ಉತ್ತರ ಭಾರತದ ವಾಲ್ಮೀಕಿ ಆಶ್ರಮಗಳು

ಆರ್.ಕ್.ಸುಬೇದಾರ

ವಾಲ್ಮೀಕಿ ಜನಾಂಗಕ್ಕೆ ಮೂರು ಯುಗಗಳಿಂದ ಇತಿಹಾಸ ಹರಿದು ಬಂದಿವೆ. ತ್ರೇತಾಯುಗದಲ್ಲಿ ಮಹರ್ಷಿ ವಾಲ್ಮೀಕಿ ಜನಿಸಿ ಶ್ರೀ ರಾಮಾಯಣ ಮಹಾಕಾವ್ಯದ ಮೂಲಕ ರಾಮ, ಲಕ್ಷö್ಮಣ, ಸೀತೆ, ಹನುಮಂತ ಮುಂತಾದ ದೇವತೆಗಳನ್ನು ಸೃಷ್ಟಿಸಿ ಯುಗ ಪುರಷನಾದ. ದ್ವಾಪರ ಯುಗದ ಬೇಡರಕಣ್ಣಪ್ಪ ಏಕಲವ್ಯ, ಗುಹ, ಧರ್ಮವ್ಯಾದ ಜನಿಸಿ ಯುಗಪುರುಷರಾದರು. ಕಲಿಯುಗದಲ್ಲಿ ಸಾವಿರಾರು ತಪಸ್ವಿಗಳು, ಪಾಳೆಗಾರರು, ಚಕ್ರವರ್ತಿಗಳು, ನಾಡನ್ನು ವಿಶ್ವವನ್ನು ಬೆಳಗಿ ವಿಶ್ವ ಗುರುಗಳಾದರು. ವಿಶ್ವ ಮಾನವರಾದ ಸಂಗತಿ ಇತಿ ಹಾಸದಿಂದ ತಿಳಿದು ಬರುತ್ತದೆ.

ಇಂತಹ ಶ್ರೇಷ್ಠವಾದ ವಾಲ್ಮೀಕಿ ಜನಾಂಗದಲ್ಲಿ ಜನಿಸಿದ ಸಾವಿರಾರು ವಾಲ್ಮೀಕಿ ತಪಸ್ವಿಗಳು ವಿಶ್ವದಲ್ಲಿದ್ದಾರೆ. ಪ್ರಮುಖವಾಗಿ ಉತ್ತರ ಭಾರತದಲ್ಲಿ ವಾಲ್ಮೀಕಿ ಮಾನ್ಯಗಳನ್ನು ನಾವು ಹೆಚ್ಚಾಗಿ ಕಾಣುತ್ತೇವೆ. ಉತ್ತರ ಭಾರತದ ಗಂಗಾ, ಯಮುನಾ, ತಮಸಾನದಿ ತಟದ ಕ್ರೌಂಚಾರಣ್ಯ ಪ್ರದೇಶ, ಅಯೋಧ್ಯ, ಮಹರ್ಷಿ ವಾಲ್ಮೀಕಿ ನಡೆದಾಡಿದ ಪ್ರದೇಶ, ಹೀಗಾಗಿ ಉತ್ತರ ಭಾರತದಲ್ಲಿ ಈಶಾನ್ಯ ಭಾರತದಲ್ಲಿ ವಾಲ್ಮೀಕಿ ಮಂದಿರಗಳನ್ನು, ವಾಲ್ಮೀಕಿ ಆಶ್ರಮಗಳನ್ನು ಹೆಚ್ಚಾಗಿ ಕಾಣುತ್ತೇವೆ. ಉತ್ತರಭಾರತದಲ್ಲಿರುವ ಸಾಧು ಸಂತರು ವಾಲ್ಮೀಕಿ ಜನಾಂಗದವರೆ ಹೆಚ್ಚು. ಕಾರಣ ಇವರು ಕಾಡಿನಲ್ಲಿದ್ದ ಬೇಡರು. ತಪಸ್ವಿ ಗುಣ ಆನುವಂಶಿಕವಾಗಿ ಬಂದಿದ್ದು. ವಾಲ್ಮೀಕಿ ಭಗವಾನನಲ್ಲಿರುವ ಅವರ ಅಪಾರ, ಬೇಡರು. ತಪಸ್ವಿ ಗ.Äಣ ಆನುವಂಶಿಕವಾಗಿ ಬಂದಿದ್ದು. ವಾಲ್ಮೀಕಿ ಭಗವಾನನಲ್ಲಿರುವ ಅವರ ಅಪಾರ, ನಂಬಿಕೆ ಅವರನ್ನು ಸನ್ಯಾಸತ್ವಕ್ಕೆ ಸೆಳೆದು ಲೋಕ ಕಲ್ಯಾಣಕ್ಕಾಗಿ ಜೀವನವನ್ನೆ ಮುಡಿಪಾಗಿಟ್ಟು ತಪಸ್ಸನ್ನಾಚರಿಸಿ, ಯಜ್ಞಯುಗಾದಿಗಳನ್ನು ಮಾಡಿ, ಮಠಗಳನ್ನು ಸ್ಥಾಪಿಸಿ ಜನರನ್ನು ಸನ್ಮಾರ್ಗದಲ್ಲಿ ತರಲು ಪ್ರಯತ್ನಿಸುತ್ತಿದ್ದಾರೆ. ಇದು ಜಗತ್ತಿಗೆ ವಾಲ್ಮೀಕಿ ನೀಡಿದ, ನೀಡುತ್ತಿರುವ ಅದ್ಭುತ ಕೂಡುಗೆಯಾಗಿದೆ.

ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನೀಡುತ್ತಿರುವ ಡಾ.ಅಂಬೇಡ್ಕರ್ ಫೆಲೋಶಿಪ್ ರಾಷ್ಟಿçÃಯ ಪ್ರಶಸ್ತಿ ಸ್ವೀಕರಿಸಲು ೧೯೯೬ ರಲ್ಲಿ ನಾನು (ಆರ್.ಕೆ.ಸುಬೇದಾರ) ದೆಹಲಿಗೆ ಹೋದಾಗ ಮಂದಿರ ಮಾರ್ಗದಲ್ಲಿ ಮೊದಲಿಗೆ ಕಂಡದ್ದೆ ಭಗವಾನ ವಾಲ್ಮೀಕಿ ಮಂದಿರ, ಮಂದಿರ ಮಾರ್ಗದಲ್ಲಿ ಟಾಲಕಟೋರ ಇಂಡೋರ ಸ್ಟೇಡಿಯಂನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ, ಸಮಾರಂಭದ ಸ್ಥಳದಲ್ಲಿ ವೇದಿಕೆ, ಮೇಲೆ ಮಹರ್ಷಿ ವಾಲ್ಮೀಕಿ ಫೋಟೋಗಳು, ಬ್ಯಾನರಗಳು ರಾಜಾಜಿಸುತ್ತಿದ್ದವು. ಹೀಗಾಗಿ ವಾಲ್ಮೀಕಿ ಮಂದಿರಕ್ಕೆ ಭೇಟಿ ಕೊಡುವ ನನ್ನ ಮನದಿಂಗಿತ ಹೆಚ್ಚಾಯಿತು. ಕಾರ್ಯಕ್ರಮದ ನಂತರ ಭಗವಾನ ವಾಲ್ಮೀಕಿ ಮಂದಿರಕ್ಕೆ ಭೇಟಿ ನೀಡಿ ಗುರುಗಳ ದರ್ಶನ ಪಡೆದು ಆಶೀರ್ವಾದ ಪಡೆದೆ.

ದೆಹಲಿಯ ಮಂದಿರ ಮಾರ್ಗದಲ್ಲಿ ಹಲವಾರು ಧರ್ಮದ ದೇವಾಲಯಗಳು ಬರುತ್ತವೆ. ಪ್ರತಿಷ್ಟಿತ ಬಿರ್ಲಾಮಂದಿರ, ವೆಂಕಟೇಶ್ವರ ದೇವಸ್ಥಾನ, ಹಿಂದೂ ಮಹಾಸಭಾ ಭವನ, ಗುರುನಾನಕ ಮಂದಿರ, ಜೈನ್ ಮಂದಿರ ಹೀಗೆ ಎಲ್ಲ ಧರ್ಮಿಯರ ದೇವಾಯಗಳಿವೆ. ಮೊದಲಿಗೆ ಬರುವುದೇ ಭಗವಾನ ಬೃಹತ್ ಮುಖ್ಯದ್ವಾರ ಮುಂದೆ ವಿಶಾಲ ಮಠದ ಕಟ್ಟಡಗಳು. ವಾಲ್ಮೀಕಿ ದೇವಸ್ಥಾನದ ಬದಿಗೆ ಜಗದ್ಗುರುಗಳ ವಸತಿ ಗೃಹ, ಏಕಲವ್ಯ ಸಂಗೀತ ಪಾಠಶಾಲೆ, ಮಹಾತ್ಮಗಾಂಧಿ ಭೇಟಿ ನೀಡಿದ ಕೊಠಡಿ, ಮಹಾತ್ಮಗಾಂಧಿ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದ ಕಟ್ಟೆ, ಶಾಲಾ ಮಕ್ಕಳವನ ಎಲ್ಲವನ್ನು ತೋರಿಸಿದ ಸ್ವಾಮಿಜಿಯವರು ಉತ್ತರ ಭಾರತದ ವಾಲ್ಮೀಕಿ ಜನಾಂಗದ ಬಗ್ಗೆ ಮಹರ್ಷಿ ವಾಲ್ಮೀಕಿ ಮಠಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.

ದೆಹಲಿಯ ಮಂದಿರ ಮಾರ್ಗದಲ್ಲಿರುವ ಭಗವಾನ ವಾಲ್ಮೀಕಿ ಮಂದಿರ ಮಠ ಮುಖ್ಯ ಆಶ್ರಮವಾಗಿದ್ದು, ದೆಹಲಿಯ ಪ್ರತಿಯೊಂದು ಕಾಲೋನಿಗಳಲ್ಲಿ ಮಹರ್ಷಿ ವಾಲ್ಮೀಕಿ ದೇವಸ್ಥಾನಗಳಿರುವದನ್ನು ಕಾಣುತ್ತೇವೆ. ರಾಷ್ಟಿçÃಯ ವಾಲ್ಮೀಕಿ ಗುರುಪೀಠದ ಜಗದ್ಗುರುಗಳಾದ ವಾಲ್ಮೀಕಿ ಶ್ರೀ ಕೃಷ್ಣ ವಿದ್ಯಾರ್ಥಿ ಮಹಾರಾಜ ಅವರು ತಿಳಿಸಿದಂತೆ ದೆಹಲಿಯಲ್ಲಿ ಎರಡು ನೂರಕ್ಕೂ ಹೆಚ್ಚು ವಾಲ್ಮೀಕಿ ದೇವಾಸ್ಥಾನಗಳು, ಮಠಗಳಿಗೆ ಸ್ವಾಮೀಜಿಗಳು ಇದ್ದಾರೆ. ಪಂಜಾಬ, ರ‍್ಯಾಣ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಲ್ಮೀಕಿ ಮಠಗಳಿದ್ದು ಅವು ದೆಹಲಿಯ ಶಾಖಾ ಮಠಗಳಾಗಿವೆ. ಹಾಗಾಗೀ ಅಲ್ಲಿನ ಸಾಧು ಸಂತರು ದೆಹಲಿಯ ಮುಖ್ಯ ಆಶ್ರಮಕ್ಕೆ ಬಂದು ಜನಾಂಗದ ಬಗ್ಗೆ ಚರ್ಚಿಸುತ್ತಾರೆ.

ಸೀಗೆ ಹುಣ್ಣಿಮೆಗೆ ಉತ್ತರ ಭಾರತದಲ್ಲಿ ವಾಲ್ಮೀಕಿ ಪೌರ್ಣಿಮೆ ಎಂದು ಕರೆಯುತ್ತಾರೆ. ವಾಲ್ಮೀಕಿ ಪೌರ್ಣಿಮ ಹದಿನೈದು ದಿನ ಮುಂಚಿತವಾಗಿ ದೆಹಲಿ ವಾಲ್ಮೀಕಿ ಮಂದಿರ ಮಾರ್ಗದಲ್ಲಿರುವ ಭಗವಾನ ವಾಲ್ಮೀಕಿ ಮಂದಿರ ಮಠದಲ್ಲಿ ವಿಶೇಷ ಪೂಜೆ, ಉಪನ್ಯಾಸ, ಭಜನೆ, ಪ್ರವಚನ, ನಡೆಯುತ್ತದೆ. ಅಲ್ಲಿಗೆ ಸಚಿವರು ಶಾಸಕರು ಅದರಲ್ಲಿ ಪಲ್ಗೊಳ್ಳುತ್ತಾರೆ. ಕಾರ್ಯಕ್ರಮ ಆಮಂತ್ರಣ ಪತ್ರ ಕೂಡಾ ನಮಗೆ ಗುರುಗಳು ನೀಡಿದ್ದರು. ನಾನು ಸೆಪ್ಟಂಬರ್ ತಿಂಗಳಲ್ಲಿ ಹೋಗಿದ್ದರಿಂದ ಅಕ್ಟೋಬರದಲ್ಲಿ ನಡೆಯುವ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಆಮಂತ್ರಣ ಪತ್ರ ಪೂರ್ವ ಸಿದ್ಥತೆ ನಡೆದದ್ದನ್ನು ತೋರಿಸಿದರು.

ಜಗದ್ಗುರು ವಾಲ್ಮೀಕಿ ಶ್ರೀ ಕೃಷ್ಣ ವಿದ್ಯಾರ್ಥಿ ಮಹಾರಾಜರು ನಮಗೆ ಅರ್ಥವಾಗುವ ರೀತಿಯಲ್ಲಿ ಹಿಂದಿಯಲ್ಲಿ ವಾಲ್ಮೀಕಿ ಜನಾಂಗದ ಇತಿಹಾಸ, ಜನಾಂಗದ ಪರಿಚಯ ತಿಳಿಸಿದರು. ನಾವು ಅಲ್ಲಿ ತಂಗಿದ್ದಾಗ ನೂರಾರು ಜನ ಸಂತರು ಸ್ವಾಮಿಜೀಗಳು ಬಂದು ಶ್ರೀಗಳು ಆಶೀರ್ವಾದ ಪಡೆದ್ದಿದ್ದನ್ನು ನೋಡಿದೆ. ಅದೇ ಸಂದರ್ಭದಲ್ಲಿ ರಾಷ್ಟಿçÃಯ ವಾಲ್ಮೀಕಿ ಗುರುಪೀಠ ಅಧ್ಯಕ್ಷರಾದ ಮಧ್ಯಪ್ರದೇಶದ ಜಗದ್ಗುರು ವಾಲ್ಮೀಕಿ ಉಮೇಶನಾಂದ ಮಹಾಸ್ವಾಮಿಗಳ ದರ್ಶನವಾಯಿತು. ಮಧ್ಯ ಪ್ರದೇಶದಲ್ಲಿ ಬಹುಸಂಖ್ಯಾತ ಬೇಡಜನಾಂಗವಿದ್ದು, ವೀಶಷ ಸ್ಥಾನಮಾನ ಹೊಂದಿದೆ. ಜಗದ್ಗುರುಗಳು ಸರಕಾರಿ ವಾಹನದಲ್ಲಿ ಬಂದಾಗ ಅದರ ಬಗ್ಗೆ ವಿವರ ಕೇಳಿದಾಗ ಶ್ರೀಗಳು ಹೇಳದ್ದು ಭೂಪಾಲದಿಂದ ನೂರು ಕಿ.ಮೀ. ದೂರುದಲ್ಲಿರುವ ಉಜ್ಜಯಿನಿಯಲ್ಲಿ ಮಹರ್ಷಿ ವಾಲ್ಮೀಕಿ ಆಶ್ರಮವಿದ್ದು, ಇದು ದೇಶದಲ್ಲೇ ದೊಡ್ಡವಾಲ್ಮೀಕಿ ಆಶ್ರಮವಾಗಿದೆ ಎಂದು ತಿಳಿಸಿದರು. ರಾಮಾಯಣ ಮಹಾಕಾವ್ಯದ ಭಗವಾನ ವಾಲ್ಮೀಕಿ ಮಹರ್ಷಿಯ ಹೆಸರು ಚಿರವಾಗಿರಲು, ಈ ಜನಾಂಗಕ್ಕೆ ವಿಶೇಷ ಗೌರವ ಸಲ್ಲಿಸಲು ಅಲ್ಲಿನ ಮಧ್ಯಪ್ರದೇಶ ಸರಕಾರ ವಾಲ್ಮೀಕಿ ಸ್ವಾಮಿಜಿಯನ್ನು ವಿಧಾನಸಭೆ ಮೇಲ್ಮನೆಯ ವಿಶೇಷ ಆಹ್ವಾನಿತರನ್ನಾಗಿ ಮಾಡಿದ್ದು, ಅವರಿಗೆ ಸರಕಾರ ಆಪ್ತ ಸಹಾಯಕರನ್ನು ನೀಡಿದೆ. ಇದು ನಿಜಕ್ಕೂ ಹೆಮ್ಮೆಪಡುವ ಸಂಗತಿಯಾಗಿದೆ. ನೀವು ಒಂದು ಸಲ ಮಠಕ್ಕೆ ಬಂದು ಭೇಟೆ ನೀಡಿ ಎಂದು ತಿಳಿಸಿದರು. ಮಧ್ಯಪ್ರದೇಶ, ಜಾರ್ಖಂಡ, ಬಿಹಾರ, ಛತ್ತಿಸಗಡ, ಉತ್ತರಪ್ರದೇಶ, ಉತ್ತರಾಂಚಲ, ಪಶ್ಚಿಮ ಬಂಗಾಲ, ಈಶಾನ್ಯ ರಾಜ್ಯಗಳಲ್ಲಿ ವಿಶೇಷವಾಗಿ ಆಸ್ಸಾಂ ಸಿಕ್ಕಂ, ಮಣಿಪುರ ರಾಜ್ಯಗಳಲ್ಲಿ ಗುಜರಾತ, ರಾಜಸ್ಥಾನ ಮಹಾರಾಷ್ಟçಗಳಲ್ಲಿ ಬೇಡಜನಾಂಗ ಹೆಚ್ಚಿನ ಸಂಖ್ಯೆಯಲ್ಲಿದೆ. ದಕ್ಷಿಣಭಾರತ ಸೇರಿದಂತೆ ಭಾರತದಲ್ಲಿ ವಾಲ್ಮೀಕಿ ಜನಸಂಖ್ಯೆ ಇಪ್ಪತ್ತರಡು ಕೋಟಿ ಇದೆ ಎಂದು ಶ್ರೀಗಳು ತಿಳಿಸಿದರು.

ಅಖಂಡ ಭಾರತದ ಬೇಡ ಜನಾಂಗದ ರಾಷ್ಟಿçÃಯ ಸಮಾವೇಶ ಮಾಡುವುದು, ರಾಷ್ಟಿçÃಯ ವಾಲ್ಮೀಕಿ ಗುರುಪೀಠಗಳು ಸ್ವಾಮಿಜೀಗಳನ್ನು ಜನಪ್ರತಿನಿಧಿಗಳನ್ನು ಒಂದು ಗೂಡಿಸುವ ಕೆಲಸವಾಗಬೇಕುಗಿದೆ ಎಂದು ಅವರು ತಿಳಿಸಿದ್ದರು. ದೆಹಲಿಯ ಜಗದ್ಗುರುಗಳು, ಉಜೈನಿ ಜಗದ್ಗುರುಗಳು ತಿಳಿಸಿದಂತೆ ಉತ್ತರ ಭಾರತದಲ್ಲಿಯ ದೆಹಲಿಯ ವಾಲ್ಮೀಕಿ ಬೆಡಗುಗಳಲು ಈ ರೀತಿ ಇವೆ. ಪಾರಚಾ ಸಾರವಾನ, ಚೌಹಾಣ, ಬೆನವಾಲಿ, ರಾಜಪೂತ, ಏಡಲಾನ, ದಡೂಸಿ, ಟಾಕ್, ಖರಾ, ಬುರಾಂಡ, ಚೌಟಾಲ, ಬ್ರಹ್ಮಾ. ಉಜ್ಜೇನವಾಡ, ಪಾಶ್ವಾನ ಪೇರುಉಜ್ಜೇನವಾಡಾ, ಪಂಡಿತ್, ತೋಡಾ, ಹೀಗೆ ನೂರಾರು, ಸಾವಿರಾರೂ ಬೆಡಗುಗಳನ್ನು ಉತ್ತರ ಭಾರತದಲ್ಲಿ ಕಾಣುತ್ತೇವೆ. ಜನ್ಮ ನಾಮಕರಣ, ವಿವಾಹ, ಅಂತ್ಯಸAಸ್ಕಾರ ಆಯಾ ರಾಜ್ಯಗಳ ಸಂಪ್ರದಾಯದAತೆ ನಡೆದರೂ, ಹೆಚ್ಚಾಗಿ ಹರಿ ಸಂಪ್ರದಾಯದAತೆ ನಡೆಯುತ್ತದೆ. ಎಲ್ಲರು ಹರಿನಾಮ ಹಚ್ಚುಚುದು ವಾಲ್ಮೀಕಿ ಶ್ರೀರಾಮ, ಹನುಮಾನ ಸ್ಮರಣಿ ಮಾಡುವುದು ಎಲ್ಲರಲ್ಲಿದೆ. ಪ್ರತಿಯೊಂದು ಊರಲ್ಲಿ ವಾಲ್ಮೀಕಿ , ಶ್ರೀರಾಮ ಹನುಮಾನ ಸ್ಮರಣೆ ಮಾಡುವುದು ಎಲ್ಲರಲ್ಲಿದೆ ಪ್ರತಿಯೊಂದು ಊರಲ್ಲಿ ವಾಲ್ಮೀಕಿ ಹನುಮಂತನ ದೇವಸ್ಥಾನ ಕಾಣುತ್ತೇವೆ.

ಉತ್ತರ ಭಾರತದಲ್ಲಿ ವಾಲ್ಮೀಕಿ ಜನಾಂಗದಲ್ಲಿ ಹಲವಾರು ಹೆಸರುಗಳಿದ್ದರು, ಎಲ್ಲರೂ ತಾವು ವಾಲ್ಮೀಕಿ ಏಕಲವ್ಯನ ಭಕ್ತರೆಂದು ಅವರ ವಂಶಸ್ಥರೆAದು ಹೇಳಿಕೊಳ್ಳುತ್ತಾರೆ. ವಾಲ್ಮೀಕಿ, ಬಾಲ್ಮೀಕಿ ಪಾರಚಾ, ಗುಜ್ಜಲ, ನಿಷಾದ ಪುಳಿಂದ, ಬೇಡ, ಶಬರ ಹೆಸರು ಕರೆದರೆ ದಕ್ಷಿಣ ಭಾರತದಲ್ಲಿ ವಾಲ್ಮೀಕಿ, ಬೇಡ ಬೇಡರು, ನಾಯಕ, ನಾಯಕಮಕ್ಕಳು, ಕಣ್ಣಯ್ಯನ ಮಕ್ಕಳು, ಕಣ್ಣಯ್ಯನವರು, ಕಣ್ಣಪನವರು, ನಾಯಕನಾಯಡು, ನಾಯ್ಡು, ನಾಯರ ಹಲವಾರು ಹೆಸರುಗಳಿಂದ ಕರೆಯಲ್ಪಡುತ್ತಿದ್ದಾರೆ. ಉತ್ತರ ಭಾರತದಲ್ಲಿ ಈ ಜನಾಂಗನ್ನು ಪರಿಶಿಷ್ಟ ಜಾತಿ, ಪರಿಶಿಷ್ಟಪಂಗಡ, ಹಿಂದುಳಿದ ವರ್ಗಕ್ಕೆ ಮೀಸಲಾತಿ ಕಲ್ಪಿಸಿ ಸರಕಾರಿ ಸೌಲಭ್ಯ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿ ನೀಡಲಾಗಿದೆ. ಮಹಾರಾಷ್ಟç, ತೆಲಂಗಣ, ಆಂದ್ರಪದೇಶ, ತಮಿಳುನಾಡು, ಕೇರಳದಲ್ಲಿ ಬ್ಯಾಕ್‌ವರ್ಡ್ ಟ್ರೆöÊಬಲ್‌ಗೆ ಸೇರಿಸಲಾಗಿದೆ. ಅಲ್ಲಿ ಪಂಗಡ ಮೀಸಲಾತಿಗೆ ನಿರಂತರ ಹೋರಾಟ ನಡೆಯುತ್ತಿರುವುದನ್ನು ಕಾಣುತ್ತೇವೆ.

ಮಧ್ಯಪ್ರೆದೇಶದ ರಾಷ್ಟಿçÃಯ ವಾಲ್ಮೀಕಿ ಗುರುಪೀಠ ವಿಳಾಸ ಶ್ರೀ ಶ್ರೀ ೧೦೮ ಬಾಲಯೋಗಿ ವಾಲ್ಮೀಕಿ ಉಮಶಾನಂದಜೀ ಮಹಾರಾಜ ರಾಷ್ಟೀಯ ವಾಲ್ಮೀಕಿ ಗುರುಪೀಠ ವಿಳಾಸ ಶ್ರೀ ಶ್ರೀ ಜಗದ್ಗುರು ವಾಲ್ಮೀಕಿ ಶ್ರೀ ಕೃಷ್ಣ ವಿದ್ಯಾರ್ಥಿ ಮಹರಾಜ ಅಧ್ಯಕ್ಷರು ಭಗವಾನ ವಾಲ್ಮೀಕಿ ಸನಾತನ ಧರ್ಮಸಭಾ, ವಾಲ್ಮೀಕಿ ಧಾಮ ಕ್ರಣ ಮುಕ್ತೇಶ್ವರ ಮಹದೇವರೋಡ, ಉಜ್ಜೆöÊನಿ,ಮಧ್ಯಪ್ರದೇಶ, ದೆಹಲಿ ಗುರುಗಳ ವಿಳಾಸ ಶ್ರೀ ಶ್ರೀ ಜಗದ್ಗುರು ವಾಲ್ಮೀಕಿ ಶ್ರೀ ಕೃಷ್ಣ ವಿದ್ಯಾರ್ಥಿ ಮಹರಾಜ ಅಧ್ಯಕ್ಷರು ಭಗವಾನ ವಾಲ್ಮೀಕಿ ಮಂದಿರ ಮಠಮಂದಿರ ಮಾರ್ಗ ನವದೆಹಲಿ. ದೆಹಲಿಯ ಇನ್ನೊಂದು ಪ್ರಮುಖ ಗುರುಪೀಠ, ನ್ಯಾಶನಲ್ ವಾಲ್ಮೀಕಿ ವೀರದಳ ಡಬ್ಲೂ.ಪಿ. ೫೯೮ ವಜೀರಪುರ ಗಾಂವ್, ಅಶೋಕ ವಿವಾಹ ದೆಹಲಿ-೫೨. ಪಂಜಾಬದ ಅಮೃತಸರದಲ್ಲಿ ಸುಪ್ರಸಿದ್ಥ ವಾಲ್ಮೀಕಿ ದೇವಸ್ಥಾನವಿದ್ದು, ಬಂಗಾರ ಲೇಪಿತ ವಾಲ್ಮೀಕಿ ಮೂರ್ತಿ ಪ್ರತಿಸ್ಠಾಪಿಸಲಾಗಿದೆ. ಪಂಜಾಬ, ರ‍್ಯಾಣದಲ್ಲಿ ಏಕಲವ್ಯ ಭವ್ಯ ದೇವಾಲಯ. ಅಯೋಧ್ಯೆಯಲ್ಲಿ ವಾಲ್ಮೀಕಿ ಮಂದಿರವಿದೆ. ಸಾಧು, ಸಂತರು ನಿತ್ಯ ಪೂಜೆ ಸಲ್ಲಿಸುತ್ತಾರೆ. ಗಂಗಾ ನದಿ, ಯುಮನಾ ನದಿ ತಟದಲ್ಲಿ ನೂರಾರು ವಾಲ್ಮೀಕಿ ಆಶ್ರಮಗಳಿವೆ.

ಹೀಗೆ ವಾಲ್ಮೀಕಿ ಜನಾಂಗ ತ್ರೇತಾಯುಗದಿಂದ ಬಂದ ಜನಾಂಗ ವಾಲ್ಮೀಕಿ ಧರ್ಮಕ್ಕಿರುವ ಇತಿಹಾಸ ತುಂಬಾ ಪುರಾತನ. ಭಾರತ ನೇಪಾಳ, ಭೂತಾನ, ದೇಶಗಳು, ನಿಷಾದ ಹೆಸರಿನಿಂದ ಕರೆಯಲ್ಪಡುವ ವಾಲ್ಮೀಕಿ ಸಮಾಜ ಬಹುದೊಡ್ಡ ಸಮಾಜ, ಕರ್ನಾಟಕದಲ್ಲಿ ಪಾಳೆಪಟ್ಟು ಕಟ್ಟಿ ಆಳಿದ ನಾಯಕರ ಇತಿಹಾಸ ತಿಳಿದಿದೆ. ಆದರೆ ದೇಶದ ವಿವಿಧ ಭಾಗಗಳಲ್ಲಿ ರಾಜಮಹಾರಾಜರರು ಬಾಳಿದ ಇತಿಹಾಸ ಹಿಂದಿಯಿAದ, ಸಂಸಕ್ಕೃತದಿAದ ಕನ್ನಡಕ್ಕೆ ಅನುವಾದವಾಗಬೇಕಾಗಿದೆ. ನಾಯಕರು, ಮೊದಲು ನಾಯಕರು ಇತಿಹಾದ ತಿಳಿದು ಕೊಳಬೇಕಾಗಿದೆ. ಭವ್ಯ ಇತಿಹಾಸ ಹೊಂದಿದೆ ಉಜ್ಜಲ ಪರಂಪರೆ ಹೊಂದಿದ ವಾಲ್ಮೀಕಿ ಧರ್ಮದ ಪ್ರಚಾರಕ್ಕೆ ವಾಲ್ಮೀಕಿ ಜನಾಂಗದ ಅಭಿವೃದ್ದಿಗೆ ವಾಲ್ಮೀಕಿ ಮಠಗಳು ಮುಂದಾಗಬೇಕು, ಅಂದಾಗ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯವಾಗುತ್ತದೆ.

© 2020, Shri Maharushi Valmiki Gurupeeta | All Rights Resever