ವಾಲ್ಮೀಕಿ-ನಾಯಕರು : ಒಂದು ಅವಲೋಕನ

ಡಾ. ಎಚ್.ಗುಡದೇರ‍್ವಪ್ಪ

ಆದಿಕವಿ ಮಹರ್ಷಿ ವಾಲ್ಮೀಕಿಯಿಂದ ರಚಿತವಾದ ರಮಾಯಣದ ಯವುದೇ ಮಗ್ಗುಲುಗಳನ್ನು ಒಳಹೊಕ್ಕು ನೋಡಿದರೆ ಆದರ್ಶ ತತ್ವಗಳೇ ಎದ್ದುಕಾಣುತ್ತವೆ. ದಶರಥ ಆದರ್ಶತಂದೆಯಾಗಿ, ರಾಮಆದರ್ಶ ಪತಿಯಾಗಿ ಹಾಗೂ ಪ್ರಜಾಪರಿಪಲಕನಾಗಿ, ಲಕ್ಷ÷್ಣಣ ಆದರ್ಶ ಸಹೋದರನಾಗಿ, ಸೀತೆ ಆದರ್ಶ ಸತಿಯಾಗಿ, ಹನುಮಂತ ಆದರ್ಶ ಸ್ನೇಹತನಾಗಿ, ಚಿತ್ರಿಸಲಾಗಿದೆ. ಇಡೀ ವಿಶ್ವವೇ ಬಯಸುವ ಸ್ವಾತಂತ್ರö್ಯ ಸಮಾನತೆ, ಸಹೋದರತೆಯ ತತ್ವವನ್ನು ಈ ಮಹಾಕಾವ್ಯದ ಮೂಲಕ ವಿಶ್ವಕ್ಕೆ ಸಾರಿದ ವಾಲ್ಮೀಕಿ ತತ್ವಜ್ಞಾನಿಯಾಗಿ, ಮಾನವೀಯ ಮೌಲ್ಯಗಳ ಹರಿಕಾರನಾಗಿ ಕಾಣುತ್ತಾನೆ. ಇವನ ಜೀವನವೇ ಪ್ರಗತಿಯ ಹಾದಿಯಲ್ಲಿ ಅರಿವಿನ ಮಾರ್ಗದಲ್ಲಿ ಸಾಗಿದೆ.

ಕತ್ತಲೆಯಿಂದ ಬೆಳಕಿನಡೆಗೆ:- ಧನುರ್ವಿದ್ಯಾಪಾರಂಗತನೂ, ಸಾಹಸಿಯೂಆದ, ವಾಲ್ಮೀಕಿಯ ಮೂಲ ಹೆಸರು ರತ್ನಾಕರ, ಗಂಗಾನದಿಯ ಉಪನದಿಯಾದ ತಮಸಾ ನದಿಯತೀರದ ಕಾಡಿನಲ್ಲಿ ವಾಸಿಸುತ್ತಿದ್ದನು. ನಂತರ ಭೇಟೆಗಾರರ ಯಜಮಾನನಾದನು. ತದನಂತರ ಬದುಕು ಬದಲಾಯಿತು, ವಿಚಾರಗಳು ಮೈತುಂಬಿದವು, ಜ್ಞಾನ ಸಂಪದನೆಗಾಗಿ ತಪಸ್ಸನ್ನಾಚರಿಸಿದನು. ಅವನ ಸುತ್ತಲೂ ವಲ್ಮೀಕಿ (ಹುತ್ತು) ಬೆಳೆಯಿತು. ಇದರಿಂದ ಈತನಿಗೆ ವಾಲ್ಮೀಕಿ ಎಂದು ನಾಮಕರಣ ಮಾಡಿದರು. ನಂತರ ವಾಲ್ಮೀಕಿ ರಾಮಾಯಣ ರಚಿಸಿದನೆಂಬುದು ಐತಿಹ್ಯ.

ರಾಮಾಯಣ ಸರ್ವಕಲಕ್ಕೂ ಪೂಜ್ಯನೀಯ ಮಹಾಕಾವ್ಯ, ರತ್ನಕರನ ಬದುಕಿನಲ್ಲಿ ಮಹತ್ತರವಾದ ತಿರುವೆಂದರೆ ಬೇಟೆಯಿಂದಾಗುವ ಹಿಂಸೆ-ನೋವು-ವಿಷಾದ ಇವು ಅವನ ಮನ:ಪರಿವರ್ತನೆಗೆ ಕಾರಣವಾದವು. ತ್ರೇತಾಯುಗದ ಮೂಲ ಸಂವೇದನೆಯನ್ನು, ಬದುಕಿನ ಮೌಲ್ಯವನ್ನು ಸೋಲು-ಗೆಲವು, ನೋವು-ನಲಿವು ಇವೆಲ್ಲವುಗಳನ್ನು ಒಟ್ಟಾಗಿ ಹಿಡಿದಿಟ್ಟ ದಾರ್ಶನಿಕ ಶಕ್ತಿ ವಾಲ್ಮೀಕಿಯದು. ಅದು ರಾಮಾಯಣ ರೂಪದಲ್ಲಿ ಹೊರಬಿತ್ತು, ಶ್ರೀರಾಮನೇ ಗಭೀಣಿ ಸೀತೆಯನ್ನು ಸಂಶಯಿಸಿ ಕಾಡಿಗಟ್ಟಿದಾಗ ಆಕೆಗೊಂದು ನೆಲೆ ನೀಡಿದವನು ವಾಲ್ಮೀಕಿ . ಲವಕುಶರ ಜನನ, ಶಿಕ್ಷಣ ಎಲ್ಲವೂ ನಡೆದಿದ್ದು ವಾಲ್ಮೀಕಿ ಕುಟೀರದಲ್ಲಿ, ಲವಕುಶರಿಗೆ ರಾಮಚರಿತೆಯನ್ನು ಕಲಿಸಿ, ರಾಮನೆದುರು ಆಡಿಸಿ ತಂದೆ-ಮಕ್ಕಳು, ಹೆಂಡತಿಯನ್ನು ಒಂದುಗೂಡಿಸಿದ ವಾಲ್ಮೀಕಿಯದು ಅವ್ವನ ಸಂಸ್ಕೃತಿ. ವಾಲ್ಮೀಕಿಯಿಂದ ರಚಿತವಾದ ರಾಮಾಯಣದ ಶ್ಲೋಕಗಳ ಸಂಖ್ಯೆ ಎಂಟು ಸಾವಿರ. ನಂತರಕಾಲದಲ್ಲಿ ಸಾವಿರಾರು ಶ್ಲೋಕಗಳು ಸೇರ್ಪಡೆಗೊಂಡು ಇಂದು ರಾಮಾಯಣದ ಶ್ಲೋಕಗಳ ಸಂಖ್ಯೆ ಇಪ್ಪತ್ತುನಾಲ್ಕು ಸಾವಿರ ಆಗಿದೆ. ಅದರಲ್ಲಿ ಏಳು ಕಾಂಡಗಳಿವೆ. ಮೂಲತ ಇದು ಪೌರಾಣಿಕ ಮಹಾಕಾವ್ಯ, ಕವಿಯಕಲ್ಪನೆಯ ಕೂಸು ಹಾಗಾಗಿ ಕಾವ್ಯವನ್ನು ಆಸ್ವಾದಿಸುವುದು ಮಾತ್ರವಲ್ಲದೆ ಅದರ ಆದರ್ಶ ಗುಣಗಳನ್ನು ಮೆಚ್ಚಿಕೊಳ್ಳುವ ಪರಂಪರೆಯನ್ನು ಮುಂದುವರೆಸಿಕೊAಡು , ಹೋಗಬೇಕಿದೆ.

ವಾಲ್ಮೀಕಿ ರಾಮಾಯಣದ ಪ್ರೇರಣೆಯಿಂದಾಗಿ ಇಂದು ಜಗತ್ತಿನಲ್ಲಿ ಆರು ಸಾವಿರ ರಾಮಾಯಣಗಳನ್ನು ರಚಿಸಲಾಗಿದೆ. ಅನೇಕ ಭಾರತೀಯ ಭಾಷೆಗಳಲ್ಲಿ ಹಾಗೂ ಜರ್ಮನಿ, ಇಟಲಿ, ಪ್ರೆಂಚ್, ಇಂಗ್ಲೀಷ್ ಇನ್ನು ಮೊದಲಾದ ಭಾಷೆಗಳಲ್ಲಿ ರಾಮಾಯಣಗಳು ರಚನೆಯಾಗಿವೆ. ತೊರವೆರಾಮಾಯಣ, ಕುವೆಂಪು ರಾಮಾಯಣದರ್ಶನಂ ಹಾಗೂ ವೀರಪ್ಪಮೊಯ್ಲಿ ಅವರ ಶ್ರೀ ರಾಮಾಯಣ ಮಹಾನ್ವೇಷಣಂ ಇವೆಲ್ಲಕ್ಕೂ ಸ್ಫೂರ್ತಿ ಮೂಲ ರಾಮಾಯಣ.

ನಾಯಕ ಜನಾಂಗದಲ್ಲಿ ವಾಲ್ಮೀಕಿ ಅಷ್ಟೆ ಅಲ್ಲ ಅನೇಕ ಪುರಾಣ ಪುರುಷರು, ವೀರಪರಾಕ್ರಮಿಗಳು, ಸ್ವಾತಂತ್ರö್ಯ ಹೋರಾಟಗಾರರಿದ್ದಾರೆ. ಅವರಿಲ್ಲರನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಾಗುತ್ತದೆ. ಪುರಾಣ ಪುರುಷ ಬೇಡರಕಣ್ಣಪ್ಪನು ಶಿವನಿಗೆ ಕಣ್ಣುಗಳನ್ನು ನೀಡಿದ ಮಹಾನ್ ವ್ಯಕ್ತಿ ತನ್ನ ಹೆಬ್ಬೆರಳನ್ನೆ ಗುರುವಿಗೆ ಕಾಣಿಕೆಯಾಗಿ ನೀಡಿದ ಏಕಲವ್ಯ ವೀರವ್ಯಕ್ತಿ. ಶ್ರೀರಾಮನಿಗಾಗಿ ಕಾದುಕುಳಿತು ಹಣ್ಣುಗಳನ್ನು ನೀಡಿದ ಮುಗ್ಧೆ ಶಬರಿ, ಅಷ್ಟೇ ಅಲ್ಲ ಭಾರತೀಯ ಸಾಂಸ್ಕೃತಿಕ ಪರಂಪರೆಗೆ ಬೇಡಜನಾಂಗದ ಕೊಡುಗೆ ಸ್ಮರಣೇಯ, ಮೌರ್ಯರ ಕಾಲದಿಂದ ಹಿಡಿದು ವಿಜಯನಗರ ಕಾಲದವರೆಗೆ ಬೇಡರು ರಕ್ಷಣಾಧಿಕಾರಿಗಳಾಗಿ, ಅಧೀನಾಧಿಕಾರಿಗಳಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸಿದರು. ಪರಿಶ್ರಮ ಮತ್ತು ಸ್ವಂತ ಬಲದಿಂದ ರೂಪಗೊಂಡು ಪಾಳೆಯಾರರಾಗಿ ಮಾನ್ಯತೆ ಪಡೆಯುತ್ತಿದ್ದರು.

ರಾಷ್ಟçಕ್ಕಾಗಿ ಪ್ರಾಣೆರ್ಪಣೆಯನ್ನು ಮಾಡಿಕೊಂಡ ವಿಷಯವನ್ನು ಇತಿಹಾದ ಹೇಳುತ್ತದೆ. ಇದು ಬೇಡರಚರಿತ್ರೆಯೇ ಆಗಿದೆ. ಚಿತ್ರದುರ್ಗ, ತರಿಕರೆ, ಸುರಪುರ ಉಮ್ಮತ್ತೂರು ಮುಂತಾದ ಪಾಳೆಯಗಾರರು ಅವರ ಅಧಿಕರವಧಿಯಲ್ಲಿ ಜನಪರವಾಗಿ ಮಾಡಿದ ಕೆಲಸ-ಕಾರ್ಯಗಳು, ಗುರುಮಠಗಳೊಂದಿಗಿದ್ದ ಅವಿನಾಭಾವ ಸಂಬAಧದ ಬಗ್ಗೆ ದಾಖಲೆಗಳು ತಿಳಿಸುತ್ತವೆ. ಚಿತ್ರದುರ್ಗವನ್ನಾಳಿದ ಮತ್ತಿತಿಮ್ಮಣ್ಣನಾಯಕ, ಪ್ರಗತಿಪರದೊರೆ ಹಾಗೂ ಚಿತ್ರದುರ್ಗದಲ್ಲಿ ಮುರುಘಾಮಹಾಸ್ವಾಮಿಗಳನ್ನು ತನ್ನ ಭಕ್ತಿಯಿಂದ ನೆಲೆನಿಲ್ಲುವಂತೆ ಮಾಡಿದರಾಜಾಬಿಚ್ಚುಗತ್ತಿ ಭರಮಪ್ಪನಾಯಕ, ಹಿರೇಮದಕರಿನಾಯಕ, ದುರ್ಗ ಮರೆಯಲಾಗದರಾಜವೀರ ಮದಕರಿನಾಯಕ, ಕಂಪಿಲೆಯ ಕಂಪಿಲೆಯರಾಯ, ವಿಜಯನಗರದ ಎಚ್.ಎಂ.ನಾಯಕ, ಬ್ರಿಟೀಷರ ವಿರುದ್ಧ ಹೋರಾಡಿದ ಸುರಪುರದರಾಜಾ ವೆಂಕಟಪ್ಪನಾಯಕ, ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಸಿಂಧೂರ ಲಕ್ಷ÷್ಣಣ ಹಲಗಲಿಯ ಬೇಡರು, ಇವರೆಲ್ಲರೂ ಶಕ್ತಿ-ಭಕ್ತಿಗಳ ಸಂಗಮವಾಗಿದ್ದರು. ಬ್ರಿಟೀಷರು ತಂದ ಅರಣ್ಯ ಕಾಯ್ದೆಗಳು ಬೇಡರ ಜೀವನಾಧಾರವಾಗಿದ್ದ ಅರಣ್ಯದಿಂದಲೂ ಹೊರದೂಡಿತು. ಸೈನಿಕ ಸೇವೆಗಾಗಿ ಒದಗಿಸಿದ್ದ ಇನಾಮ್ತಿ ಭೂವಿಯೂಜಮಿನ್ದಾರಿ ಪದ್ಥತಿಯ ಕಾರಣದಿಂದಾಗಿ ಕೈತಪ್ಪಿತು. ಈ ಹಿನ್ನೆಲೆಯಲ್ಲಿ ಬೇಡ ಸಮುದಾಯ ವಸಾಹತುಶಾಹಿ ಆಳ್ವಿಕೆಯಲ್ಲಿ ಬಂಡುಕೋರ ಪಂಗಡವಾಗಿ ರೂಪಗೊಂಡಿತು ದAಗೆ-ಬAಡಾಯಗಳನ್ನು ನಡೆಸಿದ ಬೇಡ ಸಮುದಾಯ ಬ್ರಿಟೀಷರ ಕೋಪಕ್ಕೆ ಕಾರಣವಾಯಿತು. ನಿಶ್ಯಸ್ತಿçÃಕರಣ ಕಾಯ್ದೆಯಂತಹ ಕಾನೂನುಗಳು ಆಯುಧಗಳನ್ನು ಹೊಂದುವ ಹಕ್ಕನ್ನು ಕಸಿದುಕೊಂಡಿತು. ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ ಹಲಗಲಿಯ ಬೇಡರು ದಕ್ಷಿಣ ಭಾರತದ ಮೊಟ್ಟ ಮೊದಲು ಸ್ವಾತಂತ್ರö್ಯ ಹೋರಾಟ ಆರಂಭಿಸಿದರು. ಸಿಂಧೂರ ಲಕ್ಷ÷್ಣಣ ನಂತವರ ಹೋರಾಟ ಇಂದಿಗೂ ಅಮರ.

ನಾಯಕ ಜನಾಂಗದ ಆಚರಣೆಯ ವಿಚಾರದಲ್ಲಿ ಪಾದೇಶಿಕ ವೈವಿಧ್ಯತೆಗಳಿವೆ. ಮಾತೃ ಪ್ರಧಾನಕುಟುಂಬ ವ್ಯವಸ್ಥೆಯನ್ನು ಅನುಮೋದಿಸುವ ಪರಂಪರೆಯ ನೆನಪುಗಳನ್ನು ಯಲ್ಲಮ್ಮ, ರೇಣುಕ,ಗಾಳೆಮ್ಮ, ಹುಲಿಗೆಮ್ಮ ಮೊದಲಾದ ದೇವತೆಗಳು ಆಚರಣೆಯಲ್ಲಿ ಕಾಣಬಹುದು. ಬೇಡರು ಮೂಲತ: ಶಿವನ ಆರಾಧಕರೆಂದು ಸ್ಪಷ್ಟವಾದರೂ ವೈಷ್ಣವ ಧರ್ಮದ ಪ್ರಭಾವಕ್ಕೆ ಒಳಪಟ್ಟರು. ಊರಿನ ಸಂಪರ್ಕ, ಆಡಳಿತ ಸಂಪರ್ಕಕ್ಕೆ ಬೇಡರು ಪಲ್ಲಟವಾದ ಕಾಲಘಟ್ಟಗಳಲ್ಲಿ ಊರೋಟ್ಟಿಗಿನ ಸಂಬAಧಗಳಿಲ್ಲಿ ನೀರಗಂಟಿ, ತಳವಾರ, ಪರಿವಾರ, ಪಾಳೆಯಗಾರ, ಸೈನಿಕ , ಸೇನಾ ಮುಖಂಡರಾಗಿ ಕೆಲಸ ನಿರ್ವಹಿಸಿ ಇತಿಹಾಸದಲ್ಲಿ ಸೇರಿದ್ದಾರೆ.

ಸ್ವಾತಂತ್ರö್ಯ ನಂತರ ದಿನಗಳಲ್ಲಿ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸಿದ ಮೀಸಲಾತಿ ಸೌಲಭ್ಯ ಹಾಗೂ ಕರ್ನಾಟಕದಲ್ಲಿ ಎಲ್.ಜಿ.ಹಾವನೂರು ವರದಿ ಜಾರಿಗೆಯಿಂದ ಹಿಂದುಳಿದ ವರ್ಗಗಳ ಮೀಸಲಾತಿ ನೀತಿಯ ಹಿನ್ನಲೆಯಲ್ಲಿ ಸಮುದಾಯ ಈಗ ಚೇತರಿಸಿಕೊಳ್ಳುತ್ತಿದೆ. ದುರಂತವೆAದರೆ ಅತಿದೊಡ್ಡ ಸಮುದಾಯಗಳಲ್ಲಿ ಒಂದಾದ ನಾಯಕ ಸಮುದಾಯಕ್ಕೆ ರಾಜ್ಯದಲ್ಲಿ ಪ್ರಬಲವಾದ ನಾಯಕತ್ವ ರೂಪಗೊಂಡಿಲ್ಲ.

ಸವಾಲುಗಳು:- ಇತಿಹಾಸದ ಸುವರ್ಣಾಕ್ಷರಗಳಲ್ಲಿ ನೋಡುವ ನಾಯಕಜನಾಂಗದ ಸ್ಥಿತಿಗತಿ ಇಂದು ಏನಾಗಿದೆ? ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಬಹುದೊಡ್ಡ ಸಮುದಾಯಗಳಲ್ಲಿ ಒಂದಾದ ನಾಯಕ ಜನಾಂಗವನ್ನು ಇಬ್ಬಾಗ ಮಾಡುತ್ತಾ ಅಸಂಘಟಿತರನ್ನಾಗಿ ಮಾಡುವ ವ್ಯವಸ್ಥಿತ ಹುನ್ನಾರ ತಲೆಮಾರುಗಳಿಂದಲೂ ನಡೆಯುತ್ತಾ ಬಂದಿದೆ. ನಿರೀಕ್ಷಿತ ಮಟ್ಟದಲ್ಲಿ ಶಿಕ್ಷಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೌಲಭ್ಯ ಪಡೆದಿಲ್ಲ. ಜನಸಂಖ್ಯೆಗನುಗುಣವಾಗಿ ಸಂವಿಧಾನ ಬದ್ಧವಾಗಿ ಮೀಸಲಾತಿಯನ್ನು ೭.೫% ನೀಡಬೇಕೆಂದು ನಿರಂತರ ಹೋರಾಟ ಮಾಡುತ್ತಾ ಬಂದರೂ ಸಾಧ್ಯಾವಾಗಿಲ್ಲ. ಸಾಮಾಜಿಕ ಮೌಢ್ಯತೆ, ಕಂದಾಚಾರದಿAದ ಹೊರಬಂದು ಇತರೊಡನೆ ಸೌಹಾರ್ದಯುತವಾಗಿ ನಡೆದುಕೊಳ್ಳುವುದರ ಮೂಲಕ ಎಲ್ಲಾ ಸಮುದಾಯದವರ ಸಹಕಾರದಿಂದ ರಾಜಕೀಯ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹೆಜ್ಜೆ ಗುರುತುಗಳನ್ನು ಶಾಶತ್ವಗೊಳಿಸಬೇಕಾಗಿದೆ. ನಮ್ಮ ನಾಡಿನ ನೆಲ-ಜಲ, ಇತಿಹಾಸ-ಸಂಸ್ಕೃತಿಗಳ ಬಗ್ಗೆ ಸಂಶೋಧನೆಯಾಗಬೇಕಿದೆ. ವೈಚಾರಿಕ ನೆಲೆಯಲ್ಲಿ ಸವಲತ್ತುಗಳಿಗಾಗಿ ಹೋರಾಟದ ಮಾರ್ಗವನ್ನು ಕಂಡುಕೊಳ್ಳೂವುದು ಅನಿವಾರ್ಯವಾಗಿದೆ.

ಕರ್ನಾಟಕದಲ್ಲಿ ೧೮ ಮಂದಿ ಶಾಸಕರು, ಇಬ್ಬರು ಸಂಸದರು ಈ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರ ಮೇಲೆ ಗುರುತರವಾದ ಜವಾಬ್ದಾರಿಗಳಿವೆ. ಎಲ್ಲಾ ಸಮುದಾಯದವರನ್ನು ಪ್ರೀತಿಯಿಂದ ಕಾಣುವುದರ ಜೊತೆಗೆ ನಾಯಕ ಸಮುದಾಯದತ್ತ ವಿಶೇಷ ಗಮನಹರಿಸಿ ಸಂಘಟಿತರನ್ನಾಗಿ ಮಾಡುವತುರ್ತು ಅನಿವಾರ್ಯತೆ ಇದೆ. ಜನರು ನಾಯಕತ್ವಕ್ಕಾಗಿ ಕಿತ್ತಾಡದೆ, ಸಂಘಟಿತ ವ್ಯವಸ್ಥೆಗಾಗಿ ಹೊರಾಡಬೇಕಿದೆ. ನಾಯಕನನ್ನು ಆಯ್ಕೆ ಮಾಡುವ ಒಪ್ಪಿಕೊಳ್ಳುವ ಬಹುದೊಡ್ಡ ಕೆಲಸ ಆಗಬೇಕಿದೆ. ಈ ನಿಟ್ಟನಲ್ಲಿ ಜನಾಂಗದ ರಾಜಕೀಯ ನಾಯಕರು, ಮುಖಂಡರು, ಚಿಂತಕರು, ಶ್ರೀ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರು, ಜನಾಂಗದ ವಿವಿಧ ಸಂಘಟನೆಗಳು ಸಂಘಟನೆಯತ್ತ ಗಮನಹರಿಸಿ ನಾಯಕತ್ವದ ಕೊರತೆಯನ್ನು ನೀಗಿಸುವ ಕೆಲಸ ಮಾಡಬೇಕಿದೆ. ಇದಕ್ಕೆ ವಾಲ್ಮೀಕಿ ಜಯಂತಿಯAತಹ ಆಚರಣೆಗಳು ಮಾಡಿಕೊಡುತ್ತವೆ.

© 2020, Shri Maharushi Valmiki Gurupeeta | All Rights Resever