು ಕೇಂದ್ರದಲ್ಲಿಟ್ಟು ಸೃಷ್ಟಿಸಿದ್ದಾನೆ. ಇಂತಹುದೇ ಒಂದು ಕುಟುಂಬದ ಯಜಮಾನ ದಶರಥ. ಭಾರತೀಯ ಸಂಸ್ಕೃತಿ ಅನನ್ಯ ಜೀವ ಘಟಕವಾದ ಕುಟುಂಬದೊಳಗಿನ ಒಡನಾಟಗಳು ಮತ್ತು ಬಿಕ್ಕಟ್ಟುಗಳ ಯಾವ ಬಗೆಯಲ್ಲಿವೆ ಎಂಬುದಕ್ಕೆ ರಾಮಾಯಣವೇ ಸಾಕ್ಷಿ ಕುಟುಂಬದ ಸದಸ್ಯರ ನಡುವೆ ಬಿಕ್ಕಟ್ಟುಗಳು ಎದುರಾದಾಗ ಒಡಕು ಉಂಟಾಗುವ ಸಹಜತೆಗಳು ಇಲ್ಲಿ ಬಿಂಬಿಸಿವೆ, ಸತಿ-ಪತಿಗೆ, ಪತೆ-ಸತಿಗೆ ಮಕ್ಕಳು ತಂದೆ-ತಾಯಿಗೆ, ಮಕ್ಕಳಿಗೆ, ಅಣ್ಣ-ತಮ್ಮಂದಿರಿಗೆ ಹೀಗೆ ಅವರದೇ ಆದಂತಹ ಸ್ಥಾನಮಾನಗಳನ್ನು ರಾಮಾಯಣ ಬಹಳ ನಿರ್ದಿಷ್ಟವಾಗಿ ಗುರುತಿಸಿದೆ. ಈ ಮಾತಿಗೆ ರಾಮ-ಲಕ್ಷö್ಮಣ ಮುಂತಾದವರು ಸಾಕ್ಷಿಯಾಗಿದ್ದಾರೆ. ಆದ್ದರಿಂದ ಕುಟುಂಬದೊಳಗಿನ ವಿವಿಧ ವ್ಯಕ್ಕಿಗಳು ಸಂಬAಧಗಳ ನೆಲೆಯಲ್ಲಿ ಹೂಂದಿರುವ ಪ್ರೀತಿ-ಆದರಗಳ ಭಾವವನ್ನು ಒಟ್ಟುಗೂಡಿಸಿ ನೋಡಿದಲ್ಲಿ ಕುಟುಂಬಕ್ಕೂ ಒಂದು ಮೌಲ್ಯವಿರುತ್ತದೆ ಎನ್ನುವುದೇ ನನ್ನ ಖಚಿತ ಭಾವನೆ. ಹಾಗಾಗಿ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಯನ್ನೂ ಒಂದೊAದು ವಿಶಿಷ್ಟ ಗುಣದ ಸಂಕೇತವಾಗಿ ಚಿತ್ರಿಸಿ ತನ್ಮೂಲಕ ಒಟ್ಟುನ ಕೌಟುಂಬಿಕ ಮೌಲ್ಯವನ್ನು ಪ್ರತಿನಿಧಿಸಲು ಕವಿ ಇಲ್ಲಿ ಉದ್ದೇಶಪೂರ್ವಕವಾಗಿ ಪ್ರಯತ್ನಿಸಿದ್ದಾರೆ.

ರಾಮಾಯಣದ ಬಹುಮುಖ್ಯ ಆಯಾಮಗಳಲ್ಲಿ ಒಂದು ಅದು ಚಿತ್ರಸುವ ರಾಜಕೀಯ ವ್ಯವಸ್ಥೆಯನ್ನು ಒಳಗೊಂಡಿದೆ. ಆಯೋಧ್ಯೆ ಮೂಲತ: ಒಂದು ರಾಜ್ಯ ಅದಕ್ಕೆ ಎದುರಾಗಿ ಲಂಕಾ ಇನ್ನೊಂದು ರಾಜ್ಯ. ಈ ಎರಡು ರಾಜ್ಯಗಳಲ್ಲಿ ರಾಜರಿದ್ದಾರೆ. ಮಂತ್ರಿಗಳಿದ್ದಾರೆ. ಕಾನೂನು ಕಟ್ಟಳೆಗಳಿವೆ. ಇದನ್ನೆ ನಾವು ರಾಜಕೀಯ ವ್ಯವಸ್ಥೆ ಎಂದು ಭಾವಿಸಿದ್ದೇವೆ. ಆಯಾ ರಾಜ್ಯಗಳಲ್ಲಿ ಅಲ್ಲಿನ ರಾಜರುಗಳ ಸಾರ್ವಭೌಮತೆ ಸಷ್ಟಿಯಾಗಿದೆ. ಒಂದು ರಾಜ್ಯದ ರಚನೆ, ಅಲ್ಲಿಯ ಅರಮನೆ, ಅಂತ:ಪುರ ಆಡಳಿತ, ಗಡಿ, ಯುದ್ಧ, ಆಕ್ರಮಣ, ಸೋಲು-ಗೆಲವುಗಳ ಮೇಲೆ ನಿಂತಿರುತ್ತದೆ. ಇಲ್ಲಿಯೂ ಸಹ-ಸೂಕ್ಷö್ಮವಾಗಿ ನಾವು ಗಮನಿಸಿದಾಗಿ ರಾಮಾಯಣದ ಕೃತಿಯ ಉದ್ದಕ್ಕೂ ಹಲವು ರಾಜರಿದ್ದಾರೆ. ಅವರ ರಾಜನೀತಿಗಳಿವೆ. ಹಲವಾರು ದೇಶಗಲಲ ರಾಜರು ಬೇರೆ ಬೇರೆ ಕಾರಣಕ್ಕೆ ಇಲ್ಲಿ ಮುಖಾಮುಖಿಯಾಗುತ್ತಾರೆ. ಸಂಬAಧಗಳ ಮತ್ತು ಸಂಘಷಗಳ ಕಾರಣಕ್ಕೆ ªಖವÀÄÄಖಾಮುಖಿಯಾಗಿದ್ದಾರೆ. ಆದರೆ ಪ್ರಮುಖವಾದ ಮುಖಾಮುಖಿ ಆಯೋಧ್ಯೆ ಮತ್ತು ಲಂಕಾದ ನಡುವೆ ನಡೆದಿದೆ. ಇವೆರಡು ತುದಿಗಳಲ್ಲಿ ರಾಮ-ರಾವಣರ ರಾಜನೀತಿಗಳು ರಾಜಕೀಯ ದೃಷ್ಟಿಗಳು ಮೌಲ್ಯಗಳಾಗಿ ಮಾತನಾಡಿವೆ. ಒಬ್ಬ ರಾಜ ಮತ್ತು ಆತನ ಮೌಲ್ಯಗಪ್ರಜೆಗಳಿಗಾಗಿ ಇರಬೇಕೆ ಹೊರತು ತಮ್ಮ ವೈಯಕ್ತಿಕ ಆಸೆ ಆಮಿಷಗಳಿಗಾಗಿಯಲ್ಲಿ ರಾಮಾಯಣದ ರಾಜಕೀಯ ವ್ಯವಸ್ಥೆಯನ್ನು ಗಮನಿಸುವುದಾದರೆ ದಶರಥನ ನಿಲುವು, ರಾಮನ ಪಾಲನೆ, ಭರತನ ವೇದನೆ, ರಾವಣನ ಆಕ್ರಮಣ, ವಾಲಿ-ಸುಗ್ರೀವರ ಕಥನ, ಹನುಮನ ಸಹಕಾರ-ಈ ಎಲ್ಲ ಸಂದರ್ಭಗಳಲ್ಲಿ ರಾಜಕಾರಣ ಅತ್ಯಂತ ಪ್ರಬಲವಾಗಿ ಕಾಣಿಸಿಕೊಂಡಿದೆ. ಸಮಕಾಲೀನ ಸಂದರ್ಭವೂ ಸಹ ನಮ್ಮ ಮುಂದೆ ಇಂತಹ ಮೌಲ್ಯಗಳನ್ನು ನಡುವಿನ ಸಂಘರ್ಷವನ್ನು ಪ್ರಕಟಿಸುವುದು ಕಾಣುತ್ತದೆ.

ಕವಿ ವಾಲ್ಮೀಕಿ ಪ್ರಕೃತಿಯೂ ಸಹ ಒಂದು ಮೌಲ್ಯವಾಗಿ ಕಂಡಿದೆ. ರಾಮಾಯಣ ಅತಿ ಹೆಚ್ಚು, ಕಾವ್ಯವಾಗಿ ಕಂಡದ್ದು ಕಾಡಿನ ಸಂದರ್ಭದಲ್ಲಿ. ನಗರದ ಜನ ಕಾಡಿಗೆ ಬಂದು ಅಲಿನ ಗಿಡ, ಮರ, ಪಕ್ಷಿಗಳನ್ನೊಳಗೊಂಡಿರುವ ರೀತಿ ಸ್ಪಷ್ಟವಾಗುತ್ತದೆ. ನದಿ, ಪರ್ವತ, ಶಿಲೆ, ಶಿಖರಗಳು ಪಾತ್ರಗಳೊಂದಿಗೆ ಸಜೀವ ಸಂಬAಧ ಹೊಂದಿರುವ ರೀತಿಯಲ್ಲಿ ಚಿತ್ರಿಸಿರುವುದು ಕಂಡುಬರುತ್ತದೆ. ನೂರಾರು ಬಗೆಯ ಸಸ್ಯರಾಶಿಗಳು ರಾಮಾಯಣದಲ್ಲಿ ಚಿತ್ರಿವಾಗಿವೆ, ಔಷಧೀಯ ಸಸ್ಯಗಳು ದಾಖಲಾಗಿವೆ. ಕಿಷ್ಕಿಂದಡಯAತಹ ಕಾಡಿನಲ್ಲಿ ಇಂತಹ ವನರಾಶಿಗಳು ಹೇರಳವಾಗಿ ಇರುವಂತೆ ಚಿತ್ರಣಗೊಂಡಿವೆ, ಪ್ರಕೃತಿಯೊಂದಿಗೆ ಸಾಮರಸ್ಯವಿದ್ದಾಗಲೇ ಜಗತ್ತಿನಲ್ಲಿ ಸಮತೋಲನ ಸಾಧ್ಯವೆನ್ನುವುದು ಕವಿಯ ಆಶಯ, ಇಂದಿನ ಕಾಂಕ್ರೀಟ್ ಮತ್ತು ಪ್ಲಾಸ್ಟಿಕ್ ಜಗತ್ತಿನಲ್ಲಿ ರಾಮಾಯಣದಲ್ಲಿ ಪ್ರಕೃತಿಯೊಂದಿಗೆ ಮನುಷ್ಯ ಹೊಂದಿರುವ ಸಾವಯವ ಸಂಬAಧದ ಆಯಾಮಗಳು ಒಂದು ಮೌಲವ್ಯವಾಗಿ ಕಾಣುತ್ತದೆ. ರಾಮಾಯಣದ ಪಾತ್ರಗಳು ಹೀಗೆ ಪ್ರಕಟಿಸುವ ಮೌಲ್ಯಗಳ ಶ್ರೀಮಂತಿಕೆಯ ದಟ್ಟವಾದ ಛಾಯೆಯಲ್ಲಿ ಈ ಕಾವ್ಯದಲ್ಲಿ ಬರುವ ಪ್ರಾಣಿಪಕ್ಷಿಗಳನ್ನು ಪ್ರಭಾವಿಸದೇ ಬಿಡದು. ರಾಮನಿಗೆ ಬೆಂಬಲವಾಗಿ ನಿಲ್ಲುವ ಕಪಿಸೈನ್ಯ, ಸೀತೆಯನ್ನು ರಾವಣನಿಂದ ಬಿಡಿಸಲು ಹೋರಾಡುವ ಜಟಾಯು, ಅದರ ಸಹೋದರ ಸಂಪಾತಿ-ಹೀಗೆ ಸಕಲ ಜೀವಸಂಕುಲವೂ ಪ್ರಕೃತಿ ಸಮಸ್ತವೂ ಅನನ್ಯವಾದ ಜೀವಪರತೆಯಿಂದ ಸುಳಿದುಹೋಗುತ್ತವೆ. ಹದಿನಾಲ್ಕು ವರ್ಷಗಳ ವನವಾಸದ ಅವಧಿಯಲ್ಲಿ ರಾಮ-ಸೀತೆ-ಲಕ್ಷö್ಮಣರಿಗೆ ಪ್ರಕೃತಿಯೇ ಜೊತೆ ತಾಯಿಯ ಮಡಿಲನ್ನು ಬಿಟ್ಟು ಅವರು ಸೇರಿದ್ದು ಪ್ರಕೃತಿಮಾತೆಯ ಮಡಿಲನ್ನು. ಪ್ರಕೃತಿಯೊಂದಿಗೆ ಅವರು ಹೊಂದಿರುವ ಭಾವನಾತ್ಮಕ ಬೆಸುಗೆಯ ಅಂಶಗಳನ್ನೂ ಕಾವ್ಯ ಅಲ್ಲಲ್ಲಿ ಬಿಂಬಿಸುತ್ತದೆ.

ರಾಮಾಯಣ ಒಂದು ಸಾಂಸ್ಕೃತಿ ಮಹಾಕಾವ್ಯ ಎಂಬುದರಲ್ಲಿ ಎರಡಿಲ್ಲ. ಹಲವು ಜಾತಿ-ಜನಾಂಗಗಳು, ಹಬ್ಬ-ಉತ್ಸವಗಳು, ಆಚರಣಿ, ಸಂಪ್ರದಾಯ, ನಂಬಿಕೆಗಳು, ನ್ಯಾಯ ನೀತಿಗಳ ವ್ಯವಸ್ಥೆ ಮುಂತಾದ ಅಂಶಗಳು ಪಾತ್ರಗಳ ಸಂದರ್ಭಗಳ ಮೂಲಕ ಗೋಚರಿಸುತ್ತವೆ. ಬದುಕು ರೂಪುಗೊಂಡಿರುವುದೇ ಇಂತಹ ಸಂಸ್ಕೃತಿಗಳ ಮೂಲಕ ಕವಿಗೆ ತನ್ನ ಕಾವ್ಯವನ್ನು ಸಾಂಸ್ಕೃತಿಕವಾಗಿ ಕಟ್ಟಬೇಕೆಂಬ ಹಂಬಲವಿತ್ತು. ಅದಕ್ಕಾಗಿಂಯೇ ರಾಮಾಯಣದ ಸಂದರ್ಭದಲ್ಲಿ ಇಂತಹವುಗಳನ್ನು ಹೇರಳವಾಗಿ ಬಳಸಿಕೊಂಡಿದ್ದಾರೆ. ಪ್ರತಿಯೊಂದು ಪಾತ್ರದ ಹಿನ್ನಲೆಯಲ್ಲೂ ಕೆಲಸ ಮಾಡುವ ನಂಬಿಕೆಗಳು ಮುಖ್ಯವಾಗಿವೆ. ನೈತಿಕ ಮೌಲ್ಯವು ಕಾವ್ಯದ ಉದ್ದಕ್ಕೂ ಪ್ರಧಾನವಾಗಿ ಬಿಂಬಿತವಾಗಿರುವುದು ಕಾಣತ್ತುದೆ. ಯಾವುದೇ ಪಾತ್ರವು ನೈತಿಕತೆಯನ್ನು ಕಳೆದುಕೊಂಡ, ತನ್ನಲ್ಲಿ ಪರು ನಂಬಿಕೆ ಕಳೆದುಕೂಂಡ ತಕ್ಷಣ ಚಡಪಡಿಸಲು ತೊಡಗಿ ಅದಕ್ಕಾಗಿ ಶಿಕ್ಷಯನ್ನು ಅನುಭವಿಸುತ್ತದೆ ಕೊನೆಗೆ ಪಶ್ಚಾತಾಪದಿಂದ ಬಿಡುಗಡೆಗೊಳ್ಳಲು ಹವಣಿಸುತ್ತವೆ. ಇದಕ್ಕೆ ರಾಮಾಯಣದಲ್ಲಿ ದಶರಥ ರಾಮ, ಸೀತೆ, ರಾವಣ, ಭರತ, ವಿಭೀಷಣ, ಲಕ್ಷö್ಮಣ ಎಲ್ಲರೂ ಸಾಕ್ಷಿಯಾಗಿದ್ದಾರೆ. ಬದುಕು ಮುಂದಿಡುವ ಸವಾಲುಗಳಿಗೆ ಸಂಧರ್ಭಗಳು ಸೃಷ್ಟಿಸುವ ನೈತಿಕ ಸಂಘರ್ಷಗಳಿಗೆ ಒಡ್ಡಿಕೊಳ್ಳುತ್ತಲೇ ಪಾತ್ರಗಳು ಬದುಕಿನ ಗುರಿಯೆಡೆಗೆ ಚಿತ್ತವೆಟ್ಟು ಚಲಿಸಿವೆ. ಕೇವಲ ಒಂದು ಕುಟುಂಬದ ಅಥವಾ ಎರಡು ರಾಜ್ಯಗಳ ಕಥೆಯಾಗಿ ಉಳಿಯದೆ ರಾಮಾಯಣವು ಇಂದಿಗೂ ಪ್ರಸುತ್ತವಾಗಲು ಅದು ಹೊಂದಿರುವ ವಿಶಾಲವಾದ ಭಿತ್ತಿಯೇ ಕಾರಣ, ಅದು ಸಾಕಾರಗೊಳಿಸುವ ಮೌಲೈಗಳ ಸಾರ್ವತ್ರಿಕತೆ ಅದನ್ನು ಭಾರತೀಯರ ಮನಸ್ಸುಗಳಲ್ಲಿ ಚಿರಸ್ಥಾಯಿಯಾಗುವಂತೆ ಮಾಡಿದೆ.

ಕಥಾನಾಯಕನೂ ಶ್ರೀಮನ್ಮಮಹಾವಿಷ್ಣುವಿನ ಅವತಾರವೆಂದು ಪರಿಗಣಿತನಾದವನೂ ಆದ ಶ್ರೀರಾಮಚಂದ್ರ ಕೃತಿ ಪ್ರಕಾಶಿಸುವ ಹಲವಾರು ಮೌಲ್ಯಗಳ ಕೇಂದ್ರದಲ್ಲಿದ್ದಾನೆ. ಮಾತಾ-ಪಿತೃವಾಕ್ಯ ಪರಿಪಾಲಕನಾಗಿ, ದಾಂಪತ್ಯ ಧರ್ಮವನ್ನು ನಿರ್ವಹಿಸುವ ಯೋಗ್ಯಪತಿಯಾಗಿ, ಭ್ರಾತೃಪ್ರೇಮದ ಸಾಕಾರಮೂರ್ತಿಯಾಗಿ, ಕ್ಷತ್ರಿಯ ಧರ್ಮವನ್ನು ಪಾಲಿಸುವ ಧರ್ಮನಿಷ್ಠನಾಗಿ, ರಾಜಧರ್ಮವನ್ನು ಪಾಲಿಸುವ ಪ್ರಜಾಪಲಕನಾಗಿ, ಅಧರ್ಮವನ್ನು ಮೆಟ್ಟಿನಿಲ್ಲುವ ಪರಾಕ್ರಮಿಯಾಗಿ, ಪುತ್ರ ವಾತ್ಸಲ್ಯವನ್ನು ಸೂಸುವ ಪ್ರೇಮಮಯಿಯಾಗಿ ಶ್ರೀರಾಮ ಭಾರತೀಯ ಸಂಸ್ಕೃತಿ ಸ್ಥಾಪಕವಾದ, ಒಪ್ಪಿತವಾದ ಅತ್ಯುತ್ಕೃಷ್ಟ ಮೌಲ್ಯಗಳ ಸಾಕಾರರೂಪವಾಗಿ ಪ್ರಕಟಗೊಳ್ಳುತ್ತಾನೆ. ಇವನ ಪ್ರಭಾವ ವಲಯದಲ್ಲಿ ಅರಳುವ ಉಳಿದ ಪಾತ್ರಗಳೂ ಕೂಡಾ ಸತ್ವಶೀಲವಾಗಿ ಪ್ರಕಟಗೊಳ್ಳುತ್ತವೆ. ರಾಮಾಯಣದ ಮುಖ್ಯ ಭೂಮಿಕೆಯಲ್ಲಿರುವ ಸಮಸ್ಯೆಗಳ ಪೈಕಿ ಒಂದು ಸೋದರ ಸಂಬAಧದ ಸಮಸ್ಯೆಯಾಗಿದೆ. ಇದು ಅಯೋಧ್ಯೆಯಲ್ಲಿ ಇದ್ದಂತೆ ಲಂಕೆಯಲ್ಲಿಯೂ ಇದೆ, ಕಿಷ್ಕಿಂಧೆಯಲ್ಲಿಯೂ ಇದೆ.

ಅಯೋಧ್ಯೆಯಲ್ಲಿ ಸೋದರರಲ್ಲಿ ಮನೆಮಾಡಿದ್ದ ಭ್ರಾತೃಪ್ರೇಮದ ಭಾವ ಅವರನ್ನು ತ್ಯಾಗದ ಹಾದಿಗೆ ಪ್ರೇರೇಪಿಸಿತು. ಸಂಘರ್ಷಕ್ಕೆ ಎಡೆಯಾಗದ ರೀತಿಯಲ್ಲಿ ಸಮಸ್ಯೆ ಬಗೆಹರಿದಿತ್ತು. ಭಾರತ ಮತ್ತು ಲಕ್ಷö್ಮಣರ ತಾಗ್ಯವನ್ನು ಇಲ್ಲಿ ಗಮನಿಸಬಹುದು. ಲಂಕೆಯಲ್ಲಿ ವಿಭೀಷಣ ತನ್ನ ಅಣ್ಣನ ಶಕ್ತಿಗೆ ಹೆದುರುತ್ತಾನೆ. ರಾಮನಿಗೆ ಸಹಾಯಹಸ್ತವನ್ನು ಚಾಚುತ್ತು ತನ್ನ ಅಣ್ಣನನ್ನು ನಿವಾರಿಸಿಕೊಂಡು ಲಂಕೆಗೆ ಅಧಿಪತಿಯಾಗುವುದು ಅವನ ಗುರಿ. ಕಿಷ್ಕಿಂಧೆಯಲ್ಲಿಯೂ ಸೋದರರ ನಡುವಿನ ಸಮಸ್ಯೆಯಿದೆಯಾದರೂ ಇಲ್ಲಿನದು ಸುಲಭವಾಗಿ ಬಗೆಹರಿಯುವ ಸಮಸ್ಯೆಯಲ್ಲ. ಸುಗ್ರೀವ ಮತ್ತು ವಾಲಿ ಮಾಡಿದ್ದು ಅವರವರ ದೃಷ್ಟಿಯಲ್ಲಿ ಸರಿಯೇ. ತಪ್ಪು ಯಾರದ್ದು ಎಂಬುದರ ತೀರ್ಮಾನವನ್ನು ಕವಿಯು ಧರ್ಮಕ್ಕೇ ಬಿಟ್ಟಿದ್ದಾನೆ. ವಾಲಿಯನ್ನು ಕ್ಷತ್ರಿಯನಾದ ರಾಮ ಮರೆಯಲ್ಲಿ ನಿಂತು ಕೊಂದದ್ದು ಎಷ್ಟು ಸರಿ ? ಈ ಪ್ರಶ್ನೆಗೆ ಉತ್ತರವನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ಅರ್ಥಾತ್ ವಾಲಿಯ ಕೃತ್ಯ ಅಧರ್ಮ ಎನ್ನುವುದರ ಆಧಾರದ ಮೇಲೆ ಕಂಡುಕೊಳ್ಳಬೇಕಾಗುತ್ತದೆ. ಹೀಗೆ ಭ್ರಾತೃಭಾವದ ವಿವಿಧ ಎಳೆಗಳ ನಡುವಿನ ಸಂಘರ್ಷದಲ್ಲಿ ರಾಮಾಯಣವು ರಾಮ ಮತ್ರವನ ತಮ್ಮಂದಿರನ್ನು ಒಂದು ಬೆಳಕಿನಲ್ಲಿಯೂ ರಾವಣ-ವಿಭೀಷಣ ಮತ್ತು ವಾಲಿ-ಸುಗ್ರೀವರನ್ನು ಇನ್ನೊಂದು ನೆಲೆಯಲ್ಲಿಯೂ ಇರಿಸುತ್ತದೆ. ಸೋದರಭಾವದ ಮೌಲ್ಯಕ್ಕೆ ಧರ್ಮದ ಅನುಮೋದನೆಯ ಬಲ ಒದಗಿದೆ ಲಕ್ಷö್ಮಣ-ಭರತ ತಮ್ಮ ಅಣ್ಣನ ಮೇಲಿಟ್ಟರು ಅನನ್ಯವಾದ ಗೌರವ ಭಾವನೆಯಿಂದ ಆಚಂದ್ರಾರ್ಕವಾಗಿ ಭಾರತೀಯ ಜನಮಾನಸದಲ್ಲಿ ಬೆರೆತು ಹೋಗಿದ್ದಾರೆ. ಅಣ್ಣನ ಅನುಯಾಯಿಯಾಗಿ ಅವನ ಕಷ್ಟ ಸುಖಗಳಲ್ಲಿ ಜೊತೆಯಾಗುವ ಲಕ್ಷö್ಮಣ ಅಣ್ಣ ತಂದೆಗೆ ಸಮಾನ ಎನ್ನುವ ಭಾರತೀಯ ದೃಷ್ಟಿಕೋನದ ಪ್ರಕಟರೂಪವಾಗುತ್ತಾನೆ. ಅಣ್ಣನನ್ನು ಕಳೆದುಕೊಂಡು ಗಳಿಸಿಕೊಳ್ಳುವ ರಾಜ್ಯ ಸಿಂಹಾಸನಗಳು ಅತ್ಯಲ್ಪವೇ ಸರಿ ಎಂಬ ಭಾವಕ್ಕೆ ಬದ್ಧವಾಗಿ ತನ್ನ ಅಣ್ಣನ ಪಾದುಕೆಗಳನ್ನು ತಂದು ಅವುಗಳನ್ನೇ ಸಿಂಹಾಸನದಲ್ಲಿರಿಸುವ ಭರತ ಭ್ರಾತೃಗೌರವದ ಪ್ರಭೆಗೆ ಚಿನ್ನದ ಮೆರುಗನ್ನು ಕೊಡುತ್ತಾನೆ.

ರಾಮನ ಮಡದಿ ಜಾನಕಿ ದಾಂಪತ್ಯನಿಷ್ಠೆಗೆ ದ್ಯೋತಕವಾಗಿ ನಿಲ್ಲುತ್ತಾಳೆ. ಒಳ್ಳೆಯ ಮತ್ತು ಕೆಡುಕಿನ ಸಂದರ್ಭಗಳೆರಡರಲ್ಲೂ ಇವಳು ರಾಮನ ನೆರಳಾಗಿರುತ್ತಾಳೆ. ಇವಳ ನಿಷ್ಠೆಯ ಪರೀಕ್ಷೆಯ ಮೂಲಕ ವಾಲ್ಮೀಕಿ ಸೀತೆಯ ಗಟ್ಟಿತನವನ್ನು ಎತ್ತಿ ಹಿಡಿಯುತ್ತಾನೆ. ದಾಂಪತ್ಯ ಧರ್ಮವನ್ನು ಸೀತೆಯಂತೆಯೇ ವ್ರತಿಗಳ ರೂಪದಲ್ಲಿ ಪಾಲಿಸುವ ಮತ್ತೆರಡು ಪಾತ್ರಗಳೆಂದರೆ ಊರ್ಮಿಳೆ ಮತ್ತು ಮಂಡೋದರಿ. ಸೀತೆಗಾದರೂ ರಾಮನ ಜೊತೆಯಿದೆ. ಆದರೆ ಊರ್ಮಿಳೆಗೆ ಆ ಆಸೆರಿಯಿಲ್ಲ. ಹೀಗಿದ್ದೂ ಊರ್ಮಿಳೆ ಗೆಲ್ಲುತ್ತಾಳೆ. ರಾಕ್ಷಸನ ಮಡದಿಯಾದರೂ ಮಂಡೋದರಿ ಘನವಂತೆ. ಪತಿಯ ಪಾಪದ ಕರಿನೆರಳು ಅವಳ ಸತ್ವಶೀಲತೆಗೆ ಕಳಂಕ ತುರುವುದಿಲ್ಲ. ಅದನ್ನು ಮೀರಿ ನಿಲ್ಲುವಂತಹ ಗುಣವಂತೆ ಮಂಡೋದರಿ.

ಭಕ್ತಿಭಾವದ ಮೇರುಮೂರ್ತಿಯಾಗಿ ಹೊಳೆಯುವ ಹನುಮಂತ ಶ್ರೀರಾಮಾಯಣ ಮಹಾಕಾವ್ಯದ ಅವಿಸ್ಮರಣೀಯ ಪಾತ್ರ ರಾಮನ ಬಂಟನಾಗಿ, ಅವನನ್ನು ತನ್ನ ಹೃದಯದಲ್ಲಿರಿಸಿಕೂಂಡು ಸದಾಕಾಲವೂ ಅವನ ಸೇವೆಗೇ ತನ್ನ ಜೀವವನ್ನು ಮಿಸಲಿಡುವ ಹನುಮಂತ ಕೈಂಕರ್ಯಭಾವದ ಅಪ್ರತಿಮಮೂರ್ತಿ. ಸೀತೆಮಾತೆ ಲವಕುಶರಿಗೆ ಮಾತ್ರವಲ್ಲದೇ ಅಂಜನೇಯನಿಗೂ ತಾಯಿಯಂತೆಯೇ ಸರಿ. ಅವಳ ಬಗ್ಗೆ ಹನುಮಂತನಿಗೆ ಅಷ್ಟುಪೂಜ್ಯಭಾವನೆ, ಭಕ್ತಿಯನ್ನು ಒಂದು ಮೌಲ್ಯವಾಗಿ ಪರಿಗಣಿಸುವುದಾದರೆ ಹನುಮಂತ ಅದರ ಸಾರಸರ್ವಸ್ವವಾಗುತ್ತಾನೆ. ಕ್ಯಾವದಲ್ಲಿ ಹನುಮಂತನ ಪ್ರವೇಶದ ಸಂದರ್ಭದಿAದ ಹಿಡಿದು ಕೊನೆಯವರೆವಿಗೂ ಅವನ ಭಕ್ತಿಭಾವವು ಮತ್ತಷ್ಟ ದೀಪ್ತವಾಗುತ್ತಲೇ ಸಾಗುತ್ತದೆ. ಅವನ ಅಗಾಧ ವ್ಯಕ್ತಿತ್ವದ ಮುಂದೆ ಊಳಿದವು ಸಾಮಾನ್ಯವೆನಿಸುತ್ತವೆ.

ಹೀಗೆ ರಾಮಾಯಣ ಮಹಾಕಾವ್ಯವು ಸ್ಪಷ್ಟವಾಗಿ ತೋರುವಂತೆ ಎರಡು ಕುಟುಂಬಗಳ ನಡುವಿನ ಸಂಘರ್ಷವನ್ನು ಚಿತ್ರಿಸುತ್ತಲ್ಲೇ ತನ್ನ ವಿಶಾಲವಾದ ಭಿತ್ತಿಯಲ್ಲಿ, ಆಳದಲ್ಲಿ ಹಲವಾರು ಮನೋಧರ್ಮಗಳ ಸಂಘರ್ಷದ ಮೂಲಕ ಪಾಕಗೊಳ್ಳುವ ಒಂದು ಹದವನ್ನು ಕಾಣಿಸುತ್ತದೆ. ಈ ನಿಟ್ಟಿನಲ್ಲಿ ಕವಿಯು ಪಾತ್ರಗಳನ್ನು ಸೃಷ್ಟಿಸಿ ಅವುಗಳ ಮೂಲಕ ಬದುಕಿನ ಶಾಶ್ವತ ಸತ್ಯಗಳನ್ನು ಸಹೃದಯರ ಮುಂದೆ ಅನಾವರಣಗೊಳಿಸುತ್ತಾನೆ. ಇಲ್ಲಿ ಕವಿಯ, ಬದುಕಿನ ಸೂಕ್ಷö್ಮವಾದ ಪರೀಕ್ಷಕ ದೃಷ್ಟಿಯಿಂದ ಯಾರೂ ಹೊರತಲ್ಲ.ರಾಮ ರಾವಣರಿಬ್ಬರಿಗೂ ಈ ಮಾತು ಸಮನಾಗಿಯೇ ಅನ್ವಯಿಸುತ್ತದೆ. ಇಡೀ ಕಾವ್ಯವನ್ನು ಅವರಿಸುವ ರಾಮ, ಲಕ್ಷ÷್ಣಣ, ಸೀತೆ ಮುಂತಾದ ಪಾತ್ರಗಳಿಂದ ಹಿಡಿದು ಕೆಲವೇ ಹೊತ್ತು ಪ್ರಕಟವಾಗಿ ಮರೆಯಾಗುವ ಶಬರಿಯಂತಹ ಪಾತ್ರವೂ ಈ ಕವಿನಿಕೃಷ್ಟದ ಮೂಲಕ ಹಾದು ತನ್ನ ನಿಜ ಸತ್ವವನ್ನು ಪ್ರಕಟಿಸಿ ಮುಂದಡಿಯಿಡುತ್ತದೆ. ಒಟ್ಟಾರಿಯಾಗಿ ಇಂದಿಗೂ ಪ್ರಸ್ತುತವಾದ ಮತ್ತು ಬದುಕಿನ ಕೇಂದ್ರದಲ್ಲಿರುವ ಅನೇಕ ಜೀವಪರವಾದ ಮೌಲ್ಯಗಳ ಆಕರವಾಗಿ ರಾಮಾಯಣವು ಈ ಹೊತ್ತಿಗೂ ತನ್ನ ಪ್ರಾಮುಖ್ಯವನ್ನು ಸಾರುತ್ತಲೇ ಸಾಗಿದೆ.

© 2020, Shri Maharushi Valmiki Gurupeeta | All Rights Resever