ರಾಜನಹಳ್ಳಿಯ ಶ್ರೀ ವಾಲ್ಮೀಕಿ ಗುರುಪೀಠ ಪರಂಪರೆ

ಭಾರತ ದೇಶ ಹಲವು ಕಾರಣಗಳಿಂದ ವಿಶ್ವದಲ್ಲಿಯೇ ಅತ್ಯಂತ ಪ್ರಸಿದ್ಥವಾದದ್ದು. ಇಂತಹ ಪ್ರಸಿದ್ಥ ಭೂಮಿಯಲ್ಲಿ ಅನೇಕ ಋಷಿ ಮುನಿಗಳು, ಶರಣರು, ದಾರ್ಶನಿಕರು, ದಾಸಶ್ರೇಷ್ಠರು ಸಮಾಜ ಸುಧಾರಕರು ಮತ್ತು ಮಹಾನ್ ಸಾಧಕರು ಜನ್ಮ ತಾಳಿದ್ದಾರೆ. ಇಂತಹ ಪುಣ್ಯ ಭೂಮಿ ಈ ನಮ್ಮ ಭಾರತ.

ಪ್ರಪಂಚದ ಬಹುತೇಕ ಮೂಲ ನಿವಾಸಿಗಳು ಗುಡ್ಡ-ಗವಿಗಳಿಂದ, ಕಾಡು-ಕಣಿವೆಗಳಿಂದ, ನದಿ-ನದಗಳಿಂದ ತಮ್ಮ ಬದುಕನ್ನು ಆರಂಭಿಸಿದ್ದಾರೆ. ಆಗ ಇವರ ಬದುಕು ಬೇಟೆಯಾಗಿತ್ತು. ಬೇಟೆಯೇ ಇವರ ಬದುಕಾಗಿತ್ತು. ಬಲಿಷ್ಠ ಮೈಕಟ್ಟು ಬಲಾಢ್ಯ ಧೈರ್ಯ, ಅಪ್ರತಿಮೆ ಸಾಹಸವನ್ನು ಮೈಗೂಡಿಸಕೊಂಡವರು. ಇವರೇ ಬೇಡರು. ಭಾರತದ ಮೂಲ ನಿವಾಸಿಗಳಲ್ಲಿ ಒಬರು. ಇವರನ್ನು ಪ್ರಪಂಚವು ಬೇಡರೆಂದು ಕರೆಯಿತು. ಇವರಲ್ಲಿ ವಾಲ್ಮೀಕಿ ಪ್ರಮುಖವಾದ ವ್ಯಕ್ತಿ ಮೂಲತ: ಈತ ಬೇಡನಾದ ರತ್ನಾಕರ. ತನ್ನ ಜೀವನದಲ್ಲಿ ಪರಿವರ್ತನೆಯಾದ. "ಪರಿವರ್ತನೆ ಜಗದ ನಿಯಮ''ಈ ಪರಿವರ್ತನೆ ವ್ಯಕ್ತಿಗತವಾದಾಗ ಮಾನವ ಮಹಾದೇವನಾಗುವನು, ನರ-ನಾರಾಯಣನಾಗುವನು. ರತ್ನಾಕರನೂ ಸಹ ಪ್ರತಿನಿತ್ಯ ತನ್ನ ಬದುಕಿನಲ್ಲಿ ಶ್ರಮ, ಶ್ರದ್ಧೆ, ಸಂಯಮ ಸಂಕಲ್ಪದ ಹೋರಾಟಗಳ ಮೂಲಕ ಸಾಧಕನಾದ ಸಿದ್ಥಿಪುರಷನಾದ. ನಂತರದ ದಿನಗಳಲ್ಲಿ ವಾಲ್ಮೀಕಿಯಾದ. ಮಹರ್ಷಿಯಾಗಿ ಬೆಳೆದ. ಶ್ರೀರಾಮಚಂದ್ರನ ಚರಿತ್ರೆಯನ್ನು ಲೋಕ ಕಲ್ಯಾಣಾರ್ಥಕವಾಗಿ ಹೇಳುವ ಮೂಲಕ "ರಾಮಾಯಣ ಮಹಾಕಾವ್ಯ'' ವನ್ನು ಬರೆದ. ಇಂತಹ ಮಹಾಋಷಿ ವಾಲ್ಮೀಕಿ ನಮ್ಮ ಕುಲದೈವ.

ನಮ್ಮ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಅಂದಿನಿAದ ಇಂದಿನವರೆಗೆ ಅನೇಕ ಸಮುದಾಯಗಳು ಬಂದಿವೆ. ಈ ಎಲ್ಲಾಸಮುದಾಯಗಳು ತಮ್ಮ ತಮ್ಮ ಸಾಂಸ್ಕೃತಿಕ ನಾಯಕರ ಹೆಸರಿನಲ್ಲಿ ಬೆಳೆಯುತ್ತಿವೆ ಬದುಕುತ್ತಿವೆ. ಮಠ-ಪೀಠಗಳನ್ನು ಮಾಡಿಕೊಂಡು ತಮ್ಮ ಸಮುದಾಯಗಳನ್ನು ಎಲ್ಲಾ ರಂಗಗಳಲ್ಲಿ ಬೆಳೆಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ. ಈ ನಾಡಿನ ಬ್ರಾಹ್ಮಣರು, ಜೈನರು, ಬೌದ್ಥರು, ವೀರಶೈವರು, ಲಿಂಗಾಯತರು ಮುಂತಾದವರು ತಮ್ಮ ತಮ್ಮ ಸಮುದಾಯವನ್ನು ಸಂಘಟಿಸಲು ಅನೇಕ ಮಠ-ಪೀಠಗಳನ್ನು ಮಾಡಿದರು. ಸಾಂಸ್ಕçತಿಕವಾಗಿ ಸಂಘಟಿಸಿದರು. ಸಾಮಾಜಿಕವಾಗಿ ಬೆಳೆದರು. ಧಾರ್ಮಿಕವಾಗಿ ವಿಸ್ತರಿಸಿಕೊಂಡರು.

ಆ ಹಿನ್ನಲೆಯಲ್ಲಿ ವಾಲ್ಮೀಕಿ ಸಮಾಜವು ಸಹ ಮಠ-ಪೀಠ ಮಾಡಿಕೊಂಡು ಸಮುದಾಯವನ್ನು ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಗಿ, ಆಧ್ಯಾತ್ಮಿಕವಾಗಿ ಹಾಗೂ ಸರ್ವಾಂಗೀಣವಾಗಿ ಬೆಳೆಸಬೇಕೆಂಬ ಸದುದ್ದೇಶದಿಂದ ಕರ್ನಾಟಕದ ನಟ್ಟ ನಡುವಿನ ನಾಡಾದ ದಾವಣಗೆರೆ ಜಿಲ್ಲೆಯ ಹರಿಹರ ತಲೂಕಿನ ರಾಜನಹಳ್ಳಿಯಲ್ಲ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠವನ್ನು ಸ್ಥಾಪಿಸಿಕೊಂಡಿತು. ತುಂಗಭದ್ರೆಯ ತಟದ ವಿಶಾಲ ಜಾಗದಲ್ಲಿ ವಿಸ್ತರಿಸಿಕೊಂಡಿತು. ಇದಕ್ಕೆ ಮುಖ್ಯ ಕಾರಣ ಸಮಾಜದ ಸಂಸದರು, ಮಂತ್ರಿಗಳು, ಶಾಸಕರು ಹಾಗೂ ಎಲ್ಲಾ ಹಂತಹ ಜನ ಪ್ರತಿನಿಧಿಗಳೆಂಬುದರಲ್ಲಿ ಎರಡಿಲ್ಲ. ಅವರಲ್ಲಿ ಮಾಜಿ ಸಚಿವರಾದ ಶ್ರೀ ಎಲ್.ಜಿ.ಹಾವನೂರು, ಮಾಜಿ ಸಚಿವರಾದ ಶ್ರೀ ಕೆ.ತಿಪ್ಪೀಸಾಮ್ಮಿ,ಹಾಲಿ ಸಚಿವರಾದ ಶ್ರೀ ಸತೀಶ ಎಲ್. ಜಾರಕಿಹೊಳಿ, ಮಾಜಿ ಸಚಿವರಾದ ಶ್ರೀ ಬಿ.ಶ್ರೀರಾಮುಲು, ಹಾಲಿ ಸಂಸದರಾದ ಶ್ರೀ ವ್ಹಿ,ಎಸ್.ಉಗ್ರಪ್ಪ, ಹಾಲಿ ಸಂಸದರಾದ ಶ್ರೀ ಬಿ.ವ್ಹಿ.ನಾಯಕ, ಮಾಜಿ ಸಂಸದರಾದ ಶ್ರೀ ಶಶಿಕುಮಾರ, ಹಲಿ ಸಚಿವರಾದ ಶ್ರೀ ಈ ತುಕಾರಾಮ, ಮಾಜಿ ಸಂಸದರಾದ ಶ್ರೀ ಎನ್.ವೈ.ಹನುಮಂತಪ್ಪ, ಮಜಿ ಸಂಸದರಾದ ಶ್ರೀ ವೆಂಕಟೀಶ ನಾಯಕ, ಮಾಜಿ ಸಂಸದರಾದ ಶ್ರೀಮತಿ ಜೆ. ಶಾಂತಾ, ಮಾಜಿ ಸಂಸದರಾದ ಶ್ರೀ ಸಣ್ಣಫಕೀರಪ್ಪ, ಹಾಲಿ ಶಾಸಕರಾದ ಶ್ರೀ ರಮೇಶ ಜಾರಕಿಹೊಳಿ, ಮಾಜಿ ಸಚಿವರಾದ ಶ್ರೀ ರಾಜಾ ಮದನಗೋಪಾಲ ನಾಯಕ, ಹಾಲಿ ಶಾಸಕರಾದ ಶ್ರೀ ಬಾಲಚಂದ್ರ ಜಾರಕಿಹೊಳಿ, ಮಾಜಿ ಶಾಸಕರಾದ ಶ್ರೀ ಕೆ.ಎನ್. ರಾಜಣ್ಣ, ಹಾಲಿ ಶಾಸಕರಾದ ಶ್ರೀ ರಾಜುಗೌಡ, ಮಾಜಿ ಶಾಸಕರಾದ ಶ್ರೀ ಕೆ.ಎನ್. ರಾಜಣ್ಣ, ಹಾಲಿ ಶಾಸಕರಾದ ಶ್ರೀ ರಾಜುಗೌಡ, ಮಾಜಿ ಶಾಸಕರಾದ ಶ್ರೀ ರಾಜಾವೆಂಕಟಪ ನಾಯಕ, ಮಾಜಿ ಶಾಸಕರಾದ ಶ್ರೀ ಎಂ.ಬಸಪ್ಪ, ಮಾಜಿ ಸಂಶದರಾದ ಶ್ರೀ ರಾಜಾ ಅಂಬಣ ನಾಯಕ ಹಾಲಿ ಶಾಸಕರಾದ ಶ್ರೀ ರಘು ಮೂರ್ತಿ, ಮಾಜಿ ಸಂಸದರಾದ ರಾಜಾ ರಂಗಪನಾಯಕ, ಮಾಜಿ ಶಾಸಕರಾದ ಶ್ರೀ ಗೋವಿಂದಪ್ಪಜುಟ್ಟಲು, ಹಾಲಿ ಶಾಸಕರಾದ ಶ್ರೀ ಸೋಮ ಲಿಂಗಪ್ಪ, ಮಾಜಿ ಶಾಸಕರಾದ ಶ್ರೀ ಶಂಕರ ಕರನಿಂಗ, ಮಾಜಿ ಶಾಸಕರಾದ ಶ್ರೀ ಚಂದ್ರಶೇಖರ ನಾಯಕ, ಮಾಜಿ ಶಾಸಕರಾದ ಶ್ರೀ ಎನ್.ಟಿ.ಬೊಮ್ಮಣ್ಣ, ಮಾಜಿ ಶಾಸಕರಾದ ಶ್ರೀ ಸಾ. ಲಿಂಗಯ್ಯ, ಮಾಜಿ ಸಚಿವರಾದ ಶ್ರೀ ಕೊರಟಗೆರೆ ವೀರಣ್ಣ, ಮಾಜಿ ಶಾಸಕರಾದ ಶ್ರೀ ಮುತ್ತಣ್ಣನವರ್, ಮಾಜಿ ಶಾಸಕರಾದ ಶ್ರೀ ಗಂಗಾಧರ ನಾಯಕ, ಮಾಜಿ ಸಚಿವರಾದ ಶ್ರೀ ರಾಜಾ ಅಮರೇಶ ನಾಯಕ, ಮಾಜಿ ಶಾಸಕರಾದ ಶ್ರೀ ಚಿಕ್ಕಮಾಧು, ಹುಲಿ ಶಾಸಕರಾದ ಶ್ರೀ ಎನ್. ವೈ.ಗೋಪಾಲಕೃಷ್ಣ, ಹಾಲಿ ಶಾಸಕರಾದ ಶ್ರೀ ಶಿವನಗೌಡ ನಾಯಕ, ಮಾಜಿ ಶಾಸಕರಾದ ಶ್ರೀ ಹಂಪಯ್ಯ ಸಾಹುಕಾರ, ಹಾಲಿ ಶಾಸಕರಾದ ಶ್ರೀ ಮಾನ್ವಿ ರಾಜಾವೆಂಕಟಪ್ಪ ನಾಯಕ, ಹಾಲಿ ಶಾಸಕರಾದ ಶ್ರೀ.ಬಿ.ನಾಗೇಂದ್ರ, ಮಾಜಿ ಶಾಸಕರಾದ ಶ್ರೀ ತಿಪ್ಪರಾಜ ಹವಲ್ದಾರ, ಮಾಜಿ ಶಾಸಕರಾದ ಶ್ರೀ ಬಿ.ಎಂ.ನಾಗರಾಜ, ಮಾಜಿ ಶಾಸಕರಾದ ಶ್ರೀ ಮೊಳಕಾಲ್ಮೂರ ತಿಪ್ಪೆಸ್ವಾಮಿ, ಮಾಜಿ ಶಾಸಕರಾದ ಶ್ರೀ ಎಚ್.ಪಿ. ರಾಜೇಶ, ಹಾಲಿ ಶಾಸಕರಾದ ಶ್ರೀ ಜೆ.ಎನ್. ಗಣೇಶ, ಹಾಲಿ ಶಾಸಕರಾದ ಶ್ರೀ ಬಸವನಗೌಡ ದದ್ದಲ, ಮಾಜಿ ಶಾಸಕರಾದ ಶ್ರೀ ರಾಜಾ ರಾಯಪ್ಪ ನಾಯಕ, ಮಾಜಿ ಶಾಸಕರಾದ ಶ್ರೀ ಚಿಕ್ಕಣ್ಣ, ಹಾಲಿ ಶಾಸಕರಾದ ಶ್ರೀ ಸಿದ್ಧರಾಜು ಹಾಲಿ ಶಾಸಕರಾದ ಶ್ರೀ ಅನೀಲ್ ಚಿಕ್ಕಮಾದು, ಮಾಜಿ ಶಾಸಕರಾದ ಶ್ರೀ.ಸುರೇಶಬಾಬು. ಇನ್ನೂ ಮುಂತಾದವರ ಬೆಂಬಲ, ಹಂಬಲಗಳು ವಾಲ್ಮೀಕಿ ಗುರು ಪೀಠದ ಸ್ಧಾಪನೆ, ವಿಸ್ತರಣೆಗೆ ಕಾರಣವಾಗಿವೆ. ಅದರಂತೆ, ವೈದ್ಯರಾದ ಬೆಂಗಳೂರಿನ ರಂಗಯ್ಯ, ಹೊದಿಗೆರೆ ರಮೇಶ್, ದಾವಣಗೆರೆಯ ಶ್ರೀ ಟಿ.ಆರ್.ಶೇಖರಪ್ಪ, ಶ್ರೀ.ಎ.ಲಿಂಗಪ್ಪ, ಶ್ರೀ. ಎಂ.ಎಚ್.ಹನುಮAತಪ್ಪ, ಶ್ರೀ ಬಿ.ವೀರಣ್ಣ, ಶ್ರೀ ಲಿಂಗಸ್ವಾಮಿ, ಶ್ರೀ ಆರ್.ಶೇಖರಪ್ಪ, ಶ್ರೀ ಕಾಂಃ ರಾಮಚಂದ್ರಪ್ಪ, ಶ್ರೀ.ಬಡಗಿ ಕೃಷ್ಣಪ್ಪ, ಶ್ರೀ ಹೂವಿನಮಡು ಚಂದ್ರಪ್ಪ ಹರಿಹರದ ಶ್ರೀ ನಂದಿ ಬಸಪ್ಪ, ಚಾಮರಾಜ ನಗರದ ಶ್ರೀ ಡಿ.ಗುರುಲಿಂಗು, ಚಿತ್ರದುರ್ಗದ ಶ್ರೀ ಡಿ.ಬೋರಪ್ಪ, ಚನ್ನಗಿರಿಯ ಶ್ರೀ ಭೋಜರಾಜ, ಹಿರಿಯೂರಿನ ಶ್ರೀ ಹರ್ತಿಕೋಟೆ ವೀರೇಂದ್ರಸಿAಹ, ಧಾರವಾಡದ ಶ್ರೀ ತೇಜಸ್ವಿ ಕಟ್ಟಿಮನಿ, ಶ್ರೀ ಆರ್.ಬಿ.ಕಿತ್ತೂರು, ಶ್ರೀ ಕೆ,ಇ,ಬಿ,ಶ್ರೀ ಹನಮಂತಪ್ಪ, ಶ್ರೀ ಎಲ್. ಮುನಿಸ್ವಾಮಿ, ಶ್ರೀ ಅಶ್ವಥಪ್ಪ, ತುಮಕೂರಿನ ಶ್ರೀ ಹನುಮಂತಯ್ಯ ಇವರುಗಳ ಮತ್ತು ಇಂತಹ ಅನೇಕ ಮಹನೀಯರ ಸಹಕಾರದಿಂದ ಪೀಠ ಪ್ರವರ್ಧಮಾನಕ್ಕೆ ಬಂತು ಎಂಬುದನ್ನು ಮರೆಯುವಂತಿಲ್ಲ.

ವಾಲ್ಮೀಕಿ ನಾಯಕ ಸಮುದಾಯದ ಬುದ್ಧಿ ಜೀವಿಗಳು, ಜನ ಪ್ರತಿನಿಧಿಗಳು, ಅಧಿಕಾರಿಗಳು, ನೌಕರರು, ವಿವಿಧ ಸಂಘ-ಸಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಒಟ್ಟಾರೆ ಸಮಸ್ತ ಸಮಾಜದ ಬಂಧುಗಳು ಇವರ ಜೊತೆಗೆ ಹರಿಹರ ಮತ್ತು ರಾಜನಹಳ್ಳಿ ವಾಲ್ಮೀಕಿ ಸಮಾಜಮ ಮತ್ತು ಇತರೇ ಸಮಾಜದ ಹಿರಿಯರು ಕೂಡಿಕೊಂಡು ದಾವಣಗೆರೆ ಜೆಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಪರಮಪುಜ್ಯ ಶ್ರೀಶ್ರೀಶ್ರೀ ತಿರುಚ್ಚಿ ಮಹಾಸ್ವಾಮೀಜಿಯವರ ಆಶೀರ್ವಾದ ಹಾಗೂ ಮಾರ್ಗದರ್ಶನದಂತೆ ಜಗದ್ಗುರು ಶ್ರೀಶ್ರೀಶ್ರೀ ಪುಣ್ಯಾನಂದ ಪುರಿ ಮಹಾಸ್ವಾಮಿಗಳನ್ನು ಮಹರ್ಷಿ ವಾಲ್ಮೀಕಿ ಗುರು ಪೀಠಕ್ಕೆ ದಿನಾಂಕ:೦೯-೦೨-೧೯೯೮ ರಂದು ಪ್ರಥಮ ಪೀಠಧ್ಯಕ್ಷರನ್ನಾಗಿ ನೇಮಿಸಲಯಿತು. ಪ್ರಸ್ತುತ ಮಹರ್ಷಿ ವಾಲ್ಮೀಕಿ ಗುರು ಪೀಠದ ಸ್ಥಾಪನೆಗೆ, ವಿಸ್ತರಣೆಗೆ ಜಗದ್ಗುರುಗಳ ನೇಮಕಕ್ಕೆ ಕಾರಣರಾದ ಸಮಾಜದ ಮಹನೀಯರನ್ನು ಈ ಸಂದರ್ಭದಲ್ಲಿ ನೆನೆಯಲೇಬೇಕು.

ಪ್ರಥಮ ಪೀಠಾಧ್ಯಾಕ್ಷರಾದ ಪರಮ ಪೂಜ್ಯ ಜಗದ್ಗುರು ಪುರಿ ಮಹಾಸ್ವಾಮಿಗಳ ಶ್ರಮ ಸ್ಮರಣೀಯವಾದದ್ದು, ಅವರು ತಮ್ಮ ನೇರ-ನುಡಿಯಿಂದ ಎಂಥವರನ್ನು ಒಪ್ಪಿಸುವ ಮತ್ತು ಗೆಲ್ಲುವ ಶಕ್ತಿ ಪಡೆದವರು. ಹಳ್ಳಿಗೆ ಏಕ್ ರ‍್ರಾತಿಯೆಂಬ ಗಾದೆಯಂತೆ ರಾಜ್ಯದ ಎಲ್ಲ ಭಾಗಗಳನ್ನು ಸುತ್ತಾಡಿದರು. ಅಲ್ಲಿ ವಾಸವಾಗಿರುವ ವಾಲ್ಮೀಕಿ ಸಮುದಾಯವನ್ನು ಸಂಘಟಿಸಿದರು. ಸಮಾಜದಲ್ಲಿರುವ ಮೌಢ್ಯ, ಕಂದಾಚಾರ, ಮೂಢನಂಬಿಕೆಗಳAತಹ ಅನಿಷ್ಠ ಪದ್ಥತಿಗಳನ್ನು ದೂರ ಮಾಡಲು ಶ್ರಮಿಸಿದರು. ಸದಾಚಾರ ಸದ್ಗುಣಗಳನ್ನು ಬೆಳೆಯಬೇಕೆಂಬ ಉದ್ದೇಶದಿಂದ ಓದು, ವಿದ್ಯೆ, ಜಪ, ತಪವನ್ನು ಮಾಡಿದರು. ಅದರಂತೆ ಅನೇಕ ಶಿಕ್ಷಣ ಕೇಂದ್ರಗಳನ್ನು ತೆರೆದು ಸಮಾಜದ ಬಡ ವಿದ್ಯಾರ್ಥಿಗಳಿಗೆ ಅನ್ನ ಮತ್ತು ಅಕ್ಷರವನ್ನು ನೀಡಿದರು. ಹೀಗೆ ಸಂಚಾರದಲ್ಲಿರುವಾಗಲೇ ದಾವಣಗೆರೆ ಹತ್ತಿರದ ಕರೂರು ರೈಲ್ವೆ ಗೇಟ್ ಬಳಿ ದಿನಾಂಕ: ೦೩.೦೪.೨೦೦೭ ರಂದು ರೈಲ್ವೆ ಅಪಫಾತದಲ್ಲಿ ದೈವಾಧೀನರಾದರು.

ಈ ನಡುವೆ ಗುರುಪೀಠಕ್ಕೆ ಮತ್ತೋರ್ವ ಪೀಠಾಧಿಪತಿಗಳ ಅಗತ್ಯ ಬಂತು. ಸಮುದಾಯದ ಸನ್ಮಾನ್ಯ ಶ್ರೀ ಸತೀಶ ಜಾರಕಿಹೊಳಿಯವರ ನೇತೃತ್ವದಲ್ಲಿ ಮತ್ತು ಸಮಾಜಮ ಹಿರಿಯರ ಸಹಕಾರದಲ್ಲಿ ಪರಮ ಪೂಜ್ಯ ಜಗದ್ಗುರು ಶ್ರೀಶ್ರೀಶ್ರೀ ಪ್ರಸನ್ನಾನಂದ ಮಹಾಸ್ವಾಮೀಜಿಯವರನ್ನು ದಿನಾಂಕ:೦೬.೦೯.೨೦೦೭ ರಂದು ಮಹರ್ಷಿ ವಾಲ್ಮೀಕಿ ಗುರುಪೀಠಕ್ಕೆ ಹಂಗಾಮಿ ಪೀಠಾಧಿಪತಿಗಳನ್ನಾಗಿ ನೇಮಕ ಮಾಡಲಾಯಿತು. ನಂತರ ದಿನಾಂಕ: ೧೪.೧೦.೨೦೦೮ ರಂದು ಮಂಗಳವಾರ ನಾಡಿನ ಸಮಸ್ತ ಗೌರವಾನ್ವಿತ ಮಠಾಧೀಶರ, ಎಲ್ಲಾ ಪಕ್ಷದ ಜನಪ್ರತಿನಿಧಿಗಳ, ಸಮಾಜದ ಸಮಸ್ತ ಬಂಧುಗಳ ಸಮಕ್ಷಮದಲ್ಲಿ ಪರಮಪೂಜ್ಯರನ್ನು ಎರಡನೆಯ ಪೀಠಾಧ್ಯಕ್ಷರನ್ನಾಗಿ ``ಪಟ್ಟಾಭಿಷೇಕ'' ಮಾಡಲಾಯಿತು.

ಅಲ್ಲಿಂದ-ಇಲ್ಲಿಯವರೆಗೆ ಪರಮ ಪೂಜ್ಯ ಜಗದ್ಗುರು ಶ್ರೀಶ್ರೀಶ್ರೀ ಲಿಂಗೈಕ್ಯ ಪುಣ್ಯಾನಂದ ಪುರಿ ಶ್ರೀಗಳು ಹಾಕಿಕೊಟ್ಟ ಮಾರ್ಗದರ್ಶನದಂತೆ ಜಗದ್ಗುರು ಶ್ರೀಶ್ರೀಶ್ರೀ ಪ್ರಸನ್ನಾಂದ ಸ್ವಾಮೀಜಿಯವರು ಮುನ್ನಡೆಯಿತ್ತಿದ್ದಾರೆ. ಅಲ್ಲದೇ ಸಮುದಾಯದ ಯಾವುದೇ ವ್ಯಕ್ತಿಗಳ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ತಕ್ಷಣವೇ ಅಲ್ಲಿಗೆ ಧಾವಿಸಿದ್ದಾರೆ. ಅಂಥವರಿಗೆ ಧ್ಯರ್ಯ ತುಂಬಿ, ಬಲ ತುಂಬಿದ್ದಾರೆ. ಊರು-ಊರಿಗೆ ತೆರಳಿ ಶಾಂತಿ ಸಭೆಗಳನ್ನು ನಡೆಸಿ ಜನರಲ್ಲಿ ಸೌಹಾರ್ದ ಏರ್ಪಡಿಸಿ, ಸುಖವಾಗಿ ಬಾಳುವಂತೆ ಹರಿಸಿದ್ದಾರೆ.ಸಂವಿಧಾನ ಬದ್ಥ ಹಕ್ಕುಗಳನ್ನು ಪಡೆಯಲಿಕ್ಕೆ ಅನೇಕ ಹೋರಾಟಗಳನ್ನು ರೂಪಿಸಿದ್ದಾರೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಅಲ್ಲದೇ, ವಾಲ್ಮೀಕಿ ಜಯಂತಿ ಮತ್ತು ಬೇರೆ ಬೇರೆ ಸಾಂಸ್ಕೃತಿಕ ನಾಯಕರ ಜಯಂತಿಗಳನ್ನು ಆಚರಿಸಿ ಜನರಲ್ಲಿ ಜಾಗೃತಿಯನ್ನು ಮೂಡಿಸಿದ್ದಾರೆ. ಮುಖ್ಯವಾಗಿ ರಾಜನಹಳ್ಳಯ ಶ್ರೀ ನೂರಾರು ಬಡ ಮಕ್ಕಳಿಗೆ ಉಚಿತವಾಗಿ ಅನ್ನ, ಅಕ್ಷರ, ಅರಿವು ನೀಡಿ ಬೆಳೆಸಿದ್ದಾರೆ. ಇದೀಗ ೩೦೦ ಜನ ಬಡ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ. ಶ್ರೀ ಮಠದ ಆವರಣದಲ್ಲಿ ಕಾಲೇಜು ಕಟ್ಟಡಗಳನ್ನು, ದಾಸೋಹ ನಿಲಯಗಳನ್ನು , ಕಲ್ಯಾಣ ಮಂಟಪವನ್ನು ನಿರ್ಮಿಸಿದ್ದಾರೆ. ಅಲ್ಲದೇ ಇದೀಗ ಶ್ರೀ ವಾಲ್ಮೀಕಿ ಬೃಹತ್ ಮಂದಿರವನ್ನು ನಿರ್ಮಿಸುತ್ತಿದ್ದಾರೆ. ಇದೊಂದು ಅಪ್ರತಿವ ಸಾಧನೆ. ಹೀಗೆ ಸಮುದಾಯದ ಹತ್ತು ಹಲವು ಕಾರ್ಯಗಳಲ್ಲಿ ತಮ್ಮನ್ನು ಹಗಲಿರುಳು ತೊಡಗಿಸಿಕೊಂಡವರು ನಮ್ಮ ಪೂಜ್ಯ ಶ್ರೀಗಳು ಸ್ವಭಾವದಿಂದ ಸೌಮ್ಯರಾಗಿ, ನಿರ್ಧಾರದಿಂದ ದೃಢರಾಗಿ ವಾಲ್ಮೀಕಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಮುನ್ನಡೆಯುತ್ತಿದ್ದಾರೆ. ಇಂತಹ ಪುಜ್ಯರು ಸಮಾಜದ ಎಲ್ಲರ ಸಹಕಾರದಿಂದ ೨೦೧೯ ನೆಯ ಫಬ್ರುವರಿ ೮ ಮತ್ತು ೯ ರಂದು ಶ್ರೀಮಠದಲ್ಲಿ `` ವಾಲ್ಮೀಕಿ ಜಾತ್ರೆ '' ಹಮ್ಮಿಕೊಂಡಿದ್ದಾರೆ. ಇದೊಂದು ವಿನೂತನ ಜಾತ್ರೆ. ಇದು ಕುಲದೈವ ಶ್ರೀ ವಾಲ್ಮೀಕಿಯ ನೆನಪಲ್ಲಿ ನಡೆಯುತ್ತಿರುವ ಜಾತ್ರೆ

ಈ ಜಾತ್ರೆಗೆ ಸಮಾಜದ ಸಮಸ್ತ ಕುಟುಂಬಗಳು ಬರಬೇಕೆಂಬ ಸದಿಚ್ವಿ ಸಮಾಜದ ಮತ್ತು ಸಹೋದರ ಸಮಾಜಗಳ ಎಲ್ಲಾ ಬಂಧುಗಳು ಭಾಗವಹಿಸಬೇಕೆಂಬ ಹಂಬಲ. ಇದು ಪ್ರಥಮ ಜಾತ್ರೆ. ಇಲ್ಲಿ ಧಾರ್ಮಿಕ, ವೈಚಾರಿಕ, ಸಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಕೌಟುಂಬಿಕ, ಆಧ್ಯಾತ್ಮಿಕ ವಿಚಾರಗಳು ಸಂಗಮವಾಗಲಿವೆ. ಈ ಸಲ ವಿಶೇಷವಾಗಿ ಸಮಾಜದ

ಮಹಿಳಾ ಮತ್ತು ನೌಕರರ ಸಮಾವೇಶ ಜರುಗಲಿವೆ. ಸಮಾಜದ ಮತ್ತು ಸಹೋದರ ಸಯಮಾಜದ ಸಾಧಕರಿಗೆ ಹತ್ತಾರು ಪ್ರಶಸ್ರಿಗಳು ವಿತರಣೆಯಾಗಲಿವೆ. ನೂರಾರು ಸನ್ಮಾನಗಳು ನಡೆಯಲಿವೆ. ಇದೂಂದು ಹಬ್ಬ. ಸಡಗರ, ಸಂಭ್ರಮ ಇಂತಹ ಅವಿಸ್ಮರಣೇಯ ಜಾತ್ರೆಗೆ ಕಾರಣರಾದವರು ಪರಮ ಪೂಜ್ಯ ಜಗದ್ಗುರು ಶ್ರೀಶ್ರೀಶ್ರೀ ಪ್ರಸನ್ನಾನಂದ ಮಹಾ ಸ್ವಾಮೀಜಿಯವರು. ವಾಲ್ಮೀಕಿ ಜಾತ್ರಾ ಮಹೋತ್ಸವ ಸಮಿತಿಯವರು, ಮಠದ ಧರ್ಮದರ್ಶಿಗಳು, ಸಮಸ್ತ ವಾಲ್ಮೀಕಿ ಸಮಾಜಮ ಮತ್ತು ಎಲ್ಲಾ ಸಮಾಜಗಳ ಬಂಧು-ಭಗಿನಿಯರು. ಜಾತ್ರೆಗೆ ಕಾರಣಕರ್ತರಾದ ಎಲ್ಲರಿಗೂ ಧನ್ಯವಾದಗಳು ಅರ್ಪಿಸುತ್ತೇವೆ.

© 2020, Shri Maharushi Valmiki Gurupeeta | All Rights Resever