ಕನ್ನಡ ಸಾಹಿತ್ಯಕ್ಕೆ ವಾಲ್ಮೀಕಿ ಲೇಖಕರ ಕೊಡುಗೆ.

ಹರ್ತಿಕೋಟೆ ವೀರೇಂದ್ರಸಿಂಹ

ಕರ್ನಾಟಕ ಸಾಹಿತ್ಯ, ಸಂಸ್ಕೃತಿಗೆ ವಾಲ್ಮೀಕಿ ನಾಯಕ ಸಮುದಾಯದ ಲೇಖಕರ ಕೊಡುಗೆ ಅಪರವಾದುದು. ಈ ನಿಟ್ಟನಲ್ಲಿ ಅನೇಕ ಲೇಖಕರು ಆಧುನಿಕ ಸಂದರ್ಭದಲ್ಲಿ ಬರೆದಿದ್ದಾರೆ. ಅವರನ್ನೂ ಮತ್ತು ಅವರ ಕೃತಿಯನ್ನು ಇಲ್ಲಿ ಸಮೀಕ್ಷಿಸಲಾಗಿದೆ. ಇದು ತುಂಬಾ ಸಂಕ್ಷಿಪ್ತವಾದ ಸಮೀಕ್ಷೆ. ಇಲ್ಲಿ ಬಂದಿರುವ ಮಾಹಿತಿಗಳು ಕೇವಲ ನನ್ನ ಓದಿನ ವ್ಯಾಪ್ತಿಗೆ ದಕ್ಕಿದವುಗಳು. ಇನ್ನುಳಿದಂತೆ ಇನ್ನೂ ಅನೇಕ ಲೇಖಕರು ಮಾಹಿತಿಗಳು ಈ ಲೇಖನದ ವ್ಯಾಪ್ತಿಗೆ ಬಂದಿರಲಿಕ್ಕಿಲ್ಲ. ಅದಕ್ಕಾಗಿ ಅಂತಹ ಲೇಖಕರು ತಪ್ಪು ಭಾವಿಸಬಾರದೆಂದು ಕೋರುತ್ತೇನೆ. ಮುಂದಿನ ನನ್ನ ಇನ್ನೂಂದು ಲೇಖನದಲ್ಲಿ ಆ ಮಾಹಿತಿಗಳನ್ನು ಬಳಸಿಕೊಳ್ಳುತ್ತೇನೆ.

ಹೆಚ್.ವಿ.ವೀರನಾಯಕ: ಬೇಡ ಜನಾಂಗದ ಸಾಂಸ್ಕೃತಿಕ ಚರಿತ್ರೆಯನ್ನು ಅತ್ಯಂತ ವಿಶ್ವಾಸಾರ್ಹ ದಾಖಲೆಗಳ ಮೂಲಕ ಸಂರಚಿಸಿದವರಲ್ಲಿ ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಸ್ಥಳ ಹರ್ತಿಕೋಟೆಯ ಹೆಚ್.ವಿ.ವೀರನಾಯಕರು ಮೊದಲಿಗರು. ಪೌರಾಣಿಕ ಹಾಗೂ ಐತಿಹಾಸಿಕ ಸುಮಾಗ್ರಿಗಳೊಂದಿಗೆ ಇವರು ರಚಿಸಿರುವ ` ಕ್ಷಾತ್ರಾಂಶ ಪ್ರಬೋಧ ' ಮತ್ತು ` ರಾಷ್ರö್ಟ ಸೇವೆಯಲ್ಲಿ ನಾಯಕ ಜನಾಂಗ' ಕೃತಿಗಳು ಮೌಲಿಕವಾಗಿವೆ. ಇವುಗಳ ಜೊತೆಗೆ ` ಗುಮ್ನಳ್ಳಿಕದನ ' ` ಸರ‍್ಯ ' ಹಾಗೂ ಲಾವಣಿಪದಗಳು ಜನಪದ ಕ್ಷೇತ್ರಕ್ಕೆ ಸಂಬAಧಿಸಿದ ಸಂಪಾದನಾ ಕ್ರತಿಗಳು ವೀರನಾಯಕರನ್ನು ನಾವೆಲ್ಲ ಇತಿಹಾಸಕಾರರೆಂದೆ ಗುರುತಿಸುವುದು ವಾಡಿಕೆ. ಆದರೆ,ಇವರ ದುರ್ಗದ ದವಳಕೀರ್ತಿ ಬಲೆಯಲ್ಲಿ ದುರ್ಗದ ಹುಲಿ ಹಾಗೂ ` ಕಣ್ಮರೆಯಾದ ಕನ್ನಡದ ಕಲಿನಾಡು ಕಾದಂಬರಿಗಳು ಸೃಜನಶೀಲ ಕ್ಷೇತ್ರಕ್ಕೆ ಚಾರಿತ್ರಿಕ ದಾಖಲೆಯಾದವು. ಇವರ ಇನ್ನೂಂದು ಬಹು ಮುಖ್ಯ ಕ್ಷೇತ್ರವೆಂದರೆ ನಾಟಕ ` ದುರ್ಗದ ಸಿಂಹಣಿ ಓಬವ್ವ ವೀರಮತ್ತಿ ತಿಮ್ಮಣ್ಣನಾಯಕ ಎಂಬೆರಡು ಐತಿಹಾಸಿಕ ನಾಟಕಗಳು ದ್ರೋಣ ಶಪಥದಂತ ಪೌರಾಣಿಕ ನಾಟಕ ಹಾಗೂ ` ಭಿಕಾರಿ ' ಯಂಥ ಸಾಮಾಜಿಕ ನಾಟಕಗಳನ್ನು ಗಮನಿಸುವುದು ಈ ದೃಷ್ಟಿಯಿಂದ ತುಂಬಾ ಅಗತ್ಯ ಈ ಎಲ್ಲಾ ಕಾರಣಗಳಿಂದ ವೀರನಾಯಕರ ಸಾಹಿತ್ಯ ಮತ್ತು ಸಂಶೋಧನೆಯು ಜನಾಂಗದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಜಗತ್ತನ್ನು ದಾಖಲಿಸುವುದೇ ಆಗಿದೆ. ಒಟ್ಟಾರೆ ಖಚಿತ ದಾಖಲೆ ಮತ್ತು ಮಾಹಿತಿಗಳ ಮೂಲಕ ಕೊಟ್ಟರುವ ಜನಾಂಗಿಕ ಕೊಡುಗೆ ಶ್ರೀಮಂತವಾಗಿದೆ. ಇವರನ್ನು ಕುರಿತಂತೆ ` ಹರತ ಸಿರಿ ' ಎಂಬ ನೆನಪಿನ ಸಂಪುಟವು ಪ್ರಕಟವಾಗಿದೆ.

ಪ್ರೊ. ಕಮಲಾ ಹಂಪನಾ: ಕಳೆದ ನಾಲ್ಕು÷ ದಶಕಗಳಿಂದ ಕನ್ನಡ ಸಾಹಿತ್ಯದಲ್ಲಿ ಬಹುಮುಖ ಸಾಧನೆ ಮಾಡಿದವರು ಪ್ರೊ. ಕಮಲಾ ಹಂಪನಾ. ಪಂಪನAತೆ ಹಿತಮಿತ ಮೃದುವಚನಕ್ಕೆ ಇವರು ಅತ್ಯುತಮ ಉದಾಹರಣೆ ಇವರು ಮೂವತ್ತೆಂಟು ವರ್ಷಗಳ ಕಾಲ ಕನ್ನಡ ಅಧ್ಯಾಪಕರಾಗಿ ಮಾಡಿದ ಬೋದನೆ ನೂರರು ವಿದ್ಯಾರ್ಥಿಗಳ ಪ್ರತಿಭಾ ವಿಕಾಸಕ್ಕೆ ಕಾರಣವಾಯಿತು. ಜೊತೆಗೆ ಮಹಿಳಾ ಸಂವೇದನೆಯನ್ನೇ ಮುಖ್ಯವಾಗಿಟುಕೊಂಡೆ ಮಾಡಿದ ಇವರ ಸಾಹಿತ್ಯಿಕ ಸಾಧನೆ ಶೋಧನೆ ಗಮನಾರ್ಹವಾಯಿತು ಕಮಲಾಹಂಪನಾ ಅವರ ಸಾಹಿತ್ಯಿಕ ಕೃಷಿ ತುಂಬಾ ಶ್ರೀಮಂತವಾದುದು. ಇದಕ್ಕೆ ಸಾಕ್ಷಿ ಅವರು ಇದುವರೆಗೆ ಬರೆದಿರುವ ಒಟ್ಟು ಐವತ್ತಕ್ಕೂ ಮಿಕ್ಕಿದ ಕೃತಿಗಳು ಕಥೆ, ಪ್ರಬಂಧ, ಅನುವಾದ ಸಂಪಾದನೆ, ಜೀವನ ಚರಿತ್ರೆ ವ್ಯಕ್ತಿ ಚಿತ್ರಣ ವಿಮರ್ಶೆ ಹಾಗೂ ವೈಚಾರಿಕ ಬರಹಗಳು ಹತ್ತಾರು ಪ್ರಕರಗಳಲ್ಲಿ ಹರಡಿಕೊಂಡಿವೆ. ನಕ್ಕಿತು ಹಾಲಿನ ಬಟ್ಟಲು , ರೆಕ್ಕೆ ಮುರಿದಿತ್ತು ಚಂದನಾ, ಬಣವೆ, ಇವರ ಕಥಾ ಸಂಕಲನಗಳು. ಇಲ್ಲಿಯು ಅತಿ ಹೆಚ್ಚು ಕಥೆಗಳ ವಸ್ತು ಪಾತ್ರ ಇವರ ವೈಯಕ್ತಿಕ ಬದುಕಿನ ಸುತ್ತ ಹೆಣೆದುಕೊಂಡ ಅನುಭವಗಳೇ ಆಗಿವೆ. ಸಹಜವಾಗಿಯ ಇಲ್ಲೂ ಕತೆಗಳಲ್ಲಿನ ಪಾತ್ರಗಳು ಅಧ್ಯಾಪಕ ವಿಧಾರ್ಥಿ, ಕಲೇಜು ಸಿಬ್ಬಂದಿ, ಸಮಾಜ, ಸರಕಾರಗಳ ಮಧ್ಯದ ಸ್ನೇಹ ಮತ್ತು ಸಂಘರ್ಷಗಳಿAದ ತುಂಬಿಕೊAಡಿವೆ. ಇದರಂತೆ ಲಲಿತ ಪ್ರಬಂಧ ಕ್ಷೇತ್ರದಲ್ಲಿಯೂ ಗಮನಾರ್ಹ ಸಾಧನೆ ಇವರದು. ವೈಚಾರಿಕ ಹಿನ್ನೆಲೆಯ ವಿಚಾರ ವಿಮರ್ಶೆಗಳಿಂದ ಕೂಡಿದ ಬಾಸಿಂಗ, ಬಾಂದಳ ಹಾಗೂ ಬಡಬಾಗ್ನಿ ಕೃತಿಗಳು ಓದುಗರನ್ನು ವಿಶೇಷವಾಗಿ ಒಪ್ಪಿಸುತ್ತದೆ. ವಚನ ಸಾಹಿತ್ಯದ ಮುಂದುವರಿಕೆಯಾಗಿ ಬಂದಿರುವ ` ಬಿಂದಲಿ ' ಮತ್ತು ಬುಗುಡಿ ಎಂಬೆರಡು ಕೃತಿಗಳು ಆಧುನಿಕ ವಚನ ಪರಂಪರೆಯನ್ನು ಗಟ್ಟಿಗೊಳಿಸಿವೆ. ಜೊತೆಗೆ ಜನಸಾಮಾನ್ಯರ ಬದುಕಿನ ವಿಭಿನ್ನ ದೃಷ್ಟಿಕೋನಗಳನ್ನು ಇಲ್ಲಿ ಸಹಜವಾಗಿಯೆ ಸೆರೆಹಿಡಿಯಲಾಗಿದೆ. ಆಕಾಶವಾಣಿಗಾಗಿ ಬರೆದ ಬಕುಳ, ಬಾನಾ ಬೆಳ್ಳಕ್ಕೆ ಎಂಬ ಮೂರು ನಾಟಕ ರೂಪಕಗಳು ಅಪಾರ ಶ್ರೋತೃವರ್ಗವನ್ನು ಮುಟ್ಟಿವೆ . ಕೌಟುಂಬಿಕ ಸಮಸ್ಯೆಗಳು ಇಲ್ಲಿ ಸಾರ್ವಜನಿಕವಾಗುವ ಪರಿಯನ್ನು ಬಿಂಬಿಸಲಾಗಿದೆ. ಶಿಶು ಸಾಹಿತ್ಯಕ್ಕಾಗಿಯೇ ಏಳು ಕೃತಿಗಳಿವೆ ಮುಖ್ಯವಾಗಿ ಹಳವನಕಟ್ಟೆ ಗಿರಿಯಮ್ಮ ಅಕ್ಕಮಹಾದೇವಿ ವೀರವನತೆ ಓಬವ್ವ ಮುಳಬಾಗಿಲು, ಜನ್ನ, ಚಿಕ್ಕವರಿಗಾಗಿ ಚಿತ್ರದುರ್ಗ, ಡಾ.ಬಿ.ಆರ್. ಅಂಬೇಡ್ಕರ್ ಎಂಬ ಕೃತಿಗಳು.

ಪ್ರೊ. ಬರಗೂರು ರಾಮಚಂದ್ರಪ್ಪ: ಕನ್ನಡ ಬಂಡಾಯ ಸಾಹಿತ್ಯ ಸಂದರ್ಭದಲ್ಲಿ ಗಮನಾರ್ಹ ಸಾಧನೆಗೈದವರು ಬರಗೂರು. ಮೊದಲಿನಿಂದಲೂ ಸಾಹಿತ್ಯ ಮತ್ತು ಸಂಘಟನೆಗೆ ತಮ್ಮನ್ನು ಒಡ್ಡಿಕೊಂಡವರು. ನಂಬಿದ್ದನ್ನು ಬರೆಯುತ್ತಾ ಬರೆದದ್ದನ್ನು ಬದುಕುತ್ತಾ ಬೆಳೆದವರು. ಸಾಹಿತ್ಯ ಸಿನೆಮಾ ಸಂಘಟನೆ, ವಿಚಾರ, ವಿಮರ್ಶೆಯಂಥ ಹತ್ತು ಹಲವು ಪ್ರಕಾರಗಳಲ್ಲಿ ಬಲವಾಗಿ ನೆಲೆ ಊರಿದವರು. ವ್ಯವಸ್ಥೆಯೊಂದಿಗೆ ಎಂದೂ ರಾಜಿ ಮಾಡಿಕೊಳ್ಳದ ಮನಸ್ಸು ಹಾಗಾಗಿಯೇ ಬತ್ತದ ಬಂಡಾಯಗುಣ ಇವರದು.

ಕಳದೆರಡು ಮೂರು ದಶಕಗಳಲ್ಲಿ ಇವರ ಬೋಧನೆಯ ಲಾಭ ಪಡೆದ ವಿದ್ಯಾರ್ಥಿಳ ಸಂಖ್ಯೆ ಸಾವಿರಾರು. ಈ ಮಧ್ಯೆ ಬಂಡಾಯ ಸಾಹಿತ್ಯ ಸಂಘಟನೆ, ಕರ್ನಾಟಕ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದಂತ ಶೋಷಿತ ಸಮುದಾಯಗಳ ಧ್ವನಿಯಾದುದು ಇವರ ಸಾಧನೆಯ ಬಹುದೊಡ್ಡ ದಾರಿ. ಒಪ್ಪಿತ ಮೌಲ್ಯವ್ಯವಸ್ಥೆಯನ್ನು ಪ್ರಶ್ನಿಸುತ್ತ. ಪರಂಪರೆಯನ್ನ ಪರಿಶೀಲಿಸುತ್ತಾ ಪ್ಯೂಡಲ್ ದೇವರು ಧರ್ಮದ ಜಾತಿವರ್ಗಗಳನ್ನು ಧಿಕ್ಕರಿಸುತ್ತಲೇ ಬೆಳೆದವರು. ಇದನ್ನೇ ಇವರು ಸಾಹಿತ್ಯ ವಸ್ತುವಾಗಿಸಿಕೊಂಡವರು ಜೊತೆಗೆ ಇಂಥ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಸರಣದ ಉದ್ದಕ್ಕೂ ಕಾಗೆಯ ಪರವಾಗಿ ಜಾಲಿಮರದ ಜೊತೆಯಾಗಿ ವಕಾಲತ್ತು ವಹಿಸಿದವರು. ಈ ಎಲ್ಲಾ ನೆಲೆಗಳಲ್ಲಿ ಬರಗೂರರ ಸಾಹಿತ್ಯ ಕೃಷಿಯನ್ನು ಹೀಗೆ ಸಮೀಕ್ಷಿಸ ಬಹುದೆನಸುತ್ತದೆ.

ಇವರ ಹತ್ತಕ್ಕೂ ಮಿಕ್ಕಿದ ಕಾದಂಬರಿಗಳು, ಹಲವಾರು ವಸ್ತುವೈವಿಧ್ಯತೆಗಳಲ್ಲಿ ಅರಳಿವೆ. ಓದುಗರೊಂದಿಗೆ ಚಿಂತನಾಲವಲಯವನ್ನು ವಿಸ್ತರಿಸೆವೆ. ಸೂತ್ರ ಸೀಳುನೆಲ, ಸಂಗಪ್ಪನ ಸಾಹಸ, ಬೆಂಕಿ, ಭರತನಗರಿ, ಹತ್ತು ಒಂದು ಊರಿನ ಕತೆ, ಸೂರ್ಯ, ಗಾಜಿನಮನೆ. ಸ್ವಪ್ನಮಂಟಪ ಇವರ ಮುಖ್ಯ ಕಾದಂಬರಿಗಳು, ಜಮಿನ್ದಾರಿ ವ್ಯವಸ್ಥೆಯನ್ನು ಧಿಕ್ಕರಿಸುವ ಮೂಲಕ ಸಮತಾ ಸಮಾಜ ರ‍್ಮಿಸುವ ಹಂಬಲವೇ ಇಲ್ಲಿಯ ಪ್ರಬಲ ಭಾವ, ಇದರಂತೆ, ಸುಂಟರಗಾಳಿ, ಕಪ್ಪು ನೆಲದ ಕೆಂಪಕಾಲು, ಬಯಲಾಟದ ಭೀಮಣ್ಣ ಒಂದು ಊರಿನ ಕತೆಯಂಥ ಕಥಾ ಸಂಕಲನಗಳಲ್ಲಿ ವರ್ಗ ಸಂಘರ್ಷವನ್ನು ಪ್ರಧಾನವಾಗಿ ಕಾಣುತ್ತೇವೆ. ಜೊತೆಗೆ ಪರಂಪರೆಯನ್ನು ಪೂಜಿಸುವ ಬದಲು ಪ್ರಶ್ನಿಸಬೇಕೆಂಬ, ಊಳಿಗವನ್ನು ಊರುಳಿಸಬೇಕೆಂಬ ಛಲ ಎದ್ದು ತೋರುತ್ತದೆ. ಮರುಕುಟಿಗೆ, ನೆತ್ತರಲ್ಲಿ ನೆಂದ ಹೂ, ಗುಲಾಮಗೀತೆ, ಕವಿತಾ ಸಂಕಲನಗಳು ಬರಗೂರರನ್ನು ಸೃಜನಶೀಲ ಕ್ಷೇತ್ರದಲ್ಲಿ ಗಮನಾರ್ಹವಾಗಿ ಪರಿಚಯಿಸುತ್ತವೆ. ಮೂಲತ: ಬರಗೂರರದು ಸೌಮ್ಯ ಹೃದಯ. ಅಲ್ಲಿ ಅರಳು ಹಸಿರು ಕಟ್ಟುವ ಕನಸು, ಮಾಡುವ ವಿಚಾರ ನೀಡುವ ತರ‍್ಮಾನಗಳು ದುಡಿವ ವರ್ಗವನ್ನೇ ಕೇಂದ್ರೀಕರಸಿಕೊAಡಿವೆ. ಇವರ ` ಕಾಂಟೆಸಾದಲ್ಲಿ ಕಾವ್ಯ ' ಸಂಕಲನವೂ ಸಹ ಅಧಿಕಾರವನ್ನು ಸ್ವಲ್ಪವಾಗಿ ಕಾಣುವ, ಬಂದ ಆಧಿಕಾರದಲ್ಲಿ ಒಡತನದ ಬೆವರನ್ನೆ ಗ್ರಹಿಸುತ್ತದೆ. ಈ ರೀತಿ ಸಾಚಾತನದಿಂದ ಕೂಡಿದೆ. ಕನ್ನಡ ನಾಡು ಸಂಸ್ಕೃತಿಗಳ ಬೇಡು, ಇಲ್ಲಿ ಎಲ್ಲಾ ಜಾತಿ ಜನವರ್ಗಗಳು ಸಮಬಾಳು-ಸಮಪಾಲುಗಳಿಂದ ಕೂಡಿರಬೇಕೆಂಬ ಬರಗೂರರ ಹಂಬಲ ನಿಲುವು ಸ್ವಷ್ಟವಾಗಿದೆ.

ಬಿ.ಎಲ್.ವೇಣು: ಆರಂಭದಲ್ಲಿ ನಾಡಿನ ಕೆಲ ಪತ್ರಿಕೆಗಳಲ್ಲಿ ಕತೆ ಬರೆಯುವ ಮೂಲಕ ತಮ್ಮ ಸಾಹಿತ್ಯ ಕೃಷಿ ಆರಂಭಿಸಿದ ವೇಣು. ಬರು ಬರುತ್ತು ಕಾದಂಬರಿ ಪ್ರಕಾರವನ್ನು ತಮ್ಮ ಮುಖ್ಯ ವಲಯವಾಗಿಸಿಕೊಂಡದ್ದು ಗಮನಾರ್ಹ ಬೆಳವಣಿಗೆ ಇದುವರೆಗೆ ಐದು ಕಥಾ ಸಂಕಲನ ಇಪ್ಪತ್ತೆರಡು ಕಾದಂಬರಿಗಳು ಪ್ರಕಟವಾಗಿವೆ. ಕಥಾ ಸಂಕಲನಗಳಲ್ಲಿ ನೀಲವರ್ಣ ಸಂವೇದನೆ ಇಟ್ಟುಕೊಂಡ ಕೃತಿ ಇನ್ನುಳಿದಂತೆ ಪ್ರೇಮ-ಪ್ರೀತಿ ಮದುವೆ ಕುಟುಂಬ ಸಂಬAಧಿಸಿದ ವಸ್ತುವಿನ ಕಥೆಗಳಿವೆ. ಕಾದಂಬರಿ ಕ್ಷೇತ್ರದಲ್ಲಿ ವೇಣು ಅವರನ್ನು ಪ್ರಧಾನವಾಗಿ ಪರಿಗಣಿಸುತ್ತೇವೆ. ಸಾಮಾಜಿಕ ಐತಿಹಾಸಿಕ ಹಾಗು ಸಂಗೀತ ಪರ ಪ್ರಕಾರಗಳಲ್ಲಿರುವ ಕಾದಂಬರಿಗಳನ್ನು ಓದುಗರು ಇಂದು ವ್ಯಾಪಕವಾಗಿ ಸ್ವಾಗತಿಸಿಕೊಂಡಿದ್ದಾರೆ ಮುಖ್ಯವಾಗಿ ಪರಾಜಿತ. ಪ್ರೇಮಪರ್ವ ದೊಡ್ಡಮನೆ, ಎಸ್ಟೇಟ್ ಅಜೇಯ ಪ್ರೀತಿ ವಾತ್ಯಲ್ಯ, ಪ್ರೇಮಜಾಲ ರಾಮರಾಜ್ಯದಲ್ಲಿ ರಾಕ್ಷಸರು ಕಾದಂಬರಿಗಳು ಸಮಾಜದಲ್ಲಿ ಪೂಡ್ಯಲ ವ್ಯವಸ್ಥೆಯನ್ನು ಪ್ರಶ್ನಿಸಿದಂತವು. ಇಲ್ಲಿನ ಮುಖ್ಯ ಧ್ವನಿ ದಲಿತಪವರವಾದ ಬಂಡಾಯ ದುಡಿದ ವರ್ಗದ ಮೇಲಾಗುತ್ತಿರುವ ಅಧಿಕಾರ/ಆಡಳಿತ/ಭೂರ್ಜ್ವಾ ವರ್ಗಗಳ ದಾಳಿಯನ್ನು ಛಿದ್ರ ಮಾಡುವ ಆಶಯ ಎದ್ದು ಕಾಣುತ್ತದೆ. ಜಾತಿ ವ್ಯವಸ್ಥೆಯಲ್ಲಿ ನರಳುವ ಪ್ರೇಮಿಗಳ ಸ್ಥಿತಿಯನ್ನು ಹೇಳುತ್ತಲೇ ಅಂತರ್ ಜಾತಿ ವಿವಾಹಕ್ಕೆ ಬೆಂಬಲಿಸುವ ಮನಸ್ಸನ್ನು ಓದುಗನಲ್ಲಿ ತಂದು ಬಿಡುತ್ತಾರೆ. ಒಟ್ಟಾರೆ ಜಾತಿಗೋಡೆ ಒಡೆಯುವ ಮೂಲಕ ಬಿಡುಗಡೆ ಕಾಣುವ ಪ್ರಧಾನ ಹಂಬಲ ಇಲ್ಲಿದೆ. ಇವುಗಳಂತೆ,ಬೆತ್ತಲೆ ಸೇವೆ, ಅತಂತ್ರರು ವಜ್ರಕಾಯ, ಪಾರಿವಾಳ, ಹಾಡುಹಕ್ಕಿ, ಮಹಾನದಿಯಂಥ ಕಾದಂಬರಿಗಳು ಸಾಮಾಜಿಕವಾದ ಸಮಸ್ಯೆಗಳನ್ನು ಮತ್ತು ಇಂಥ ಸಮಸ್ಯೆಗಳ ಹಿಂದಿರುವ ಮುಖವಾಡಗಳನ್ನು ಬಹಿರಂಗಪಡಿಸುತ್ತವೆ. ಸಂಪ್ರದಾಯಗಳ ಹೆಸರಿನಲ್ಲಿ ನಡೆವ ಶೋಷಣೆಯನ್ನು ಪರಿಚಯಿಸುವ ಮೂಲಕ ಅನಕ್ಷರ ವರ್ಗದಲ್ಲಿ ತಿಳುವಳಿಕೆ ತರುವ ಮಹತ್ವದ ಕರ‍್ಯವನ್ನೂ ಈ ಕೃತಿಗಳು ಸಾಧಿಸಿವೆ.

ಗಂಡುಗಲಿ ಮದಕರಿನಾಯಕ, ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ, ಗಂಡಿಲ ಓಬವ್ವ ನಾಗತಿ, ವೀರ ಮತ್ತಿ ತಿಮ್ಮಣ್ಣ ನಾಯಕ ಮತ್ತು ವೀರವನಿತೆ ಒನಕೆ ಓಬವ್ವ ಎಂಬ ಐತಿಹಾಸಿಕ ಕಾದಂಬರಿಗಳು ದುರ್ಗದ ಆಡಳಿತವನ್ನು ಬಿಂಬಿಸುತ್ತುವೆ. ಜೊತೆಗೆ ಪಾಳೆಯಗಾರರ ಒಳತೋಟಯನ್ನು ಬಿಚ್ಚಡುತ್ತಲೇ ಒಂದು ಕಾಲಘಟ್ಟದ ಚರಿತ್ರೆಯ ಏಳು ಬೀಳುಗಳನ್ನು ಪರಿಚಯಿಸುತ್ತವೆ. ಮುಖ್ಯವಾಗಿ ನಾಯಕರ ಆಳ್ವಿಕೆಯಲ್ಲಿ ಆಡಳಿತಗಾರರ ಅಂತರAಗ ಮತ್ತು ಅಲ್ಲಿ ಎದ್ದ ತವಕ ತಲ್ಲಣಗಳನ್ನು ಜನಪದಗೊಳಿಸುವ ಕಾಳಜಿಯನ್ನು ವೇಣು ಬಹು ಎಚ್ಚರಿಕೆಯಿಂದಲೇ ಇಲ್ಲಿ ಸಾಧಿಸಿದ್ದಾರೆ. ಇದು ಜೀಪಪರ ಸಾಹಿತಿಗೆ ಸಾಧ್ಯ ಐತಿಹಾಸಿಕ ವಸ್ತುವಿನ ಮೂಲಕ ವಾಸ್ತವವನ್ನು ಗ್ರಹಸುವ ಪರಿ ಬಹಳ ಜನ ಕಾದಂಬರಿಕಾರರಿಗೆ ಇರದು. ಆದರೆ ವೇಣು ಅವರ ಬಹುತೇಕ ಕಾದಂಬರಿ ಆಶಯ ಜೀವಪರವೇ ಆಗಿದೆ. ` ಕ್ರಾಂತಿಯೋಗಿ' ಮರುಳಸಿದ್ದ ಕಾದಂಬರಿ ಒಂದು ಹೊಸ ಪ್ರಯೋಗವನ್ನೇ ದಾಖಲಿಸಿದೆ. ನಾವು ಮರುಳಸಿದ್ದ ಪರಂಪರೆಯನ್ನೇ ಮತ್ತೂಂದು ಬಗೆಯಲ್ಲಿ ನೋಡುವಂತೆ ಈ ಕಾದಂಬರಿ ಪ್ರೇರೇಪಿಸುತ್ತದೆ.

ಪ್ರೊ. ಎಂ.ವಿ.ಚಿತ್ರಲಿAಗಯ್ಯ : ಮೈಸೂರು ವಿಶ್ವಿವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ದಿವಂಗತ ಪ್ರೊ ಎಂ.ವಿ.ಚಿತ್ರಲಿAಗ್ಯಯನವರು ಇತಿಹಾಸ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಕೃಷಿ ಮಾಡಿದ ಪ್ರಮುಖರು ನಾಯಕ ಜನಾಂಗದ ಇತಿಹಾಸ ಮತ್ತು ಅದರ ಹುಟ್ಟು ಬೆಳವಣಿಗೆಯನ್ನು ಕರಾಮವಕ್ಕಾಗಿ ರಚಿಸಿರುವರು, ಇವರು ಹಲವಾರು ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದರಲ್ಲದೆ, ಅವುಗಳನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸಿದ್ದಾರೆ.

ಇದೇ ಸಾಲಿನಲ್ಲಿ ನಿಲ್ಲುವಂತವರು ಪಾವಗಡದ ದಿವಂಗತ ಶ್ರೀ ರಂಗನಾಯಕರು ` ವಾಲ್ಮೀಕಿ ವಂಶ ಪಾವನಿ ' ಎಂಬ ಕೃತಿ ಎಂಬ ೧೯೩೮ ರಲ್ಲೇ ರಚಿಸಿ ಜನಾಂಗದ ಐತಿಹಾಸಿಕ ಸಂಗತಿಗಳನ್ನು ಗೋತ್ರ ಸೂತ್ರಗಳನ್ನು ಪರಿಚಯಿಸಿದರು. ಮತ್ತೊರ್ವ ಅಣಜಿಯ ದಿವಂಗತ ರೇವಣ್ಣ ಶಾಸ್ತಿçಗಳು ವಾಲ್ಮೀಕಿ ಪುರಾಣ ರಚಿಸಿದ್ದರಲ್ಲದೆ ಅವರ ಹತ್ತಾರು ಕೃತಿಗಳು ಪ್ರಕಟಗೊಂಡಿವೆ ಇವರು ಗಿಡಮೂಲಕೆ ಔಷಧಿ ಕೊಡುವ ಪಂಡಿತರು ಆಗಿದ್ದು ಈ ಕುರಿತು ಕೃತಿಗಳನ್ನು ರಚಿಸಿದ್ದರು.ಇನ್ನೋರ್ವ ಹಿರಿಯರಾದ ದಿ ಸಂತ ಕೆ.ರಂಗದಾಸ್ ಇವರು ವಾಲ್ಮೀಕಿ ದರ್ಶನ, ಶ್ರೀರಾಮ ಕಥಾಸುಧೆ, ಧರ್ಮರಕ್ಷೇತಿ ರಕ್ಷಿತ: ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಸಿದ್ದರು.

ಹಿರಿಯರಾದ ಹುಬ್ಬಳ್ಲಿಯ ಸಿ.ಎಂ ದೇವೇಂದ್ರನಾಯಕರು ವೃತ್ತಿಯಲ್ಲಿ ವಕೀಲರಾಗಿದ್ದು ಪ್ರವೃತ್ತಿಯಲ್ಲಿ ಕವಿ-ಸಾಹಿತಿಗಳಾಗಿದ್ದಾರೆ. ಇವರು ಮಹಾಭಾರತವನ್ನು ಕಾವ್ಯರೂಪದಲ್ಲಿ ಬರೆದು ಐದು ಸಂಪುಟಗಳಲ್ಲಿ ಹೊರತಂದಿರುವರು. ಎನ್.ಟಿ.ರ‍್ರಿಸ್ವಾಮಿಯವರು, ನಾಲ್ಕು ಕವನ ಸಂಕಲನಗಳನ್ನು ಒಂದು ಕಥಾ ಸಂಕಲನ, ಎರಡು ಲೇಖನಗಳ ಸಂಗಹ್ರ ಎರಡು ಜೀವನ ಚರಿತ್ರೆಗಳನ್ನು ಪ್ರಕಟಿಸಿದ್ದಾರೆ. ಉಪನ್ಯಾಸಕರಾಗಿರುವ ದಿವಂಗತ ಡಾ ಸಣೀಕೆರೆ ಸಣ್ಣೋಬಯ್ಯನವರು ಜಾನಪದ ಶೈಲಿಯ ಕವಿ ಇವರ ಕೆಲವು ಕವನಗಳು ಆಡಿಯೋ ಕ್ಯಾಸೆಟ್ನ÷ನಲ್ಲಿ ಬಿಡುಗಡೆಯಾಗಿವೆ. ಅಹೋಬಳ ನರಸಿಂಹಸ್ವಾಮಿ ದೇವರ ಸುಪ್ರಭಾತವನ್ನು ರಚಿಸಿದ್ದಾರೆ ಡಾಕ್ಟರೇಟ್ ಪದವಿಗಳಿಸಿದ್ದಾರೆ ಹತ್ತಾರು ಪ್ರಶಸ್ತಿಗಳು ಇವರಿಗೆ ಸಂದಿವೆ.

ಡಾ.ಭೀಮರಾಮ್ ಗಸ್ತಿ: ಬೆಳಗಾವಿ ಜಿಲ್ಲೆಯ ಯುಮನಾಪುರದವರಾದ ಶ್ರೀ ಭೀಮ್ರರಾವ್ ಗಸ್ತಿ ಅತ್ಯಂತ ದಾರುಣವಾದ ಬಡತನ ಪರಿಸ್ಥಿತಿಯಲ್ಲಿ ಹುಟ್ಟ ಬಂದವರು ಒಬ್ಬ ಬೇಡರ ಹುಡುಗ ಶಾಲೆ ಕಲಿಯುವುದು ಅಸಾಧ್ಯವಾಗಿದ್ದ ಪರಿಸ್ಥಿತಿಯಲ್ಲಿ ಭೀಮರಾವ್ ಗಸ್ತಿಯವರು, ಭೌತಶ್ತಾçಸದಲ್ಲಿ ಎಂ.ಎಸ್.ಸಿ ಕಲಿತು, ಮುಂದೆ ಪಿ.ಹೆಚ್.ಡಿ ಪಡೆದೆರು ತಾವು ನೆಲೆಸಿದ್ದ ಪ್ರದೇಶದಲ್ಲಿ ಬೇಡರೇ ಹೆಚ್ಚು ವಾಸವಾಗಿದ್ದರು. ತಮ್ಮ ಜನ ಅತ್ಯಂತ ಬಡತನ, ದಾರುಣ ಪರಿಸ್ಥಿತಿಯನ್ನು ನೋಡಿ ಮಮ್ಮಲ ಮರುಗಿದರು. ಇವರನ್ನು ಸರಿದಾರಿಗೆ ತರಬೇಕೆಂದು ಅನೇಕ ಸುಧಾರಣೆಗಳನ್ನು ತಂದರು. ಈ ನಿಟ್ಟನಲ್ಲಿ ಘನಘೋರ ಹೋರಾಟದ ಹಾದಿಯನ್ನೇ ಆರಿಸಿಕೊಂಡರು. ತಾವು ನಡೆದು ಬಂದ ಹಾದಿ ಕಷ್ಟ ನಷ್ಟಗಳನ್ನು ಬರೆದು ದಾಖಲಿಸಿಬೇಕೆಂಬ ಇಚ್ಚೆಯಿಂದ ಬರವಣಿಗೆಗಳನ್ನು ಆರಂಭಿಸಿದರು ಇವರ ಮಾತೃಭಾಷೆ ಕನ್ನಡ ಆದರೆ ಕಲಿತಿದ್ದು ಮರಾಠಿ ಅವರು ಮರಾಠಿಯಲ್ಲೇ ಬರೆದರು. ಅವರ ಭಾಷೆ ತುಂಬಾ ಸರಳ. ಆಡುಭಾಷೆಯಲ್ಲೇ ಸೀದಾ ಸಾದಾ ಆಗಿತ್ತು ಅವರ ಬರವಣೆಗೆಯಲ್ಲಿ ಯಾವ ಆಡಂಬರವೂ ಇರಲಿಲ್ಲ. ಮರಾಠಿ ಸಾಹಿತ್ಯದಲ್ಲಿ ಎಲ್ಲರ ಗಮನ ಸೆಳೆಯಿತು. ಇವರ ಬರವಣಿಗೆ ಓದಿದ ಮರಾಠಿ ಓದುಗರು ಸೂರ್ತ್ಪಿಗೊಂಡರು. ಮರಾಠಿ ಭಾಷೆಯ ದೊಡ್ಡ ದೊಡ್ಡ ಸಾಹಿತಿಗಳು ಡಾ ಗಸ್ತಿಯವರಿಗೆ ಆತ್ಮ ಕಥೆಯನ್ನು ಬರೆಯವಂತೆ ಗಮನ ಸೆಳೆದರು. ಆಗ ಡಾ ಗಸ್ತಿಯವರು ಪ್ರೇರಿತರಾಗಿ ಮರಾಠಿ ಭಾಷೆಯಲ್ಲಿಯೇ ` ಬೇರಡ ' ಎಂಬ ಹೆಸರಿನಲ್ಲಿ ತಮ್ಮ ಆತ್ಮ ಕಥೆಯನ್ನು ಬರೆದು ಪ್ರಕಟಿಸಿದರು. ಅದರಲ್ಲಿ ತಮ್ಮ ಬೇಡರ ಸಮಾಜ ಅನುಭವಿಸುವ ನೋವುಗಳನ್ನು ಅವಮಾನಗಳನ್ನು ಸ್ಪಷ್ಟವಾಗಿ ಕಣ್ಣಿಗೆ ಕಟ್ಟುವಂತೆ ಬಿಡಿಸಿಟ್ಟರು. ಈ `ಬೇರಡ' ಕೃತಿಯು ಮರಾಠಿ ಸಾಹಿತ್ಯದಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿತು. ಇದರ ನಾಲ್ಕಾರು ಮುದ್ರಣಗಳು ಹೊರಬಂದಿವೆ. ಕನ್ನಡ ತೆಲಗು, ಹಿಂದಿ ಗುಜರಾತಿ ಭಾಷೆಗಳಿಗೂ ಅನುವಾದಗೊಂಡಿದೆ. ಮಹಾರಾಷ್ರö್ಟದ ಅನೇಕ ಬಹುಮಾನ, ಪ್ರಶಸ್ತಿಗಳನ್ನು ಬೇರಡ ಕೃತಿ ಪಡೆದುಕೊಂಡಿದೆ. ಇವರು ಮರಾಠಿಯಲ್ಲಿ ೩೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಮರಾಠಿ ` ಬೇರಡ' ಕೃತಿಯು ಕನ್ನಡದಲ್ಲಿ `ವಾಲ್ಮೀಕಿಯಾಗಿ' ಅನುವಾದಗೊಂಡಿದೆ. ಕನ್ನಡಪ್ರಭ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟಗೊಂಡಿದೆ. ಈ ಕೃತಿಯ ಅನುವಾದಕರು ಡಾ ಸರಜೂ ಕಾಟ್ಕರ್ ತುಂಬಾ ಸೊಗಸಾಗಿ ಅನುವಾದಿಸಿದ್ದಾರೆ. ಓದುಗರ ಮನ ತಟ್ಟುವಂತ ಕೃತಿ ಇದಾಗಿದೆ. ಡಾ ಗಸ್ತಿಯವರು ಕನ್ನಡಪ್ರಭ ಪತ್ರಿಕೆಯ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಪ್ರಶಸ್ತಿಯ ಮೊತ್ತ ಒಂದು ಲಕ್ಷ ರೂಪಾಯಿಗಳು. ಇವರು ಮರಾಠಿಯಲ್ಲಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಇವರ ಬರಹಗಳು ಪತ್ರಿಕೆಗಳಲ್ಲೂ ಬೆಳಕು ಕಂಡಿವೆ. ತಮ್ಮ ಹೋರಾಟದ ಹೆಜ್ಜೆಗಳನ್ನು ಬೇಡರ ನೋವು ಸಂಕಟಗಳನ್ನು ಆ ಕೃತಿಗಳಲ್ಲಿ ಗುರುತಿಸಿದ್ದಾರೆ. ಬೇಡರನ್ನು ಬೇರಡ, ನಾಯಕ, ವಾಲ್ಮೀಕಿಯ ವರೆಂದು ಗುರ್ತಿಸುತ್ತಾರೆ ಮಹಾ ಧೈರ್ಯಶಾಲಿಗಳೆಂದು ಇತಿಹಾದಲ್ಲಿ ಗುರುತಿಸಲ್ಪಟ್ಟದ್ದ ಈ ಜನಾಂಗ ಅನೇಕರು ರಾಜರಾಗಿ ಸಾಮ್ರಾಜ್ಯಗಳನ್ನು ಕಟ್ಟದರೂ, ಅವರ ಮುಂದಿನ ಜನಾಂಗವು ಪೋಲಿಸರಿಂದ ತಪ್ಪಿಸಿಕೊಳ್ಳುವುದರಲ್ಲಿಯೇ ವೇಳೆಯನ್ನು ಕಳೆಯಬೇಕಾಯಿತು ಎಂಬ ಸತ್ಯವಾದ ಎಲ್ಲಾ ವಿವರಗಳನ್ನು ಡಾ ಭೀಮರಾವ್ ಗಸ್ತಿಯವರು ತಮ್ಮ ಆತ್ಮ ಕಥೆಯಲ್ಲಿ ಮನಕಲುಕುವಂತೆ ತೆರೆದಿಟ್ಟಿದಾರೆ. ವಾಲ್ಮೀಕಿ ಜನಾಂಗದ ಜಾಗೃತಿಗೆ ಸುಧಾರಣೆಗೆ ಅನಿರ್ಹಶಿ ಶ್ರಮಿಸಿದ ಮಹಾನ್ ವ್ಯಕ್ತಿ ಡಾ. ಗಸ್ತಿಯವರು.

ಡಾ.ಟಿ.ಎನ್.ಗಂಡುಗಲಿ : ಚಿತ್ರದುರ್ಗ ನಾಯಕ ಅರಸರ ವಂಶಸ್ಥರೆAದೇ ಕರೆದುಕೊಳ್ಳುತ್ತಿದ್ದ ಟಿ.ಎನ್.ಗಂಡುಗಲಿಯವರು, ಚಿತ್ರದುರ್ಗದಲ್ಲಿ ಗಂಡುಗಲಿ ಮದಕರಿನಾಯಕನ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿ, ಅದರಲ್ಲಿ ನಾಯಕ ಅರಸರು ಬಳಸುತ್ತಿದ್ದ ಹಲವು ರೀತಿಯ ಯುದ್ದಾಯುಧಗಳನ್ನು ಹಾಗೂ ಇತರೆ ಐತಿಹಾಸಿಕ ವಸ್ತು ಸಾಮಾಗ್ರಿಳನ್ನು ಸಂಗ್ರಹಿಸಿದ್ದರು. ಚಿತ್ರದುರ್ಗದ ಇತಿಹಾಸವನ್ನು ಇವರ ಬಾಯಿಂದ ಕೇಳುವುದೇ ಒಂದು ಸೊಗಸು. ಚಿತ್ರದುರ್ಗವನ್ನು ಆಳ್ವಿಕೆ ಮಾಡಿದ ನಾಯಕರ ಇತಿಹಾಸವನ್ನು ಮೈ ನವಿರೇಳುವಂತೆ ಬಣ್ಣಿಸುತ್ತಿದ್ದರು. ಚಿತ್ರದುರ್ಗದ ಕೋಟೆ ಕೊತ್ತಲುಗಳ ಇತಿಹಾಸವನ್ನು ತಿಳಿಸುವ ` ನೋಡ ಬನ್ನಿ ಚಿತ್ರದುರ್ಗ' ದೇಶದ್ರೋಹಿ ದೊಡ್ಡ ಮದಕರಿ ಎಂಬ ಕೃತಿಗಳನ್ನು ಹೊರತಂದಿದ್ದರು. ಇವರಿಂದ ಇನ್ನೂ ಹಲವು ಕೃತಿಗಳು ಹೊರಬಂದಿವೆ. ಈ ಹಿಂದೆ ಇವರ ಸಂಪಾಕತ್ವದಲ್ಲಿ `` ನಾಯಕ ಮಣಿ " ಎಂಬ ವಾರ ಪತ್ರಿಕೆ ಪ್ರಕಟವಾಗುತ್ತಿತ್ತು. ಈ ಪತ್ರಿಕೆಯ ಮೂಲಕ ಚಿತ್ರದುರ್ಗದ ಪಾಳೆಗಾರರ ಬಗ್ಗೆ ಹಾಗೂ ನಾಯಕ ಜನಾಂಗದ ಬಗ್ಗೆ ಅರಿವು ಮೂಡಿಸುವ ಹಲವು ಲೇಖನಗಳನ್ನು ಬರೆದರು. ಇತರೆ ಲೇಖಕರಿಂದಲೂ ಬರೆಸಿದರು ಅವರು ಬರೆದ ಲೇಖನಗಳು ಓದುಗರ ಮನ ಸೂರೆಗೊಂಡವು. ಕೆಲವು ದಿನಗಳ ಬಳಿಕ ನಾನಾ ಕಾರಣಗಳಿಂದ ಪತ್ರಿಕೆ ನಿಂತು ಹೋಯಿತು. ಅವರು ಬರೆದ ಎಷ್ಟೋ ಪುಸ್ತಕಗಳು ಮುದ್ರಣಗೊಂಡು ಪ್ರಕಟವಾಗಲಿಲ್ಲ.

ಡಾ. ತೇಜಸ್ವಿ ಕಟ್ಟೀಮನಿ: ಸಮಾಜದ ಸಾಹಿತ್ಯಕ, ಸಾಮಾಜಿಕ ಹಾಗೂ ಸಂಘಟನಾತ್ಮಕ ಸಂದರ್ಭದಲ್ಲಿ ಡಾ ತೇಜಸ್ವೀ ಕಟ್ಟೀಮನಿ ಮತ್ತು ಹರ್ತಿಕೋಟೆ ವೀರೇಂದ್ರಸಿAಹ ಅವರ ಹೆಸರುಗಳು ಅತ್ಯಂತ ಮಹತ್ವಪೂರ್ಣವಾದವು. ಕಳೆದ ಎರಡು ದಶಕಗಳು ಉದ್ದಕ್ಕೂ ಇವರು ನೀಡಿರುವ ಶ್ರಮ ಮಾಡಿರುವ ಸಾಹ್ಯಿತ ಸಾಧನೆ ದಾಖಲೆಗೆ ಅರ್ಹವಾದುದು.

ಎಪ್ಪತ್ತರ ದಶಕದ ಹಲವು ಜನಪದ ಮತ್ತು ಪ್ರಗತಿಪರ ಚಳುವಳಿಗಳು ಡಾ.ಕಟ್ಟೀಮನಿಯವರನ್ನು ಸೆಳೆದುಕೊಂಡವು ವಿಶೇಷವಾಗಿ ಬಂಡಾಯ ಸಾಹಿತ್ಯ ಸಂಘಟನೆ ಮತ್ತು ದಲಿತ ಚಳುವಳಿಗಳಲ್ಲಿ ಇವರು ಗಂಭೀರವಾಗಿ ತೊಡಗಿಸಿಕೊಂಡರು ಈ ಹಿನ್ನಲೆಯಲ್ಲಿ ಸಂಘಟನೆಗಳು ಇವರನ್ನು ಬೆಳೆಸಿವೆ; ಇವರು ಸಂಘಟನೆಯನ್ನು ಬೆಳೆಸಿದ್ದಾರೆ. ತುರ್ತ ಪರಿಸ್ಥಿತಿಯ ಸಂದರ್ಭದಿAದ ಹಿಡಿದು ಇವತ್ತಿನವರೆಗೂ ತಮ್ಮನ್ನು ಜನಪರವಾಗಿ ಗುರುತಿಸಿಕೊಂಡಿದ್ದು ಗಮನಾರ್ಹ.

ಡಾ.ತೇಜಸ್ವೀ ಕಟ್ಟಿಮನಿಯವರು ಮೂಲಕ: ಹಿಂದಿ ಭಾಷೆಯ ಅಧ್ಯಾಪಕರು, ಜೊತೆಗೆ ತಮ್ಮ ಬಹುತೇಕ ಬರಹ ಹಿಂದಿ ಹಾಗು ಕನ್ನಡದಲ್ಲಿ ಸಮಸಮನಾಗಿ ಬರೆದವರು. " ಮೋಹನ ರಾಕೇಶ ಮತ್ತು ಲಂಕೇಶ ಅವರ ಕಥಾ ಸಾಹಿತ್ಯ ಒಂದು ತೌಲನಿಕ ಅಧ್ಯಯನ '' ವೆಂಬ ಶೀರ್ಷಿಕೆ ಅಡಿಯಲ್ಲಿ ಪಿ.ಎಚ್.ಡಿ. ಸಂಶೋದನೆ(೧೯೮೬) ನಡೆಸಿ ಪದವಿ ಪಡೆಯುವ ಮೂಲಕ ಉಭಯಭಾಷೆ ಹಾಗೂ ಸಾಹಿತ್ಯದಲ್ಲಿ ಅಧಿಕೃತಿ ಪ್ರಾವಿಣ್ಯಗಳಿಸಿದ್ದು ಸಣ್ಣ ಸಂಗತಿಯಲ್ಲಿ. ಅವರಂತೆ " ಲಂಕೇಶ್ ಕಾ ಕಥಾ ಸಾಹಿತ್ಯ: ಕಥ್ಯ ಚೌರ್ ಶಿಲ್ಪ ಕುರಿತಂತೆ ವಿಶೀಷ ಕೃತಿ ನೀಡಿದಾಗ ಕನ್ನಡ ಮತ್ತು ಹಿಂದಿ ಸಂದರ್ಭದಲ್ಲಿ ಕಟೀಮನಿಯವರು ಗಮನಾರ್ಹವಾಗಿ ಗುರುತಿಸಿಕೊಂಡರು. " ನಾವು ಮೆಚ್ಚಿದ ಹಿಂದೀ ಕತೆಗಳು '' ಇವರ ಇನ್ನೂಂದು ಬಹುಮುಖ್ಯ ಸಂಪಾದನ ಕೃತಿ. ಕನ್ನಡದಲ್ಲಿ ಇದು ಹೊಸ ಪ್ರಯೋಗವನ್ನೆ ಸೃಷ್ಟಿಸಿತು.

ಡಾ.ತೇಜಸ್ವಿ ಕಟ್ಟೀಮನಿಯವರದು ಮೂಲತ: ಕವಿ ಹೃದಯ ಧಾರವಾಡದ ಪರಿಸರದಲ್ಲಿ ಸಹಜವಾಗಿ ಅರಳಿದ ಕವಿತೆಗಳು ಇವರಲ್ಲಿ ಹತ್ತಾರು-ನೂರಾರು. ಇವುಗಳಲ್ಲಿ "ಮುಂಗಾರು ಮಳೆ ' ಮತ್ತು ಹುಡುಗಿ ಪ್ರೀತಿಸುವುದೇ ಹೀಗೆ ಎಂಬೆರಡು ಸಂಕಲನಗಳು ಅಪಾರ ಪ್ರತಿಭೆಯನ್ನು ಪ್ರಕಟಿಸಿವೆ. ವೈವಿಧ್ಯಮಯ ವಸ್ತುವನ್ನು ಸರಳ ಸುಂದರ ಶೈಲಿಯಲ್ಲಿ ನಿರೂಪಿಸುವ ಇವರ ಶ್ರಮ ಆಕರ್ಷಕವಾದುದು. ಜನಪದ ಕ್ಷೇತ್ರದಲ್ಲೂ ಇವರ ಕೃಷಿ ಮೆಚ್ಚುವಂತದ್ದು.

ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ರಿವಾಯತ ಪದಗಳು ಸಾಮಗ್ರಿ ಮುಖ್ಯ ಶೋಧಕರಿಗೆ ಆಕರವಾಗಿದೆ. ಉತ್ತರ ಕರ್ನಾಟಕ ಭಾಗದ ಜೀವದ್ರವ್ಯ ಇಲ್ಲಿವೆ. ಇಂಥ ಕೃತಿಯನ್ನು ಕಟ್ಟೀಮನಿಯವರು ನೀಡುವಲ್ಲಿ ತುಂಬಾ ಶ್ರಮವಹಿಸಿದ್ದಾರೆಂದು ಕೃತಿಯೇ ಸಾಕ್ಷಿ ನುಡಿಯುತ್ತದೆ. ಕವಿ, ವಿಚಾರವಾದಿ, ಚಿಂತಕ, ಹೋರಾಟ ಜೀವಿಯಾಗಿರುವ ಡಾ ತೇಜಸ್ವಿ ಕಟ್ಟೀಮನಿಯವರು ಮಂಡಲವರದಿ ಒಂದು ಅಧ್ಯಯನ ಎಂಬ ಕೃತಿ ನೀಡಿದ್ದು ಸಹಜವಾಗಿದೆ. ತೊಂಬತ್ತರ ದಶಕದಲ್ಲಿ ಭುಗಿಲೆದ್ದ ಮಂಡಲವರದಿ ವಿರೋಧಿಗಾರರ ಜೀವವಿರೋಧಿ ಮನಸ್ಮಗಳಿಗೆ ಇಲ್ಲಿ ಸಮರ್ಥ ಉತ್ತರಗಳಿವೆ. ಅಂದರೆ ವಾಸ್ತವ ಸಂದರ್ಭಕ್ಕೆ ಜೀವಪರ ನಿಲುವುಗಳಿಗೆ ತತ್‌ಕ್ಷಣವೇ ಸ್ಪಂದಿಸಿದ ಸಾಹಿತ ಡಾ.ತೇಜಸ್ವಿ ಕಟ್ಟೀಮನಿಯವರೆಂಬುದಕ್ಕೆ ಇದು ಮಹತ್ವದ ದಾಖಯಾಗಿದೆ. ಕರ್ನಾಟಕ ಸಂಸ್ಕೃತಿ ಕಾಲಕಾಲಕ್ಕೆ ಪಡೆದುಕೊಂಡ ಹಲವು ಪಲ್ಲಟಗಳಿಗೆ ಡಾ.ಕಟ್ಟೀಮನಿಯವರು ಸ್ಪಂದಿಸಿದ ರೀತಿ ಅಮೋಘವಾಗಿದೆ. ಪ್ರಗತಿಪರ ನಿಲುವುಗಳೇ ಇವರನ್ನು ಆಯಾ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಲ್ಲುವಂತೆ ಮಾಡಿವೆ ಎನಿಸುತ್ತದೆ. "ಜ್ಯೋತಿಬಾಫುಲೆ '' ಯವರ ಜೀವನ ಚರಿತ್ರೆ ಬರೆಯುವ ಮೂಲಕ ಕನ್ನಡಕ್ಕೆ ಮರಾಠಿ ಪ್ರಗತಿಪರ ಚಿಂತಕರನ್ನೂ ಪರಿಕಯಿಸಿದ್ದು ಸಹ ಇದೇ ಕಾರಣಕ್ಕೆ ಅದರಂತೆ ಎಂಬತ್ತರ ದಶಕದಿಂದಲೂ ಪ್ರೊ ಅರವಿಂದ ಮಾಲಗತ್ತಿಯವರೊಂದಿಗೆ ಸಂಪಾದಿಸಿದ ಸಾಹ್ಯಿತ ಸಂಗಾತಿ ಸಾಹ್ಯಿತಕ ಪತ್ರಿಕೆ ವಿಚಾರ ಪ್ರಚೋದಕ ಲೇಖನಗಳನ್ನು ಪ್ರಕಟಿಸಿತು. ಈಗ ಜನಾಂಗದ ಸಾಂಸ್ಕೃತಿಕ ವಲಯವನ್ನು ಸವಿವರವಾಗಿ ಪರಿಚಯಿಸುತ್ತಿರುವ " ವಾಲ್ಮೀಕಿ ಬಂಧು '' ಮಾಸ ಪತ್ರಿಕೆ ಡಾ. ತೇಜಸ್ವಿ ಕಟ್ಟೀಮನಿಯವರ ಕ್ರಿಯಾಶೀಲ ಕೇಂದ್ರ ಇದುವರೆಗೆ ಲೇಖನಗಳನ್ನು ಸಂಗ್ರಹಿಸಿ ತಂದಿರುವ ಇವರ ಇತ್ತೀಚಿನ ಲೇಖನ ಸಂಕಲನ ಕತ್ತಲೆಯ ಅಳಿವಿನಾಚೆ ಶೈಕ್ಷಣಿಕ ಶಿಸ್ತು ಹೊಂದಿರುವ ಕೃತಿ ಒಟ್ಟಾರೆ ಡಾ. ಕಟ್ಟೀಮನಿಯವರ ಸಾಹಿತ್ಯಕ ಸೇವೆ ಕರ್ನಾಟಕದ ಸಂಸ್ಕೃತಿಯ ವಿಸ್ತಾರಕ್ಕೆ ಅನುಮಪ ಕಾಣಿಕೆ ಒದಗಿಸಿದೆ. ಕೊಪ್ಪಳ ಭಾಗದ ಬಾಲ್ಯಯೌವ್ವನ ಧಾರವಾಡ ಭಾಗದ ಪ್ರಗತಿಪರ ಚಂತನೆಗಳ ಹಿಂದೆ ಬೇಟೆ ಸಂಸ್ಕೃತಿಯ ಸಂವೇದನೆ ದಟ್ಟವಾಗಿದೆ ಎಂಬುದನ್ನು ನಾವ್ಯರು ಮರೆಯುವಂತಿಲ್ಲ. ಇವರನ್ನು ಕುರಿತು ಸ್ನೇಹ ಸಂಪದ ಅಭಿನಂದನಾ ಸಂಪುಟಿ ಪ್ರಕಟವಾಗಿದೆ. ಈ ಸಧ್ಯ ಇವರು ಮಧ್ಯಪ್ರದೇಶದ ಅಮರಕಂಟಕ್‌ನಲ್ಲಿರುವ ಇಂದಿರಾಗಾAಧಿ ಬುಡಕಟ್ಟು ವಿ.ವಿ.ಯ ಕುಲಪತಿಗಳಾಗಿದ್ದಾರೆ. ರಾಜ್ಯ ,ರಾಷ್ಟç ಮತ್ತು ಅಂತರಾಷ್ಟಿçÃಯ ಮಟ್ಟದ ಹಲವಾರು ಪ್ರಶಸ್ತಿಗಳು ಇವರಿಗೆ ಲಭಿಸಿವೆ.

ಹರ್ತಿಕೋಟೆ ವೀರೇಂದ್ರಸಿAಹ: ಇವರ ಶ್ರಮ ಹೆಚ್ಚಾಗಿ ಸಾಹಿತ್ಯಕ್ಕಿಂತ ಸಂಘಟನೆಗೆ ವಿನಿಯೋಗಿಸಲ್ಪಟ್ಟಿತು. ದಿನಕ್ಕೂಂದು ಊರು, ಊರಿಗೊಂದು ಭಾಷಣ, ಬಿಡುವಿದ್ದಾಗ ಬರೆದ ಲೇಖನ. ಸಂಪಾದಿಸಿದ ಕೃತಿ ಹತ್ತಾರಿವೆ ಜನಾಂಗದ ಬಗ್ಗೆ ಅದಮ್ಯ ಅಭಿಮಾನ. ಜನಾಂಗದ ಸರ್ವಾಂಗೀಣ ಅಭಿವೃದ್ಧಿಗೆ ಇವರಲ್ಲಿ ಹತ್ತಾರು ಯೋಜನೆಗಳಿವೆ. ಆಲೋಚನೆ ಯೋಜನೆಗಳ ಮಧ್ಯೆ ಸಾಹಿತಿ ಕಲಾವಿದ, ರಾಜಕಾರಣಿ ವರ್ತಕ ಮುದುಕ, ಯುವಕರೆನ್ನದೆ ಸಂಘಟನೆಯಲ್ಲಿ ಬಳಸಿಕೊಂಡವರು; ಬೆಳಸಿ ಖಷಿ ಪಟ್ಟವರು. ಈ ಕಾರಣದಿಂದಲೇ ಹರ್ತ್ತಿಕೋಟೆ ವೀರೇಂದ್ರಸಿAಹವರನ್ನು ಪ್ರೀತಿಸುವ ಹೃದಯಗಳು ಕರ್ನಾಟಕದ ಉದ್ದಗಲಕ್ಕೂ ಇವೆ.

ಹರ್ತಿಕೋಟೆ ವೀರೇಂದ್ರಸಿAಹವರಲ್ಲಿ ಈ ರೀತಿಯ ಮನೋಭೂಮಿಕೆ ಸಿದ್ಧ ಪಡುವರಲ್ಲಿ ತಂದೆ ವೀರನಾಯಕರ ಪ್ರಭಾವ ಕಾರಣವಾಗಿದೆ. ಏಕೆಂದರೆ ಅವರಿಗೆ ಇಂಥ ಹಸಿವಿತ್ತು ಅದನ್ನ ಮಗನಾಗಿ ಮುಂದುವರೆಸಿದ ಕೀರ್ತಿ ವೀರೇಂದ್ರಸಿAಹ ಅವರಿಗೆ ಸಲ್ಲುತ್ತದೆ. ಇವರು ಜೈಲು ಅಧಿಕಾರಿಯಾಗಿ ೩೮ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಜೈಲು ಅಧಿಕಾರಿಯಾಗಿದ್ದರೂ ಸಾಹಿತ್ಯ ಗೀಳು ಹತ್ತಿದ್ದರಿಂದ ಇವರ ಸಂಪಾದಕತ್ವದಲ್ಲಿ ಹೊರ ಬಂದ ಬಿಚ್ಚುಗತ್ತಿ ವಾಲ್ಮೀಕಿ ಜ್ಯೋತಿ ವಾಲ್ಮೀಕಿ ಕಿರಣ, ವಾಲ್ಮೀಕಿ ಮಂದಾರ ಸ್ಮರಣಸಂಚಿಕೆಗಳು ಜನಾಂಗದ ಸಮ್ಮೇಳನ ಹಾಗೂ ವಾಲ್ಮೀಕಿಶ್ರೀಗಳ ಪಟ್ಟಾಭಿಷೇಕದ ಸಂದರ್ಭದ ಸವಿನೆನಪಿಗಾಗಿ ಪ್ರಕಟಸಿದವು. ಘಟ್ಟಿಹೋಸಹಳ್ಳಿ ಗಟ್ಟಿಗ ನೆನಪಿನ ಸಂಪುಟವು ಸ್ವಾತಂತ್ರö್ಯ ಸೇನಾನಿ ಸಮಾಜವಾದಿ ಧುರೀಣ ಸಿ. ಮಲೆಸಿದ್ದಪ್ಪನವರ ಸ್ಮರಣೆಗಾಗಿ ಹೊರಬಂದ ಗ್ರಂಥ ಈ ಎಲ್ಲ ಸಂಚಿಕೆ ಸಂಪುಟಳಲ್ಲಿ ಬಂದಿರುವ ಹಲವು ಲೇಖನಗಳು ಜನಾಂಗದ ಉಗಮ, ವಿಕಾಸ, ಅಭಿವೃದ್ಧಿ, ಭಾಷೆ, ಸಂಸ್ಕೃತಿ ಕುಟುಂಬದ ವಿವರಗಳೆಲ್ಲ ಒಳಗೊಂಡಿವೆ. ಹಾಗಾಗಿ ಜನಾಂಗವನ್ನು ಕುರಿತು ಅಧ್ಯಯನ ಮಾಡುವವರು ಇವುಗಳನ್ನು ಓದಲೇಬೇಕು. ಇವರು ಪ್ರಕಟಿಸಿರುವ ಇತಿಹಾಸಕಾರ ಹರ್ತಿಕೋಟೆ ವೀರನಾಯಕರ ನೆನಪಿನ ಬೃಹತ್ ಸಂಪುಟ " ಹರಿತಿ ಸಿರಿ '' ಅಧ್ಭುತ ಕೃತಿ. ಕನ್ನಡ ಸ್ಮರಣ ಸಂಪುಟಗಳಲ್ಲೇ ಧಾಖಲಾರ್ಹವಾದುದು. ಚರಿತ್ರೆ ಬಾಷೆ, ಕಲೆ,ವಾಸ್ತು ವಿಶೇಷಗಳೆಲ್ಲ ಇಲ್ಲಿವೆ. ಈ ಸಂಪುಟದ ಸಂಪಾದಕರಾದ ಲಕ್ಷಣೆ ತೆಲಗಾವಿಯವರ ಶ್ರಮ ಮತ್ತು ಶಿಸ್ತುಗಳನ್ನು ಖಂಡಿತ ಮೆಚ್ಚಲೇಬೇಕು. ಇದಕ್ಕೆ ಪ್ರೇರಣೆ ನೀಡಿದವರು ವೀರೇಂದ್ರಸಿAಹರು ಎನ್ನುವುದನ್ನು ಮರೆಯುವಂತಿಲ್ಲ. ತಮ್ಮದೇ ಆದ "ವಾಲ್ಮೀಕಿ ಸಾಹಿತ್ಯ ಸಂಪದ '' ಮೂಲಕ ವೀರೇಂದ್ರಸಿAಹರವರು ಪ್ರಕಟಿಸಿರುವ ಕೃತಿಗಳು ೩೦ ಕ್ಕೂ ಹೆಚ್ಚೆವೆ. ಅನೇಕ ಉದಯೋನ್ಮುಖ ಹಾಗೂ ಹಿರಿಯ ಬರಹಗಾರರನ್ನು ಈ ಪ್ರಕಾಶನದಿಂದ ಬರೆಸುವ ಬೆಳೆಸುವ ಕ್ರಿಯೆ ಅನುಕರಣೀಯವಾಗಿದೆ, ಅದರಂತೆ ಜನಾಂಗದ ಸಾಹಿತ್ಯ ಕೃತಿಗೆ ಪ್ರತಿವರ್ಷ ನೀಡುವ ಇವರೇ ಸ್ಥಾಪಿಸಿರುವ ಹರತಿ ವೀರನಾಯಕ ಪ್ರಶಸ್ತಿ ಸಹ ಸಾಹಿತ್ಯ ಕೃಷಿಯ ಭಾಗವಾಗಿದೆ. ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠವುಇವರ ಸಾಂಸ್ಕçತಿಕ, ಸಾಹಿತ್ಯಕ, ಸಮಾಜಿಕ ಸೇವೆಯನ್ನೂ ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಸರ್ಕಾರಿ ಅಧಿಕಾರಿಯಾಗಿ ಉತ್ತಮ ಸೇವೆ ಮಾಡಿದ್ದರಿಂದ ಇವರಿಗೆ ರಾಷ್ಟçಪತಿಗಳ ಶ್ಲಾಘನೀಯ ಸೇವಾ ಪದಕ ಪ್ರಶಸ್ರಿಯೂಸಂದಿದೆ.

ಹೀಗೆ ಹತ್ತಾರು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿವೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಕನ್ನಡ ಸೇವೆ ಪರಿಗಣಿಸಿ ೨೦೧೮ ರಲ್ಲಿ ಯರಬಳ್ಳಿಯಲ್ಲಿ ನಡೆದ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಿದೆ. ಈ ಎಲ್ಲಾ ದೃಷ್ಠಯಿಂದ ಹರ್ತಿಕೋಟೆ ವೀರೇಂದ್ರಸಿAಹರವರು ಕರ್ನಾಟಕ ಸಂಸ್ಕೃತಿಗೆ ಮರೆಯಲಾರದ ಹಲವು ಕೊಡೆಗೆ ನೀಡುತ್ತಿರುವುದು ವಾಸ್ತವ.

ಡಾ. ರಂಗರಾಜ್ ವನದುರ್ಗ: ಇವರು ಯಾದಗಿರಿ ಜಿಲ್ಲೆಯ ವನದುರ್ಗದವರು ಸಾಹಿತ್ಯಧ್ಯಯನದಲ್ಲಿ ಹೆಚ್ಚು ಆಸಕ್ತಿ ಹೊಂದಿದ ಇವರು ಉತ್ತಮ ವಾಗ್ಮಿಗಳು. ಕರ್ನಾಟಕ ಸಾಹಿತ್ಯ ಮತ್ತು ಇತಿಹಾಸ ಸಂಶೋಧನಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಧನೆಗೈದವರಲ್ಲಿ ಪ್ರಮುಖರಾಗಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಎಂ.ಎ.ಪದವಿ ಗಳಿಸಿದ ಇವರು ಸುರಪುರ ಸಂಸ್ಥಾನದ ಬಗ್ಗೆ ಅಧ್ಯಯನ ಕೈಗೊಂಡು ಮಹಾಪ್ರಬಂಧ ಮಂಡಿಸಿ ಪಿಹೆಚ್‌ಡಿ ಪಡೆದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಇವರು ರಚಿಸಿರುವ ಸುಮಾರು ೩೨ ಕ್ಕೂ ಹೆಚ್ಚು ಕೃತಿಗಳು ಗಂಭೀರ ಚಿಂತನೆಗೆ ಕಾರಣವಾಗಿವೆ. ಬುಡಕಟ್ಟು ಸಮಾಜಗಳ ಹಲವಾರು ಮಗ್ಗುಲುಗಳನ್ನು ತಮ್ಮ ಸಂಶೋಧನಾ ಬರಹಗಳಲ್ಲಿ ಪ್ರಕಟಿಸಿದ್ದಾರೆ. ವಿಶೀಷವಾಗಿ ನಾಯಕ ಸಮುದಾಯದ ನೋವು ನಲಿವುಗಳನ್ನು ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳನ್ನು ಬರಹದ ಮೂಲಕ ಮನದಟ್ಟು ಮಾಡಿದಾರೆ.

ಜನಪದ ಸಾಂಸ್ಕೃತಿಕ ವೀರರು ಬಂಡಾಯ ಸಾಹಿತ್ಯ ಸಂವೇದನೆ, ಸಾಹಿತ್ಯ ಮತ್ತು ಜನಪರ ಚಳವಳಿ, ಸಾಹಿತ್ಯ ಮತ್ತು ಸಮೂಹ ಮಾಧ್ಯಮದಂತಹ ಹತ್ತಾರು ಕೃತಿಗಳನ್ನು ಸಂಪಾದಿಸಿ ನಾಡಿಗೆ ನೀಡಿದ್ದಾರೆ. ಇವರ ಇತ್ತೀಚಿನ ಕವಿತಾ ಸಂಕಲನ ` ಮಾಯದ ಗಾಯ ' ವರ್ಷದ ವಿಶೇಷ ಕಾವ್ಯವಾಗಿ ಹೊರಹೋಮ್ಮಿದೆ. ತಳಸಮುದಾಯದ ಸಂವೇದನಗಳನ್ನು ವಿನೂತನವಾಗಿ ದಾಖಲಿಸಿರುವ ಕೃತಿಯಿದು. ಡಾ ರಂಗರಾಜ್ ವನದುರ್ಗ ಅವರು ಪ್ರಾಧ್ಯಾಪಕರಾಗಿ ವಿಶ್ವ ವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸಿದ ಅನುಭವಿಗಳು. ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯದಲ್ಲಿ ವೌಲ್ಯಮಾಪನ ಕುಲಸಚಿವರಾಗಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಕಾಡೂರು ಕಾದಂಬರಿ ಕೃತಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ ಇವರ ಸಾಹಿತ್ಯ ಶಿಕ್ಷಣ ಕ್ಷೇತ್ರದ ಸೇವೆಯನ್ನು ಗಮನಿಸಿ ಹೆಚ್ ನರಸಿಂಹಯ್ಯ ಪ್ರಶಸ್ತಿ ರಾಜ ವೆಂಕಟಪ್ಪನಾಯಕ ಪ್ರಶಸ್ತಿ ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ ಕುವೆಂಪು ಸಾಧನ ಪ್ರಶಸ್ತಿಗಳು ಲಭಿಸಿವೆ. ಇವರು ರಚಿಸಿರುವ ಅವ ಮತ್ತು ಇವ ನಾಟಕವು ಸಂಕ್ರಮಣ ನಾಟಕ ಪ್ರಶಸ್ತಿಯನ್ನು ಪಡೆದಿದೆ. ಹರಿಹರನ ಸಾಂಸ್ಕೃತಿಕ ಲೋಕ ಶಹಪುರ ತಾಲ್ಲೂಕಿನ ಶಾಸನಗಳು ಸುರಪುರ ಸಂಸ್ಥಾನ ದೇಸಾಯರ ದರ್ಬಾರ್ ಕನಕ ದಾಸರ ವೈಚಾರಿಕತೆ ಎಂಭ ೩೨ಕ್ಕೂ ಹೆಚ್ಚು ಕೃತಿಗಳನ್ನು ನೂರಾ ಎಪ್ಪತ್ತಕ್ಕೂ ಹೆಚ್ಚು ಪ್ರಮುಖ ಲೇಖನಗಳನ್ನು ಪ್ರಕಟಿಸಿದ್ದಾರೆ. ಇವೆಲ್ಲ ಸಾಧನೆ ಗಮನಿಸಿ ಇವರಿಗೆ ಯಾದಗಿರಿ ಜಿಲ್ಲೆಯ ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆಮಾಡಲಾಗಿತ್ತು. ಒಟ್ಟಾರೆ ಕನ್ನಡ ಸಹಿತ್ಯ ಸಾಂಸ್ಕೃತಿ ಕ್ಷೇತ್ರಕ್ಕೆ ತಮ್ಮದೇ ಆದ ಗಟ್ಟಿ ಸೇವೆಯನ್ನು ತಂದು ಕೊಟ್ಟ ಇವರು ನಾಯಕ ಸಮುದಾಯಕ್ಕೆ ಸ್ಪೂರ್ತಿ ಮತ್ತು ಶಕ್ತಿಯಾಗಿದ್ದಾರೆ.

ದೇವೇಂದ್ರ ಮಾಧವನವರ: ಮೂವತ್ತು ವರ್ಷಗಳವರೆಗೆ ಶಿಕ್ಷಣ ಕ್ಷೇತ್ರದಲ್ಲಿ ಉಪನ್ಯಾಸಕರಾಗಿ ಕರ‍್ಯನಿರ್ವಹಿಸಿದ ಪ್ರೊ.ದೇವೇಂದ್ರ ಮಾಧವನವರ ಜನಾಂಗದ ಪ್ರತಿಭಾವಂತ ಸಾಹಿತಿ, ರೋಣ ತಾಲ್ಲೂಕಿನ ಹೊಳೆ ಆಲೂರು ಮೂಲಕ ನಾಡಿನ ಗಮನ ಸೆಳದದ್ದು ವಿಶೇಷವಾಗಿ ಸಂಶೋಧಕರಾಗಿ ` ಕನಕದಾಸರ ' ಬಗ್ಗೆ ಹೊರಬಂದ ಇವರ ಕೃತಿ ಅನೇಕ ವಾಗ್ವಾದಗಳನ್ನೇ ಸೃಷ್ಟಿ ಮಾಡಿತು. ಕನಕದಾಸರು ಕುರುಬರಲ್ಲ ಬೇಡರು ಎಂಬುದೇ ಇವರ ವಾದ. ಇದು ಹಲವು ದಾಖಲೆಗಳ ಮೇಲೆ ಬರೆದ ವಿಶ್ವಾಸಾರ್ಹ ಶೋಧನ ಅಧ್ಯಯನವೆಂಬುದು ಪ್ರೊ. ಎಂ,ಎA, ಕಲಬುರ್ಗಿಯಂತವರ ಒಪ್ಪಿಗೆಯೂ ಆಗಿದೆ. ಇದರಂತೆ ವಾಲ್ಮೀಕಿ ರಾಮಾಯಣ ಮಹಾಕಾವ್ಯವನ್ನು ವಿಶೇಷವಾಗಿ ಅಧ್ಯಯನ ಮಾಡಿದ್ದು ಇವರ ಸಾಹಿತ್ಯಕ ಹಸಿವನ್ನು ತೋರಿಸುತ್ತದೆ.

ಮೋಹನ ನಾಗಮ್ಮನವರ: ನಮ್ಮ ನಡುವಿನ ಸದ್ಯದ ಬಹುಮುಖ್ಯ ಬರಹಗಾರರಲ್ಲಿ ಮೋಹನ ನಾಗಮ್ಮನವರು ಸಹ ಒಬ್ಬರು. ಲಂಕೇಶ ಪ್ರತಿಕೆ ಮೂಲಕ ಸಮೂಹ ಮಾಧ್ಯಮಕ್ಕೆ ಹೊಸ ಛಾಪನ್ನು ನೀಡಿದ್ದು ನಾಗಮ್ಮನವರ ದೊಡ್ಡಸಾಧನೆ ಬಂಡಾಯ ಮತ್ತು ದಲಿತ ಸಾಹಿತ್ಯ ಚಳುವಳಿ ಇವರನ್ನು ನಾಡಿಗೆ ಸಾಹಿತ್ಯಿಕವಾಗಿ ಪರಿಚಯಿಸಿದ್ದು ಎಲ್ಲಾರಿಗೂ ಗೊತ್ತಿರುವ ಸಂಗತಿ. `ವಿಧಾನಸೌಧ' ಹಾಗೂ ಅಗ್ರಹಾರದ ಒಂದು ಸಂಜೆ ಎಂಬ ಎರಡು ಕವಿತಾ ಸಂಕಲನಗಳು ರಾಜ್ಯದ ವಿಮರ್ಶಕರನ್ನು ಮತ್ತು ಓದುಗರನ್ನು ವಿಶೇಷವಾಗಿ ಸೆಳೆದಿವೆ. ಕಾರಣ ಇವರು ದುಡಿಸಿಕೊಂಡಿರುವ ವಸ್ತು ಬಳಸಿರುವ ಭಾಷೆ ನಿರೂಪಿಸಿರುವ ವಿಧಾನ ನಮ್ಮ ನಿಮ್ಮ ನಡುವಿನ ಸಂಗತಿಗಳೇ ಆಗಿನಂತಿವೆ. ಆದ್ದರಿಂದಲೇ ಮೋಹನ ನಾಗಮ್ಮನವರ ಅವರಿಗೆ ಮುದ್ದಣ್ಣ ಕಾವ್ಯ ಪ್ರಶಸ್ತಿ ಕನ್ನಡ ಸಾಹಿತ್ಯ ಪರಿಷತ್ತಿನ ರತ್ನಾಕರವರ್ಣಿ ಮುದ್ದಣ್ಣ ಪ್ರಶಸ್ತಿಗಳು ಲಭಿಸಿದವು.ಸಂಕಟಪುರದ ನಾಟಕ ಪ್ರಸಂಗ ಇವರ ಮೊದಲ ಕಥಾ ಸಂಕಲನ. ಇಲ್ಲಿ ಒಟ್ಟು ಹನ್ನೆರಡು ಕತೆಗಳಲ್ಲಿ ಹರಡಿಕೊಂಡಿರುವ ವೈವಿಧ್ಯಮಯವಾದ ವಸ್ತು ನಿರೂಪಣ ಕ್ರಮ ಪಾತ್ರರಚನೆಯ ರೀತಿ ಅದ್ಭುತವಾಗಿದೆ. ಕನ್ನಡ ಕಥಾಲೋಕದಲ್ಲಿ ನಾಗಮ್ಮನವರ ಈ ಕೃತಿ ಹೊಸ ಸರ‍್ಪಡೆ ಎಂದರೆ ಅತಿಶಯೋಕ್ತಿಯಾಗಲಾರದು. ಧಾರವಾಡ ಭಾಗದ ಜನಪದ ಭಾಷಾ ಶ್ಯೆಲಿಯ ಸೊಗಡು ಇಲಿಯ ವಸ್ತುವನ್ನು ಅನೇಕ ತರಲೆ ತಾಪತ್ರಯ, ತಕರಾರುಗಳು ಇಲ್ಲಿ ಮಾತಾಗಿವೆ, ಮೌನವಾಗಿ ಸ್ನೇಹ ಸಂಘರ್ಷವಾಗಿದೆ.

ಸುಕನ್ಯಾ ಮಾರುತಿ: ಎಪ್ಪತ್ತರ ಬಂಡಾಯ ಸಾಹಿತ್ಯ ಸಂಘಟನೆ ಮೂಲಕ ನಾಡಿಗೆ ಕವಯತ್ರಿಯಾಗಿ ಪರಿಚಯವಾದರು ಸುಕನ್ಯಾ ಮಾರುತಿಯವರು ಇವರ ತಾಜ ಮಹಲ್ ಕವಿತಾ ಸಂಕಲನಾ ಮಹಿಳಾ ಸಂವೇದನೆ ದಾಖಲಿಸುವಲ್ಲಿ ಅತ್ಯಂತ ಯಶಸ್ವಿ ಪಾತ್ರ ನಿರ್ವಹಿಸಿತು. ವಿಶೇಷವೆಂದರೆ ಸುಕನ್ಯಾ ಅವರದು ಶೋಷಿತ ಮಹಿಳೆಯ ದು:ಖ ದುಮ್ಮಾನಗಳನ್ನು ದಾಖಲಿಸುವುದು ದೇವದಾಸಿ ಮಹಿಳೆ ಮೇಲೆ ಇದುವರೆಗೆ ನಡೆದ/ನಡೆಯುತ್ತಿರುವ ಪಟ್ಟಭದ್ರರ ಲಂಪಟತನ. ಶ್ರೀಮಂತ ಕುಳಗಳ ಅಕ್ರಮಣತನವನ್ನು ಬಯಲಿಗೆಳೆಯುವುದು. ಇಂಥ ದುಷ್ಟರನ್ನು ಜಾಲಾಡಿಸುವಲ್ಲಿ ಇವರು ಕಾವ್ಯದ ಮೂಲಕ ತೋರುವ ಆಕ್ರೋಶಕ್ಕೆ ನಿಜವಾದ ಕಳಕಳಿ ಇದೆ. ಆಳುವವರ ಬಗ್ಗೆ ಆಕ್ರೋಶ ಆಳಿಕಿಕೊಳ್ಳುವವರ ಬಗ್ಗೆ ಅನುಕಂಪ ಇವರ ಕಾವ್ಯದಪ್ರಧಾನ ಆಶಯ. ಇದರಂತೆ ಸಾಹಿತ್ಯದ ಜೊತೆ ಜೊತೆಯಲ್ಲಿಯೆ ಸಮಾಜದ ಅನೇಕ ಸಭೆ ಸಮಾರಂಭ, ಚಳುವಳಿಗಳಲ್ಲಿ ಇವರು ಸಕ್ರಿಯವಾಗಿ ತೊಡಗಿಸಿಕೊಂಡುದ್ದುAಟು.

ಡಾ.ಮಂಜುನಾಥ ಬೇವಿನಕಟ್ಟಿ: ಇವರ ಸಾಹಿತ್ಯಕ ಕೃಷಿ ಜಾನಪದ ಕ್ಷೇತ್ರಕ್ಕೆ ಸಂಭAಧಿಸಿದ್ದು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಮಾಡಿರುವ ಇವರ ಕ್ರಿಯಾಶೀಲ ಚಟುವಟಿಕೆಗಳು ದಾಖಲೆಗೆ ಅರ್ಹವಾದವು. ತಮ್ಮನ್ನು ಜಾನಪ್ ಅಧ್ಯಯನದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆAಬುದಕ್ಕೆ ಸಾಕ್ಷಿ ಹತ್ತು ಹಲವಾರು ಬುಡಕಟ್ಟು ಅಧ್ಯಯನ ವಿಭಾಗಕ್ಕೆ ಪೂರಕವಾಗಿ, ಅಷ್ಟೇ ಪ್ರಧಾನವಾಗಿ ಜನಪದ ವಿಭಾಗವನ್ನು ವೈಚಾರಿಕ ಹಂತದಲ್ಲಿ ಕಟ್ಟಿದವರು ಡಾ. ಮಂಜುನಾಥ ಅವರು ಸಂಪಾದಿಸಿರುವ ` ಮೈಲಾರ ಲಿಂಗನಕಾವ್ಯ ' ಅತ್ಯಂತ ಮಹತ್ವದ್ದು ಕುರುಬ ಜನಾಣಗವೂಂದರ ಸಾಂಸ್ಕçತಿ ಜನಪದ ನಂಬಿಕೆಗಳು ಸುಳಿ ದೇಸೀ ಜಾಗತೀಕರಣ ದೇಸೀ ಚಹರೆ ಮೊದಲಾಗ ಕೃತಿಗಳು ಹೊರಬಂದಿದೆ. ಅದರಂತೆ ಇವರು ಜನಪದ ವಿಭಾಗದ ಮುಖ್ಯಸ್ಥರಾಗಿದ್ದಾಗ ತಮ್ಮ ವಿಭಾಗದಿಂದ ತರುತ್ತಿದ್ದ ಜಾನಪದ ಅರ್ಧವಾರ್ಷಿಕ ಸಂಚಿಕೆ ಅಧ್ಯಯನಯೋಗ್ಯ ಸಂಚಿಕೆಯಾಗಿದೆ ಇಂದಿನ ಜಾನಪದವನ್ನು ಹೊಸ ಶಿಸ್ತುಗಳಿಂದ ಅಭ್ಯಾಸಿಸಲು ಈ ಸಂಚಿಕೆಯ ಲೇಖನಗಳು ಪ್ರಭಾವ ಬೀರುತ್ತವೆ.

ಡಾ.ಅಮರೇಶ ಯತಗಲ್: ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಕರ್ನಾಟಕ ಪಾಳೇಗಾರರ ಕುರಿತಾಗಿ, ಅಧ್ಯಯನದಲ್ಲಿ ನಿರತರಾಗಿರುವ ಇವರು ಕರ್ನಾಟಕ ಅರಸು ಮನೆತನಗಳ ವಿಶಿಷ್ಟ ಸಾಂಸ್ಕೃತಿಕಾಚರಣೆಗಳು: ಚಾರಿತ್ರಿಕ ಅಧ್ಯಯನ ಎಂಬ ಮಹಾಪ್ರಬಂಧವನ್ನು ಪ್ರೊ. ಲಕ್ಷ÷್ಣಣ್ ತೆಲಗಾವಿಯವರ ಮಾರ್ಗದರ್ಶನದಲ್ಲಿ ರಚಿಸಿ ಚರಿತ್ರೆ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿಯಿAದ ಪಿಹೆಚ್‌ಡಿ ಪದವಿಯನ್ನು ಪಡೆದಿದ್ದಾರೆ. ಈಗಾಗಲೇ ಇವರ ರಾಜಭಕ್ತಿ ಮತ್ತು ಇತರ ನಾಟಕಗಳು ಇತಿಹಾಸ ಇಂಚರ, ಇತಿಹಾಸ ಮಂಥನ, ಶಿವಕೃಪೆ, ವಾಲ್ಮೀಕಿ-ಸಮುದಾಯದ ಮತ್ತು ಚರಿತ್ರೆ ಮುಂತಾದ ಕೃತಿಗಳನ್ನು ರಚಿಸಿರುವರಲ್ಲದೆ, ಒಡಲುರಿ, ಏಕಲವ್ಯ,ಶರಣಪಥ, ಸ್ವರ್ಣಪ್ರಭೆ ಸಾಧಕ ವಾಲ್ಮೀಕಿ ಮಂದಾರ ನೆನಪಿನ ಬುತ್ತಿ ಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ. ಇವರ ಹಲವು ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ನಾಲ್ಕು ಶಿಶುಗೀತೆಗಳ ಧ್ವನಿ ಸುರುಳಿಗಳುಹೊರಬಂದಿವೆ. ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರು ಹೌದು ಆಕಾಶವಾಣಿಯಲ್ಲಿ ಅನೇಕ ಕರ‍್ಯಕ್ರಮಗಳನ್ನು ನೀಡಿರುವುದಲ್ಲದೆ ಎಜ್ಯುಸ್ಯಾಟ್ ರೇಡಿಯೋ ಕಾರ್ಯಕ್ರಮ, ಕೇಳಿಕಲಿ ರೀಡಿಯೋ ಕಾರ್ಯಕ್ರಮ ಅಂತರ್ ಕ್ರಿಯಾತ್ಮಕ ಕರ‍್ಯಕ್ರಮಗಳ ಕೃತಿ ರಚನಾಕಾರರಾಗಿ ಭಾಗವಹಿಸಿದ್ದಾರೆ. ಅನೇಕ ಸಂಘ-ಸAಸ್ಥೆಗಳ ಕರ‍್ಯಕಾರಿ ಸಮಿತಿಯ ಸದಸ್ಯರಾಗಿಯೂ ಕರ‍್ಯನಿರ್ವಹಿಸುತ್ತಿದ್ದಾರೆ.

ಕರ್ನಾಟಕ ಪಾಳೇಗಾರರ ಕುರಿತಾಗಿ, ಸದಾ ಕ್ಷೇತ್ರಕರ‍್ಯದ ಮೂಲಕ ಅನೇಕ ಮಾಹಿತಿಗಳನ್ನು ಸಂಗ್ರಹಿಸುವುದರ ಮೂಲಕ ರಾಷ್ಟç, ರಾಜ್ಯ, ಪ್ರಾದೇಶಿಕ ಮತ್ತು ಸ್ಥಳಿಯಮಟ್ಟದ ವಿಚಾರ ಸಂಕಿರಣದಲ್ಲಿ ತಮ್ಮ ವಿದ್ವತ್‌ಪೂರ್ಣ ಪ್ರಬಂಧಗಳನ್ನು ಮಂಡಿಸುವುದರ ಮೂಲಕ ಇತಿಹಾಸಕಾರರ ಗಮನವನ್ನು ಸೆಳೆದಿದ್ದಾರೆ ಸೊಕ್ಷö್ಮವಾದ ಅಂಶಗಳ ಕುರಿತಾಗಿಯೂ ತಲಸ್ವರ್ಶಿ ಅಧ್ಯಯನ ನಿರತರಾಗಿರುವ ಯತಗಲ್ ಇವರಿಂದ ಸಂಚಾಲಕರಾಗಿಯೂ ಹತ್ತು ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಉತ್ತಮ ವಾಗ್ಮಿಗಳೂ ಆಗಿರುವ ಇವರಿಗೆ ಹರತಿ ವೀರನಾಯಕ ಸಂಶೋಧನಾ ಪ್ರಶಸ್ತಿಯೊಂದಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

ಡಾ.ವಿರೂಪಾಕ್ಷಿ ಪೂಜಾರಹಳ್ಳಿ: ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿರುವ ಡಾ.ವಿರೂಪಾಕ್ಷಿ ಪೂಜಾರಹಳ್ಳಿಯವರು. ಚರಿತ್ರೆ ವಿಭಾಗದಲ್ಲಿದ್ದುಕೊಂಡೇ ಜನಾಂಗದ ಮಹತ್ವಪೂರ್ಣ ಇತಿಹಾಸವನ್ನು ಕುರಿತು ಅಧಿಕೃತವಾಗಿ ಮಾತಾಡಬಲ್ಲ ಅಭ್ಯಾಸ ಇವರಲ್ಲಿದೆ. ಮಧ್ಯಕಾಲೀನ ಕನ್ನಡ ಕಾವ್ಯಗಳಲ್ಲಿ ಬೇಟೆ ಸಂಸ್ಕೃತಿಯನ್ನು ಕುರಿತಂತೆ ಮಹಾಪ್ರಬಂಧ ಬರೆದು ಪಿ ಹೆಚ್.ಡಿ ಪದವಿ ಪಡೆದವರು ಹೀಗಗಿ, ಬೇಟೆ ಸಂಸ್ಕೃತಿಯ ಬಗ್ಗೆ ಇವರಲ್ಲಿ ಅಪಾರ ಮಾಹಿತಿಗಳಿವೆ. ಚಿತ್ರದುರ್ಗ ಭ್ಯಾಗದ ನಾಯಕ ಪಾಳೇಪಟ್ಟುಗಳ ಬಗ್ಗೆ ವ್ಯಾಪಕ ಅಧ್ಯಯನದಲ್ಲಿ ತೊಡಗಿರುವ ಡಾ.ಪೂಜಾರಹಳ್ಳಿಯವರು ನಮ್ಮ ನಡುವಿನ ಭರವಸೆಯ ಚರಿತ್ರಾಕಾರರು ಗಾದರಿಪಾಲನಾಯಕ ಕೃತಿಯಲ್ಲಿ ಈ ಎಲ್ಲಾ ಅಂಶ ಗಮನಿಸಬಹುದು ಇದು ಇವರ ಸಂಪಾದನ ಕೃತಿ ಜನಪದ ಕಾವ್ಯ ಜನಪದ ಕಾವ್ಯ ಕಲೆಗಳ ಮೂಲಕ ಗಾದರಿ ಪಾಲನಯಕನ ಹಾಗು ಈ ಮೂಲಕ ಮಧ್ಯಕಾಲೀನ ಕರ್ನಾಟಕದ ಬೇಡರ ಸಂಸ್ಕೃತಿಯನ್ನು ತಿಳಿಯಲ್ಲು ಇಲ್ಲಿ ವಿಶೇಷ ಪ್ರಯತ್ನ ಮಾಡಲಾಗಿದೆ. ಇವರ ಈ ಕೃತಿಗೆ ಹರತಿ ವೀರನಾಯಕ ಸಂಶೋಧನಾ ಸಾಹಿತ್ಯ ಪ್ರಶಸ್ತಿಯೊಂದಿಗೆ ಹತ್ತಾರು ಪ್ರಶಸ್ತಿಗಳು ಲಭಿಸಿರುವುದು ಮಹತ್ವದ ಸಂಗತಿ ಇವರ ಇತರ ಕೃತಿಗಳೆಂದರೆ ಬೇಡ ಬುಡಕಟ್ಟಿನ ಚರಿತ್ರೆ ಮತ್ತು ಸಂಸ್ಕೃತಿ ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ವೀರರು ಶ್ರೀಕೃಷ್ಣದೇವರಾಯ ವಾಲ್ಮೀಕಿ, ಸಿರಿ, ವಾಲ್ಮೀಕಿ ಸಮುದಾಯದ ಪ್ರಾತ: ಸ್ಮರಣೀಯರು ಮೊದಲಾದವು ಪ್ರಕಟಗೊಂಡಿವೆ.

ಮಲ್ಲಿಕಾರ್ಜುನ ಕಡಕೋಳ: ಇವರು ನಮ್ಮ ಸಮಾಜದ ಮತ್ತೊಬ್ಬ ಪ್ರತಿಭಾವಂತ ಬರಹಗಾರು ಮೂಲತ: ಮಡಿವಾಳಪ್ಪನವರ ಊರಿನವರು. ಈಗ ದಾವಣಗೆರೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಉದ್ಯೋಗಿಗಳಾಗಿದ್ದರು. ಪ್ರತಿಕಾ ಅಂಕಣಗಳೇ ಇವರ ಮೊದಲ ಬರಹಗಳು ನಂತರ ಎಪ್ಪತ್ತರ ದಶಕದಲ್ಲಿ ಹೊರಬಂದ ಇವರ ಕಥಾ ಜಗತ್ತು ಅದ್ಭುತವಾದುದು. ಉತ್ತರ ಕರ್ನಾಟಕದ ಭಾಷಲಯಗಳಲ್ಲಿ ಮಾತನಾಡುವ ಇವರ ಕತೆಯ ಪಾತ್ರಗಳು ತುಂಬಾ ಆಪ್ತ ವಾತಾವರಣವನ್ನು ನರ‍್ಮಿಸಿದವು. ಜವಾರಿ ಭಾಷೆಗೆ ಬಹುಶ: ಆ ತಾಕತ್ತು ಇರುವುದರಿಂದಲ್ಲೇ ಕಡಕೋಳರ ಕೃಷಿ ಅಪಾರ ಓದುಗ ವಲಯವನ್ನು ಗಳಿಸಿತು. ಆದರೆ ಮುಂದೆ ಲೇಖನವೇ ಸಿಂಹಪಾಲು ಸಮಯ ತೆಗೆದುಕೊಂಡಾಗ ಇವರೊಳಗಿನ ಕತೆಗಾರ ನಿಧಾನ ದೂರ ಸರಿದ. ಸರಿದಹೋಗಿಲ್ಲ ಅಗಾಗ ಬರುತ್ತಾನೆ. ಆದರೆ ದಾವಣಗೆರೆ ಮೂಲಕ ಕರ್ನಾಟಕ ನಾಟಕ ಆಕಾಡೆಮಿಯ ಸದಸ್ಯರಾಗಿದ್ದಾಗ ರಂಗಭೂಮಿಯ ಹೊಸ ಆಯಾಮಗಳಿಗೆ ಚೈತನ್ಯ ಸಿಕ್ಕಿತು. ಪ್ರತಿ ತಿಂಗಳು ಈಗ ದಾವಣಗೆರೆಯಲ್ಲಿ ನಡೆಯುತ್ತಿರುವ ಮತ್ತು ಅಪಾರ ಜನಮನ್ನಣೆಗಳಿಸಿರುವ ತಿಂಗಳ ಅತಿಥಿ ಕರ‍್ಯಕ್ರಮ ತುಂಬಾ ವಿಶಿಷ್ಟವಾಗಿದೆ. ನಾಟಕಕಾರರನ್ನು ಕರೆಯಿಸಿ ಅವರೊಂದಿಗೆ ನಡೆಸುವ ಅಪ್ತ ಸಂವಾದ ಇವತ್ತಿನ ರಂಗಭೂಮಿಯನ್ನು ಜೀವಂತವಾಗಿ ಇಡುವಲ್ಲಿ ಸಹಾಯಕವಾಗಿದೆ.

ಡಾ.ನೀಲಗಿರಿ ತಳವಾರ: ಮೈಸೂರ ವಿಶ್ವವಿದ್ಯಾನಿಲಯದಲ್ಲಿ ರೀಡರ್ ಆಗಿರುವ ಡಾ.ನೀಲಗಿರಿ ತಳವಾರ ಅವರ ಸಾಹಿತ್ಯಕ ಕ್ಷೇತ್ರ ವ್ಯಾಪಕವಾದುದು ಜಾನಪದ ಸಾಹಿತ್ಯ ಭಾಷೆ ಜನಾಂಗಗಳ ಅಧ್ಯಯನದಲ್ಲಿ ಇವರದು ವಿಶೇಷ ಒಲವು. ನಂಜುAಡ ಕವಿಯ ಕುಮಾರರಾಮ ಸಾಂಗತ್ಯದ ಬಗ್ಗೆ ಮಹಾಪ್ರಬಂಧ ಬರೆದು ಪಿಹೆಚ್.ಡಿ ಪಡೆಯುವ ಮೂಲಕ ಮಧ್ಯಕಾಲೀನ ಕನ್ನಡ ಕಾವ್ಯವನ್ನು ಹೊಸರೀತಿ ಕೊಡುವಲ್ಲಿ ಯಶ ಕಂಡಿದ್ದಾರೆ. ಜಾನಪದ ಆಕಾಡೆಮಿ ಮೂಲಕ ಸಂಪಾದಿಸಿದ ಜಾನಪದ ಸಂಚಿಕೆ ಮೌಲಿಕ ಲೇಖನಗಳ ಸಂಕಲನ ಹೀಗಾಗಿ ಡಾ.ನೀಲಗಿರಿ ತಳವಾರ ಅವರಲ್ಲಿರುವ ಓದುಗ, ಶೋಧ, ಬರಹಗಾರ ನಿಜಕ್ಕೂ ಜನಾಂಗ ಒಳನೋಟಗಳನ್ನು ಇಟ್ಟುಕೊಂಡತ.

ಡಾ.ಜಿ.ಪ್ರಶಾಂತನಾಯಕ: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕು ಪಾಳ್ಯ ಗ್ರಾಮದಲ್ಲಿ ದಿನಾಂಕ ೧೨-೦೩-೧೯೭೦ ರಲ್ಲಿ ಜನಿಸಿದರು. ಎಂ.ಎ.ಪಿಹೆಚ್.ಡಿ ಪದವೀಧರರು, ಈ ಸಧ್ಯ ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವರು. ಪ್ರೀತಿ ಮತ್ತು ಸ್ಪೂರ್ತಿ ಬಂಧ ಮತ್ತು ಸಂಬAಧ ನಿನ್ನೆಗಳ ಹಾದಿಯಲ್ಲಿ ಕವನ ಮತ್ತು ಕಥಾ ಸಂಕಲನಗಳು ವೈವಿಧ್ಯಮಯ ವಸ್ತುಗಳನ್ನು ಒಳಗೊಂಡಿವೆ. ಡಾ. ಅಂಬೇಡ್ಕರ್ ಮತ್ತು ಕುವೆಂಪು ವಚನಕಾರರು ಮತ್ತು ಡಾ.ಅಂಬೇಡ್ಕರ್ ದಾರ್ಶನಿಕರ ದಾರಿ ಬೆಳಗಿನ ಬಯಲು ಪ್ರಾದೀನ ಗದ್ಯ ಸಾಹಿತ್ಯ ಕೆ.ಎಸ್.ನರಸಿಂಹಸ್ವಾಮಿ ಕಾವ್ಯ ಪರಿಚಯ ಹೊಸಗನ್ನಡ ಸಾಹಿತ್ಯ ಭಾರತೀಯ ಕಾವ್ಯ ಮೀಮಾಂಸೆ, ಪ್ರೀತಿಯ ಬದುಕು, ಕನ್ನಡ ಸಾಹಿತ್ಯ ಮತ್ತು ದಲಿತ ಪರಂಪರೆ ಇವೇ ಮೊದಲಾದವು ಇವರ ಕೃತಿಗಳಾಗಿವೆ.

ಡಾ.ಹೆಚ್.ಕೆ.ನರಸಿಂಹಮೂರ್ತಿ: ಬೆಂಗಳೂರು ಜಯನಗರದಲ್ಲಿರುವ ಎನ್.ಎಂ.ಕ್.ಆರ್.ವಿ. ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ೦೯-೦೪-೧೯೯೮ ರ್‌ಲ್ಲಿ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಯಲ್ಲಪ್ಪನಾಯಕನ ಹೊಸಕೋಟೆಯಲ್ಲಿ ಜನಿಸಿದರು. ಬೆಂಗಳೂರು ವಿ.ವಿ ಇಂದ ಎಂ.ಎ.ಪದವಿ ಪಡೆದು ನಂತರ ಏಕಲವ್ಯ ಕುರಿತ ಕೃತಿಗಳು: ಒಂದು ಸಮೀಕ್ಷೆ ಎಂಬ ವಿಷಯದಲ್ಲಿ ಎಂ.ಫಿಲ್.ಪದವಿ ಗಳಿಸಿ, ನಂತರ ಕನ್ನಡ ಸಾಹಿತ್ಯದಲ್ಲಿ ಏಕಲವ್ಯ ಒಂದು ಅಧ್ಯಯನ ಎಂಬ ವಿಷಯದ ಮೇಲೆ ಪಿ.ಹೆಚ್.ಡಿ ಪದವಿ ಗಳಿಸಿದರು. ಮುಳ್ಳುಗುಲಾಬಿ ಎಂಬ ಕವನ ಸಂಕಲನವನ್ನು ಚಮ್ಮಾಳಿಗೆ ದಾರಿಗುಂಟ ಅನುವಾದ ಕೃತಿಯನ್ನು ಆಧುನಿಕ ಕನ್ನಡ ಕಾವ್ಯ: ನಾಡು ನುಡಿ ಚಿಂತನೆ, ತಮಕೂರು ಜಿಲ್ಲಾ ಸ್ವಾತಂತ್ರö್ಯ ಹೋರಾಟಗಾರರು, ಕನ್ನಡ ಸಾಹಿತ್ಯದಲ್ಲಿ ಏಕಲವ್ಯ ಎಂಬ ಸಂಶೋಧನಾ ಕೃತಿಗಳನ್ನು ಹೊರ ತಂದಿದ್ದಾರೆ. ಬೆಂಗಳೂರಿನ ಹಲವಾರು ರಂಗ ತಂಡಗಳು ಸಾಂಸ್ಕೃತಿಕ ವೇದಿಕೆಗಳು, ದಲಿತಪರ ಹೋರಾಟಗಳು ಕನ್ನಡ ಪರ ಸಂಘಟನೆಗಳು ಮತ್ತು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ ಸಂಘಟಕರಾಗಿ ಆಯೋಜಕರಾಗಿ ದುಡಿದಿದ್ದಾರೆ ಕನ್ನಡ ಕಲಿ-ಕನ್ನಡ ಉಲಿ ಎಂಬ ಧ್ಯೇಯ ವಾಕ್ಯದ ಕನ್ನಡ ಕಲಾ ಮತ್ತು ಸಾಂಸ್ಕೃತಿಕ ಮಂಡಳಿಯನ್ನು ಸ್ಥಾಪಿಸಿ ಕನ್ನಡವೇ ನಮ್ಮ ಧರ್ಮ ಎಂಬ ಧೋರಣೆಯನ್ನು ಈ ಗಡಿನಾಡಿನಲ್ಲಿ ಸಂವಹಿಸಿದ್ದಾರೆ. ಇವರ ಸಾಹಿತ್ಯ ಸೇವೆಯ ಫಲವಾಗಿ ಪಾವಗಡ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಕನ್ನಡಪರ ಸೇವೆಯನ್ನು ಪರಿಗಣಿಸಿ ವೈ.ಎನ್.ಹೊಸಕೋಟೆ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೌರವವನ್ನು ನೀಡಿ ಪುರಸ್ಕರಿಸಿದೆ. ತುಮಕೂರು ಜಿಲ್ಲಾಡಳಿತವು ಗಡಿನಾಡ ಸಂಘಟಕರೆAದು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಇತ್ತೀಚಿನ ಕೃತಿ ಕುವೆಂಪು ಕಂಡ ವಾಲ್ಮೀಕಿ ರೋಚಕ ವಿಚಾರ ಚಿಂತನೆಗಳನ್ನು ಒಳಗೊಂಡ ಕೃತಿಯಾಗಿದೆ. ಇವರೊಬ್ಬ ಸಾಹಿತ್ಯ ಗಂಭೀರ ಅಭ್ಯಾಸಿ.

ನಾಗರಾಜ್ ಗಾಣದ ಹುಣಸೆ: ಇವರು ಮೂಲತ: ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಗಾಣದಹುಣಸೆ ಗ್ರಾಮದಲ್ಲಿ ಕೃಷಿಕ ಮನೆತನದಲ್ಲಿ ಜಿನಿಸಿದವರು. ಬೆಂಗಳೂರು ವಿವಿಯಿಂದ ರಾಜ್ಯಶಾಸ್ತçದಲ್ಲಿ ಎಂ.ಎ.ಪದವಿ ಗಳಿಸಿದ್ದಾರೆ ಓದಿದ್ದು ರಾಜ್ಯಶಾಸ್ತçವಾದರೂ ಪತ್ರಿಕೋದ್ಯಮ ಇವರ ಕ್ಷೇತ್ರವಾಗಿದೆ. ಸಾಹಿತ್ಯ ಸಂಸ್ಕೃತಿ ಇತಿಹಾಸ, ಅರ್ಥಶಾಸ್ತç, ಕಲೆ, ರಾಜಕೀಯ ವಿಷಯಗಳನ್ನು ತರ್ಕಬದ್ದವಾಗಿ ನಿರೂಪಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಪ್ರಚಲಿತ ವಿದ್ಯಾಮಾನಗಳನ್ನು ಕುರಿತು ತಲಸ್ಪರ್ಶಿ ಅಧ್ಯಯನ ಮಾಡುವ ಇವರು ಆಗಾಗ ವೈಚಾರಿಕ, ವಿಶ್ಲೇಷಣ ಪರವಾದ ಬರಹಗಳನ್ನು ಬರೆದು ಪ್ರಕಟಿಸುವುದರ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈಗಾಗಲೇ ಇವರು ಇನ್ನೂರಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರ ಬರಹಗಳು ಹೆಚ್ಚಾಗಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಖರ ವಿಚಾರ ಚಿಂತನಾ ಪರವಾಗಿರುವ ಇವರು ವಾಲ್ಮೀಕಿ ಸಮುದಾಯಕ್ಕೆ ಮೀಸಲಾದ ವಾಲ್ಮೀಕಿ ಕರ್ನಾಟಕ ಮಾಸ ಪತ್ರಿಕೆಯ ಸಹ ಸಂಪಾದಕರಾಗಿ ಜನಾಂಗವನ್ನು ಜಾಗೃತಿಗೊಳಿಸುವಂತಹ ಬರಹಗಳನ್ನು ಪ್ರಕಟಿಸುತ್ತಿದ್ದಾರೆ. ಸಮುದಾಯಕ್ಕಾಗಿರುವ ಅನ್ಯಾಯಗಳನ್ನು ತಮ್ಮ ಖಾರವಾದ ಬರಹಗಳ ಮೂಲಕ ಸರ್ಕಾರದ ಗಮನ ಸೆಳೆಯುವರಲ್ಲಿ ಸಫಲರಾಗಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಅವಿರತವಾಗಿ ಕೆಲಸ ಮಾಡುತ್ತಿರುವ ಪ್ರತಿಭಾವಂತರನ್ನು ಸಾಧಕರನ್ನು ಹೋರಾಟಗಾರರನ್ನು ತಮ್ಮ ಬರಹಗಳ ಮೂಲಕ ಪರಿಚಯಿಸಿದ ಹಾಗೂ ಪ್ರಕಟಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಬೆಂಗಳೂರಿನ ದರ್ಪಣ ಕಲಾವಿದರಿಂದ ಇತ್ತೀಚೆಗೆ ಇವರಿಗೆ ಶ್ರೀ ವಾಲ್ಮೀಕಿ ಪ್ರಶಸ್ತಿಯು ಸಂದಿದೆ.

ಶಿವರಾಜ್ ಅಲ್ಬೂರು: ನಾಯಕ ಮಿತ್ರ ಸ್ವಾಭಿಮಾನಿ ಪತ್ರಿಕಾ ಸಂಪಾದಕರಾಗಿ ಸಾಮಾಜಿಕ ಚಿಂತನಾ ಬರಹಗಳನ್ನು ಪ್ರಕಟಿಸಿದ್ದಾರೆ, ಅನೇಕ ಜನಪರ ಆಂದೋಲನದಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ.

ತಿಪ್ಪೇಶ್ ಸಿರಿಗೆರೆ: ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯವರಾದ ಇವರು ವಾಲ್ಮೀಕಿ ವಾಹಿನಿ ಮಾಸ ಪತ್ರಿಕೆಯ ಸಂಪಾದಕರಾಗಿ ತಮ್ಮ ಲೇಖನಗಳ ಮೂಲಕ ಸಮುದಾಯವನ್ನು ಬಡಿದೆಬ್ಬಿಸುವ ಕಾರ್ಯ ಮಾಡಿದ್ದಾರೆ. ಅನ್ಯಾಯಗಳ ವಿರುದ್ದ ಸರ್ಕಾರದ ಮೇಲೆ ಬೀಸಿದ್ದಾರೆ. ಅನೇಕ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಹೊರಗೆಳೆದು ಜಾಗೃತಿ ಮೂಡಿಸುವ ಬರಹಗಳನ್ನು ಪ್ರಕಟಿಸಿದ್ದಾರೆ. ಡಾ.ಅನುಸೂಯ ಕೆಂಪನಹಳ್ಳಿ: ಚನ್ನಗಿರಿ ತಾ.ಕೆಂಪನಹಳ್ಳಿಯವರಾದ ಡಾ.ಅನುಸೂಯ ಎಸ್.ಕೆಂಪನಹಳ್ಳಿ ಇವರು ಈ ಮೈಸೂರಿನಲ್ಲಿ ನೆಲೆಸಿದ್ದಾರೆ. ಕನ್ನಡ ಭಾಷೆ, ಇತಿಹಾಸ, ಅರ್ಥಶಾಸ್ತç ಮತ್ತು ರಾಜ್ಯಶಾಸ್ತçಗಳಲ್ಲಿ ಎಂ.ಎ ಪದವೀಧರರು. ಕನ್ನಡ ಜನಪದ ಕಥೆಗಳಲ್ಲಿ ಸ್ತಿçà ಜೀವನ ವಿಷಯದಲ್ಲಿ ಪಿ.ಹೆಚ್.ಡಿ ಮಾಡಿದ್ದಾರೆ. ಹುತ್ತದೊಳಗಣ ಚಿತ್ತ, ರಕ್ತ ಕಮಲ ಐತಿಹಾಸಿಕ ಕಾದಂಬರಿ, ವಿಶ್ವ-ಕುಟುಂಬ, ಆದಿಕವಿ ವಾಲ್ಮೀಕಿ, ಅಕ್ಷರದವ್ವ-ಸಾವಿತ್ರಿ ಬಾಯಿಫುಲೆ, ಮಾತೆ ಹೇಮಾವತಿ, ಕುವೆಂಪು, ಮೌಢ್ಯ ನಿರ್ಮೂಲನೆ ಮತ್ತು ವೈಚಾರಿಕತೆ, ಅಕ್ಕಮಹಾದೇವಿ ಸಿದ್ಧಿ ಸಾಧನೆಗಳು, ವಾಲ್ಮೀಕಿ ದೃಷ್ಟಿಯಲ್ಲಿ ರಾಜನೀತಿ ಮೊದಲಾದ ೨೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ತಮ್ಮ ಶಬರಿ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ. ಸಂಪಾದಕಿಯಾಗಿ ಬೇಡ ವಾಲ್ಮೀಕಿ ಮಹಿಳೆ: ಸೃಜನಶೀಲತೆ, ಕನ್ನಡದಲ್ಲಿ ಕದಂಬ ಮೊದಲಾಗಿ ೧೮ ಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಅಮ್ಮ ಹಾಗೂ ನರಗುಂದ ಬಂಡಾಯ ಚಿತ್ರದಲ್ಲಿ ನಟಿಸಿದ್ದಾರೆ. ಇವರೇ ರಚಿಸಿದ ನಾಡುಕಟ್ಟಿದ ನಾಯಕ ನಕ್ಷತ್ರಗಳು, ಹೋರಾಟದ ಗೀತೆಗಳನ್ನು ಭಕ್ತಿ ಗೀತೆಗಳನ್ನು ಸ್ವತ: ಹಾಡಿದ್ದು ಸೀಡಿಗಳು ಬಿಡಗಡೆಗೊಂಡಿವೆ. ಹಲವು ಸಾಕ್ಷö್ಯ ಚಿತ್ರಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಸಂಭಾಷಣೆ, ನಿರೂಪಣೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡ ನಮ್ಮ ನಡುವಿನ ಒಬ್ಬ ಪ್ರಮುಖ ಬರಹಗಾರರಾಗಿ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಕಾಯಕಯೋಗಿ ರಾಜ್ಯ ಪ್ರಶಸ್ತಿ ಜಾನಪದ ಜಾಹ್ನವಿ ಸಾಹಿತ್ಯ ಸಿಂಧು ಪ್ರಶಸ್ತಿ ವಾಲ್ಮೀಕಿರತ್ನ ಪ್ರಶಸ್ತಿ ಕನ್ನಡಶ್ರೀ ಸಮಾಜ ಸೇವಾರತ್ನ ಶಬರಿ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರೊಬ್ಬ ಸಾಂಸ್ಕೃತಿಕ ವ್ಯಕ್ತಿಯಾಗಿ ಮುನ್ನಡೆದಿದ್ದಾರೆ.

ಡಾ.ಚನ್ನಬಸಪ್ಪ ಮಲ್ಕಂದಿನ್ನಿ: ಸ್ನಾತಕೋತ್ತರ ಕೆಂದ್ರ, ಮಸ್ಕಿ, ರಾಯಚೂರು ಜಿಲ್ಲೆ ಹಾಗೂ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ಚನ್ನಬಸಪ್ಪ ಇವರು ದೇವದುರ್ಗ ತಾಲ್ಲೂಕಿನ ಮಲ್ಕಂದಿನ್ನಿ ಗ್ರಾಮದವರು. ಎಂ.ಎ.,ಎA.ಫಿಲ್, ಪಿ,ಹೆಚ್.ಡಿ ಡಿಪ್ ಇನ್ ಎಪಿಗ್ರಫಿ ಪದವೀಧರರು, ಇತಿಹಾಸ ಸಂಶೋಧನಾ ಕೇಂದ್ರದಲ್ಲಿ ತಮ್ಮನ್ನು ತೊಡಿಗಿಸಿಕೊಂಡು ಅವರು ನೆಲೆಸಿರುವ ತಾಲ್ಲೂಕು, ಜಿಲ್ಲೆಯಾದ್ಯಂತೆ ಕ್ಷೇತ್ರ ಕಾರ್ಯ ಕೈಗೊಂಡು ನೂರಾರು ಸಂಶೋಧನಾ ಬರಹಗಳನ್ನು ರಾಜ್ಯದ ಪ್ರಸಿದ್ದ ಪತ್ರಿಕೆಗಳಲ್ಲಿ ಪ್ರಕಟಗೊಳಿಸಿದ್ದಾರೆ. ರಾಯಚೂರು ಜಿಲ್ಲೆಯ ಚರಿತ್ರೆ ಶಾಸನಗಳ ಹಿನ್ನಲೆಯಲ್ಲಿ ಎನ್ನುವ ಕೃತಿಯನ್ನು ಹೊರ ತಂದಿದ್ದಾರೆ. ಶಾಸನ, ದೇವಾಲಯ,ಮೂರ್ತಿ ಶಿಲ್ಪಗಳು ಹಾಗೂ ಪ್ರಾಗೈತಿಹಾಸಿಕ ನೆಲೆಗಳ ಶೋಧನಾ ಕಾರ್ಯ ಕೈಗೊಂಡು ಹಲವು ಹೊಸ ಹೊಸ ಸಂಗತಿಗಳನ್ನು ಹೊರತಂದಿದ್ದಾರೆ, ನೂರಾರು ಹೊಸ ಶಾಸನಗಳನ್ನು ಪತ್ತೆ ಶಾಸನಗಳನ್ನು ಪತ್ತೆ ಹಚ್ಚಿ ಕಳಚಿದ ಇತಿಹಾಸದ ಕೊಂಡಿಗಳನ್ನು ಬೆಸೆಯುವಲ್ಲಿ ಸಫಲತೆ ಕಂಡಿದ್ದಾರೆ. ನಮ್ಮ ಸಮುದಾಯದ ಪ್ರತಿಭಾವಂತ ಯುವ ಸಂಶೋಧಕರಾಗಿದ್ದಾರೆ.

ಡಾ. ಎಂ. ಕೆ .ದುರುಗಪ್ಪ: ಇವರು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ದಶಮಾಪುರದವರು, ಕನಕಗಿರಿ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ದೀರ್ಘಕಾಲ ಇತಿಹಾಸ ಉಪನ್ಯಾಸಕರಾಗಿರುವ ಎಂ.ಕೆ.ದುರುಗಪ್ಪನವರು, ಈ ಸಧ್ಯ ಹಗರಿಬೊಮ್ಮಹಳ್ಳಿಯಲ್ಲಿ ನೆಲೆಸಿ, ಅಲ್ಲಿಯೇ ಉಪನ್ಯಾಸಕರಾಗಿ, ಸೇವೆ ಸಲ್ಲಿಸುತ್ತಿದ್ದಾರೆ. ಕನಕಗಿರಿ ನಾಯಕ ಪಾಳೆಯಗಾರರ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲರು. ಉತ್ತಮ ವಾಗ್ಮಿ ಕೂಡ ವಿಜಯ ನಗರೋತ್ತಾರ ಕಾಲೀನ ಬೇಡ ಜನಾಂಗ ಚಾರಿತ್ರಿಕ ಅಧ್ಯಯನ ಕುರಿತು ತಲಸ್ಪರ್ಶಿ ಅಧ್ಯಯನ ಕೈಗೊಂಡು ಹಂಪಿ ಕನ್ನಡ ವಿ.ವಿ.ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅದೇ ಹೆಸರಿನಲ್ಲಿ ಅವರ ಕೃತಿಯೂ ಪ್ರಕಟವಾಗಿದೆ. ಅಲ್ಲದೆ ಕನಕಗಿರಿ ನಾಯಕರು ಹಾಗೂ ಕುಮಾರರಾಮನ ಕುಮ್ಮಟದುರ್ಗ ಎಂಬ ಐತಿಹಾಸಿಕ ಸಂಶೋಧನಾ ಕೃತಿಗಳು ಪ್ರಕಟವಾಗಿವೆ. ಇತಿಹಾಸ ವಿಷಯದಲ್ಲಿ ನಿರತರಾಗಿರುವ ಇವರು ನಾಯಕ ಜನಾಂಗದ ಇತಿಹಾಸವನ್ನು ಅಧ್ಯಯನ ಮಾಡಿ ನಿಖರ ದಾಖಲೆಗಳನ್ನು ದಾಖಲಿಸಿದವರಲ್ಲಿ ಇವರೂ ಒಬ್ಬರಾಗಿದ್ದಾರೆ. ಇವರನ್ನು ಕುರಿತಂತೆ ಅರಿವಿನ ಹಣತೆ ಎಂಬ ಅಭಿನಂದನಾ ಗ್ರಂಥ ಪ್ರಕಟವಾಗಿದೆ.

ಡಾ.ಕರಿಯಪ್ಪ ಮಾಳಿಗೆ: ಚಿತ್ರದುರ್ಗದಲ್ಲಿ ಕನ್ನಡ ಭಾಷಾ ಪ್ರಾಧ್ಯಾಪಕರಾಗಿರುವ ಡಾ.ಕರಿಯಪ್ಪ ಮಾಳಿಗೆಯವರು ಹಿರಿಯೂರು ತಾಲ್ಲೂಕಿನ ಸಿ.ಎಸ್.ಮಾಳಿಗೆಯವರು ನಮ್ಮ ನಡುವಿನ ಮಹತ್ವದ ಲೇಖಕರು, ಅವಧೂತರ ಬಗ್ಗೆ ಪಿ.ಹಚ್.ಡಿ. ಪಡೆದಿದ್ದಾರೆ. ಬಳ್ಳಾರಿ ಜಿಲ್ಲೆಯ ಅವಧೂತರು ಬಯಲು ಸೀಮೆಯ ಅವಧೂತು ಅವಧೂತ ಪರಂಪರೆ ವಚನಕಾರ ಮೋಳಿಗೆ ಮಾರಯ್ಯ ಬಯಲು ಸೀಮೆ ತತ್ವಪದಗಳು ದಲಿತ ಪದವೀಧರರ ಸಮಸ್ಯೆಗಳು ಮೊದಲಾದ ಕೃತಿಗಳು ಪ್ರಕಟಗೊಂಡಿವೆ. ಉತ್ತಮ ವಾಗ್ಮಿಗಳು

ಡಾ.ಗುಡದೇಶ್ವರಪ್ಪ: ಚಿತ್ರದುರ್ಗ ಜಿಲ್ಲೆಯ ಹೆಗ್ಗೆರೆ ಗ್ರಾಮದವರಾದ ಡಾ.ಗುಡದೇಶ್ವರಪ್ಪನವರು, ಚಿತ್ರದುರ್ಗ ಸ್ನಾತಕೋತ್ತರ ಇತಿಹಾಸ ವಿಭಾಗದ ಮುಖ್ಯಸ್ಥರು ಹಾಗೂ ಪರೀಕ್ಷಾ ವಿಭಾಗದ ನಿಯಂತ್ರಣೆಧಿಕಾರಿಳಾಗಿರುವರು. ಇತಿಹಾಸ ಕ್ಷೇತ್ರದಲ್ಲಿ ಅವಿರತ ತೊಡಗಿಸಿಕೊಂಡಿರುವ ಇವರು ಬೆಂಗಳೂರು ಜಿಲ್ಲೆಯ ಸಾಂಸ್ಕೃತಿಕ ಅಧ್ಯಯನ ವಿಷಯದಲ್ಲಿ ಪಿಹೆಚ್‌ಡಿ ಪದವಿ ಗಳಿಸಿದ್ದಾರೆ. ಅದೇ ಹೆಸರಿನ ಕೃತಿಯು ಪ್ರಕಟಗೊಂಡಿದೆ. ಇವರ ಕೆಲವು ಮಹತ್ವದ ಕೃತಿಗಳೆಂದರೆ ಪ್ರಾಚೀನ ಭಾರತ, ಚಿತ್ರದುರ್ಗದ ಐತಿಹಾಸ ಸ್ಮಾರಕಗಳು ಕನಾರ್ಟಕದ ಸ್ಪರ್ಧಾ ಜಗತ್ತು ಅಧುನಿಕ ಕಾಲದ ಭಾರತ ಎಂಬೀ ಕೃತಿಗಳನ್ನು ಹೊರತಂದಿದ್ದಾರೆ ಉತ್ತಮ ವಾಗ್ಮಿಗಳು, ಸಂಘಟಕರು ಆಗಿರುವ ಇವರು ವಾಲ್ಮೀಕಿ ಸಮುದಾಯದ ನೌಕರರ ಸಂಘವನ್ನು ಸಂಘಟಿಸಿ ಮೂಲಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವಂಥಹ ಕಾರ್ಯಕ್ರಮಗಳನ್ನು ಮಾಡುತ್ತಾ ಉತ್ತೇಜನ ನೀಡುತ್ತಿದ್ದಾರೆ.

ಡಾ.ತಾರಿಹಳ್ಳಿ ಹನುಮಂತಪ್ಪ: ಹೊಸಪೇಟೆಯವರಾದ ತಾರಿಹಾಳ್ಳಿ ಹನುಮಂತಪ್ಪನವರು ಹಂಪಿ ಕನ್ನಡ ವಿ,ವಿ.ಯಲ್ಲಿ ಮಾನವಶಾಸ್ತç ಅಧ್ಯಯನ ವಿಭಾಗದ ಸಹ-ಪ್ರಾಧಾಪಕರಾಗಿದ್ದಾರೆ. ವಾಲ್ಮೀಕಿ ಅಧ್ಯಯನ ಪೀಠದ ಸಂಚಾಲಕರಾಗಿದ್ದ ಸಮಯದಲ್ಲಿ ವಾಲ್ಮೀಕಿ ಸಮುದಾಯದ ಚರಿತ್ರೆಯನ್ನೊಳಗೊಂಡ ಹಲವು ಕೃತಿಗಳನ್ನು ಪ್ರಕಟಸಿದ್ದಾರೆ. ಅವರ ಸಂಪಾದಕತ್ವದಲ್ಲಿ ಕನಕಗಿರಿ ನಾಯಕರು ವಾಲ್ಮೀಕಿ ಸಂಪದ ಮೊದಲಾದ ಕೃತಿಗಳು ಪ್ರಕಟವಾದವು ಎಂ.ಎ ಬಿ.ಇಡಿ., ಎಂ.ಫಿಲ್. ಹಾಗೂ ಪಿ.ಹೆಚ್.ಡಿ.ಪದವೀಧರರು ` ಅವ್ವಣ್ಣೆವ್ವ ' ಕಾವ್ಯವನ್ನು ಪ್ರಕಟಿಸಿದ್ದಾರೆ. ಅಂಕಣ ಬರಹಗಾರರಾಗಿಯೂ ಕಾಣಿಸಿಕೊಂಡಿದ್ದಾರೆ. ರಾಜ್ಯ ಹಾಗೂ ರಾಷ್ಟçಮಟ್ಟದ ವಿಚಾರ ಸಂಕಿರಣಗಳಲ್ಲಿ ಹಲವಾರು ಸಂಶೋಧನಾ ಬರಹಗಳನ್ನು ಮಂಡಿಸಿದ್ದಾರೆ.

ಡಾ.ತಿಪ್ಪಣ್ಣ ಮರಿಕುಂಟೆ: ಚಳ್ಳಕೆರೆ ತಾಲ್ಲೂಕಿನ ಮರಿಕುಂಟೆ ಗ್ರಾಮದವರಾದ ಬಿ.ತಿಪ್ಪಣ್ಣ ಮರಿಕುಂಟೆ ನಮ್ಮ ನಡುವಿನ ಮುಖ್ಯ ಬರಹಗಾರರು. ಇವರ ನೂರಾರು ಕಥೆಗಳು ನಾಡಿನ ಪ್ರಸಿದ್ದ ನಿಯತಕಾಲಿಕೆಗಳಲ್ಲಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪತ್ರಿಕಾ ಕ್ಷೇತ್ರದಲ್ಲೂ ಸಂಪಾದಕರಾಗಿ ಕಾಣಿಸಿಕೊಂಡಿದ್ದುAಟು. ಮೇಲು ದುರ್ಗ ಮತ್ತು ವನಸುಮ ಪತ್ರಿಕೆಗಳನ್ನು ಪ್ರಕಟಿಸಿದ್ದಾರೆ ಎಂಬತ್ತರ ದಶಕಗಳಿಂದಲೂ ಸಾಹಿತ್ಯದ ಕೃಷಿಯಲ್ಲಿ ಕಂಡು ಬಂದವರು ಬಿ.ತಿಪ್ಪಣ್ಣ ಮರಿಕುಂಟೆ ಇವರೊಬ್ಬ ಗ್ರಾಮೀಣ ಸಾಹಿತಿ. ತಮ್ಮ ಹಳ್ಳಿಯನ್ನೇ ಅಧ್ಯಯನ ಕೇಂದ್ರವಾಗಿಟ್ಟುಕೊAಡು ಅಲ್ಲಿನ ಜನರ ಬದುಕಿನ ತಳಮಳ ಹಳ್ಳಿಗಳು ಸಾಗಿರುವ ಅಧ:ಪತನದ ಹದಿ ಮತ್ತು ಗ್ರಾಮೀಣ ಬದುಕನ್ನು ಕಟಿಕೊಡುವಂತಹ ಸುತ್ತು, ಜಾತ್ರೆ ತಂತ್ರಗಳು ಹಾಗೂ ಒಂದು ಊರಿನ ಕಥೆ. ಇದು ಗ್ರಾಮ್ಯ ಬದುಕಿನ ಸಂಶೋಧನಾ ಕೃತಿ ದಶರಥ ಎಂಬ ಒಂದು ಪೌರಾಣಿಕ ಕಾದಂಬರಿಯನ್ನು ರಚಿಸಿದ್ದಾರೆ. ಆದಿಕವಿ ವಾಲ್ಮೀಕಿ ಹಾಗೂ ರಾಮಾಯಣ ಕುರಿತ ವಿಶೇಷ ಅಧ್ಯಯನ ಮಾಡಿದ್ದಾರೆ. ಸಣ್ಣ ಕಥೆ ಕಾದಂಬರಿ ವಿಚಾರ ಸಾಹಿತ್ಯ ನಲ್ನುಡಿ ಪತ್ರಿಕೋದ್ಯಮದ ಜೊತೆಗೆ ಸಂಶೋಧನೆ, ಚಿಂತನೆಗಳನ್ನು ಮೈಗುಡಿಸಿಕೊಂಡಿರುವ ಬಿ,ತಿಪ್ಪಣ್ಣ ಮರಿಕುಂಟೆ ಅವರಿಗೆ ೨೦೦೬ರಲ್ಲಿ ಚಳ್ಳಕರೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವವೂ ದೊರೆತಿದೆ.

ಡಾ.ಲಕ್ಷö್ಮದೇವಿ ಎಲ್: ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಚಿಕ್ಕ ಕುರುಗೋಡು ಗ್ರಾಮದವರಾದ ಡಾ.ಲಕ್ಷö್ಮದೇವಿ ಎಲ್.ಮಡಿಕೇರಿಯ ವಿಶ್ವ ವಿದ್ಯಾಲಯ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ. ಬಿ.ಕಾಂ,ಪದವೀಧರೆಯಾದ ಇವರು ಮುಂದೆ ಕನ್ನಡದಲ್ಲಿ ಎಂ.ಎ.ಪದವಿ ಪಡೆದು ನಂತರ ಎಂ.ಫಿಲ್. ಮತ್ತು ಪಿಹೆಚ್‌ಡಿ ಗಳಿಸಿದರು ಇವರ ಅವಿಭಜಿತ ಕೋಲಾರ ಜಿಲ್ಲೆಯ ಐತಿಹ್ಯಗಳು. ನಾಗಪ್ಪ ನರಸಪ್ಪರ ಸಾಂಸ್ಕೃತಿಕ ಸಂಕಥನ ಮೊದಲಾದ ಕೃತಿಗಳು ಪ್ರಕಟಗೊಂಡಿವೆ ಒಟ್ಟಾರೆ ನಾಯಕ ಸಮುದಾಯದ ಸಾಂಸ್ಕೃತಿಕ ಹಾಗೂ ಇತಿಹಾಸವನ್ನು ಕಟ್ಟಿಕೊಡುವಲ್ಲಿ ಇವರ ಬರಹಗಳು ಮುಖ್ಯವೆನಿಸುತ್ತವೆ.

ಮ.ನಾ.ಕೃಷ್ಣಮೂರ್ತಿ: ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಜಿ.ಮಲ್ಲಸಂದ್ರ ಗ್ರಾಮದವರಾದ ಇವರು ಎಂ.ಎಸ್.ಐ.ಎಲ್.ನ ನೌಕರರಾಗಿದ್ದು ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ಗಾಢವಾಗಿ ತೊಡಗಿಸಿಕೊಂಡಿದ್ದಾರೆ. ಜನಪ್ರಿಯ ಸಾಹಿತಗಳಾಗಿರುವ ಇವರು ಸುಮಾರು ಹನ್ನೂಂದು ಕಾದಂಬರಿಗಳನ್ನು ಎರಡು ಕಥಾ ಸಂಕಲನಗಳನ್ನು ಐದಾರು ನಾಟಕಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಇವರು ರಚಿಸಿರುವ ಕೃತಿಗಳಲ್ಲಿ ಮತ್ತು ಪಲ್ಲಟ ನಾಟಕಗಳು ಹೊರಬಂದಿವೆ, ರಂಗ ಪ್ರದರ್ಶನವನ್ನೂ ಕಂಡಿವೆ. ಈ ನಾಟಕ ಕೃತಿಗಳಲ್ಲಿ ಇಂದಿಗೂ ಕೆಲವು ಕಡೆ ಜೇವಂತವಾಗಿರುವ ಜೀತ ಪದ್ಥತಿಯನ್ನು ಅಂಥವರ ಸಂಕಟಗಳನ್ನು ನಿರೂಪಿಸಿರುತ್ತಾರೆ. ಒಂದು ಕವನ ಸಂಕಲನ ಮತ್ತು ಮಹಿಳಾ ಪ್ರಧಾನ ಕಾದಂಬರಿಗಳನ್ನು ರಚಿಸಿದ್ದಾರೆ. ವಾಲ್ಮೀಕಿ ಸಮುದಾಯದ ಚರಿತ್ರೆ ಚಿಂತನೆಗಳನ್ನು ಇವರ ಬರಹಗಳಲ್ಲಿ ಮೂಡಿಸಿದ್ದಾರೆ. ಒಟ್ಟಾರೆ ಸಾಹಿತ್ಯ ಸಂಸ್ಕೃತಿ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿರುವ ಮ.ನಾ.ಕೃಷ್ಣಮೂರ್ತಿ ನಮ್ಮ ನಡುವಿನ ಮಹತ್ವದ ಲೇಖಕರೆನ್ನಬಹುದು.

ಡಾ.ಅರ್ಜನ ವೈ.ಪಂಗಣ್ಣನವರ: ಇವರು ಬೆಳಗಾವಿ ಜಿಲ್ಲೆಯ ಗೋಕಾಕ್‌ನವರು ಸುಮಾರು ೩೦ ವರ್ಷಗಳಿಗೂ ಹೆಚ್ಚು ಕಾಲ ಅರ್ಥಶಾಸ್ತçದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಸಮಾಜ ಚಿಂತಕರಾಗಿ ಹಲವಾರು ಕೃತಿಗಳನ್ನು ಪ್ರಕಟಸಿದ್ದಾರೆ. ಗಾಂಧೀಜಿ ತತ್ವಗಳು, ಮಹಾ ಶಿಕ್ಷಕ ಗಾಂಧೀಜಿ, ಹೀಗೆ ಗಾಂಧೀಜಿಯವರನ್ನು ಪ್ರೇರಣೆಯಾಗಿಟ್ಟುಕೊಂಡು ಹಲವಾರು ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರು ಕನ್ನಡವಲ್ಲದೆ ಇಂಗ್ಲೀಷ್‌ನಲ್ಲಿಯೂ ಲೇಖನಗಳನ್ನು ಕೃತಿಗಳನ್ನು ಬರೆದಿದ್ದಾರೆ ಸಮುದಾಯವನ್ನು ಜಾಗೃತಿಗೊಳಿಸುವಂತಹ ಹಾಗೂ ಮಾರ್ಗದರ್ಶನ ಮಾಡುವಂತಹ ಲೇಖನಗಳು ಪ್ರಕಟಗೊಂಡಿವೆ. ವಾಲ್ಮೀಕಿ ರಾಮಾಯಣ ಕುರಿತು ವಿಶ್ಲೇಷಣಾತ್ಮಕ ಬರಹಗಳು ವಾಲ್ಮೀಕಿ ಕರ್ನಾಟಕ ಹಾಗೂ ಇತರೆ ಪತ್ರಿಕೆಗಳಲ್ಲೂ ಪ್ರಕಟವಾಗಿವೆ. ಇವರ ಮಹರ್ಷಿ ವಾಲ್ಮೀಕಿ ಮತ್ತು ರಾಮಾಯಣ ಸಂಶೋಧನ ಅಧ್ಯಯನ ಎಂಬ ಕೃತಿ ಇತ್ತೀಚೆಗೆ ಬಿಡುಗಡೆಯಾಗಿದೆ.

ಕೆ.ನಾರಾಯಣಸ್ವಾಮಿ: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನವರಾದ ದಿವಂಗತ ಕೆ.ನಾರಾಯಣಸ್ವಾಮಿಯವರು ವೃತ್ತಿಯಿಂದ ಉಪನ್ಯಾಸಕರಾಗಿದ್ದ ನಂತರ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದಾರೆ. ಶಿಕ್ಷಣದ ಶಕ್ತಿಯನ್ನು ಬಲ್ಲವರಾಗಿದ್ದ ಇವರು ಇದನ್ನು ಎಲ್ಲೆಡೆ ಪಸರಿಸುವಲ್ಲಿ ಹಲವು ರೀತಿಯಲ್ಲಿ ಶ್ರಮಿಸಿದ್ದಾರೆ. ದಲಿತರ ಜಾಗೃತಿಗಾಗಿ ಅಂಬೇಡ್ಕರ್‌ವಾಣಿ, ದಲಿತ ಕೈಪಿಡಿ, ಭಂಗೀ ಜನಕಥಾ ನರಬಲಿ ದಿಗಂಬರ ಕವಿಗಳು ಮುಂತಾದ ಜನಪರ ಕೃತಿಗಳನ್ನು ರಚಿಸಿದ್ದಾರೆ. ಕೆ.ನಾರಾಯಣಸ್ವಾಮಿಯವರು ೨೦೧೪ ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಇವರೊಬ್ಬ ಬಹುಮುಖ ಪ್ರತಿಭೆಯ ಸರಳ ಜೀವಿಗಳು.

ಆರ್.ಕೆ.ಸುಬೇದಾರ್: ಇವರು ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಹಿರೇಮನ್ನಾಪುರ ಹಿರೇಮನ್ನಾಪುರ ಗ್ರಾಮದವರು. ಹಿರೇ ಮನ್ನಾಪುರದ ಪ.ಪೂ.ಕಾಲೇಜಿನಲ್ಲಿ ಕಲಾ ಶಿಕ್ಷಕರಾಗಿದ್ದಾರೆ. ನಾಟಕ ರಚನೆ, ಅಭಿನಯ, ಕಥೆ, ಕವನ, ಕಾದಂಬರಿ ಬರೆಯುವ ಹವ್ಯಾಸ ಇವರದ್ದು. ಬಾಲ್ಯದಿಂದಲೂ ಚಿತ್ರಕಲೆ, ಸಾಹಿತ್ಯದಲ್ಲಿ ತೊಡಗಿಸಿಕೊಂಡ ಇವರು ೩೦೦ ಕ್ಕೂ ಹೆಚ್ಚು ಲೇಖಗಳನ್ನು ನಾಲ್ಕಾರು ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಕನಕಗಿರಿ ವೀರನಾಯಕರು ಎಂಬ ಐತಿಹಾಸಿಕ ಕಾದಂಬರಿ, ರೈತ ಕನಕಪ್ಪನ ಕನಸು,ಮಹರ್ಷಿ ವಾಲ್ಮೀಕಿ ಏಕಾಂಕ ನಾಟಕ, ನೋವು ನುಂಗಿದವರು ಕವನ ಸಂಕಲನ ಕೃತಿಗಳನ್ನು ರಚಿಸಿದ್ದಾರೆ. ಮಹರ್ಷಿ ವಾಲ್ಮೀಕಿ ದರ್ಶನ ಧ್ವನಿ ಸುರುಳಿ ಬಿಡುಗಡೆಯಾಗಿದೆ. ಇವರ ೮ ಕ್ಕೂ ಹೆಚ್ಚು ಕೃತಿಗಳು ಬಿಡುಗಡೆಗೆ ಸಿದ್ದಗೊಂಡಿವೆ. ಒಟ್ಟಾರೆ ವಾಲ್ಮೀಕಿ ಸಮುದಾಯದ ಜಾಗೃತಿ ಸಂಘಟನೆ, ಹಿನ್ನಲೆಯಲ್ಲಿ ಇವರ ಪಾತ್ರ ಹಿರಿದಾದುದಾಗಿದೆ.

ನಾಗಪ್ಪ ಹೂವಿನ ಬಾವಿ: ಮೂಲತ: ಕೃಷಿಕರಾಗಿರುವ ಇವರು ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ತುರ್ವಿಹಾಳ ಗ್ರಾಮದವರು. ಇವರು ಬಸವ ತತ್ವ ಅನುಯಾಯಿಗಳಾಗಿದ್ದು ಶರಣರ ಪ್ರವಚನಗಳ ಬೋಧಕರಾಗಿದ್ದಾರೆ. ಇವರು ಬಿಡುವಿನ ವೇಳೆ ರಚಿಸಿದ ಕೃತಿಗಳು ಸಾವಿರದೆಂಟು ಸದ್ಬೋದನಾನುಭವ, ಅರಿವಿನ ಅಂಗಳ ಈ ಮೂರು ಕೃತಿಗಳು ಪ್ರಕಟಗೊಂಡಿವೆ.

ಹೆಚ್.ಕೆ.ಸತ್ಯಭಾಮ: ಇವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನವರು. ಸದ್ಯ ದಾವಣಗೆರೆಯಲ್ಲಿ ನೆಲೆಸಿದ್ದಾರೆ. ಮೂವತ್ತೆರಡು ವರ್ಷಗಳ ಕಾಲ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ೨೦೧೩ ರಲ್ಲಿ ಸ್ವಯಂ ನಿವ್ರತ್ತಿ ಹೊಂದಿದ್ದಾರೆ. ಬಾಲ್ಯದಿಂದಲೂ ಸಂಗೀತ, ಸಾಹಿತ್ಯ, ಕಲೆ, ಕ್ರೀಡೆ ನಾಟಕಗಳಲ್ಲಿ ಆಸಕ್ತಿ ಬೆಳೆಸಿಕೊಂಡವರು. ನಿವೃತ್ತಿ ನಂತರ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಹಲವಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ರಚಿಸಿರುವ ಚುಟುಕು ಸಂಕಲನ ಅಂತರಾಳ ಮತ್ತು ಕವನ ಸಂಕಲನ ಅಂತರAಗ ಪ್ರಕಟವಾಗಿವೆ. ಇವರ ಕವನಗಳು ಕಿರು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ನಾಸಿಕ್‌ನಲ್ಲಿ ನಡೆದ ರಾಷ್ಟಿçÃಯ ಸಮಾವೇಶದಲ್ಲಿ ಜೆಸಿಐ ಮಹಿಳಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಎಲ್ಲಾ ವಿಧದ ಅತ್ಯುತ್ತಮ ಅಧ್ಯಕ್ಷೆ ಪ್ರಶಸ್ತಿಯನ್ನು ಪಡೆದಿದ್ದಾರೆ. ಹೀಗೆ ಇವರ ಸೇವೆ ಗುರುತಿಸಿ ಹಲವಾರು ಸಂಘ ಸಂಸ್ಥೆಗಳಿAದ ೧೨೧ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿವೆ.

ಅನೇಕ ಸಾಹಿತ್ಯ ಮತ್ತು ಕವಿ ಗೋಷ್ಠಗಳಲ್ಲಿ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಸಾಹಿತ್ಯ ರತ್ನ ಚುಟುಕು ಮಂದಾರ, ಸಾಹಿತ್ಯ ಕುಸುಮ, ಸಾಹಿತ್ಯ ಸಿರಿ, ಸಾಹಿತ್ಯ ಮಲ್ಲಿಗೆಯಂತಹ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ರಾಜ್ಯಮಟ್ಟದ ಪ್ರತಿಷ್ಠಿತ ಬಸವ ಜ್ಯೋತಿ ಪ್ರಶಸ್ತಿಯೂ ಇವರಿಗೆ ಸಂದಿದೆ.

ಡಾ.ಡಿ.ಬಿ.ಕರಡೋಣಿ: ಡಾ. ದುರುಗಪ್ಪ ಭೀಮಪ್ಪ ಕರಡೋಣಿ ಇವರು ದಿ. ೧-೬-೧೯೬೩ ರಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಚೆಳ್ಳೂರು ಗ್ರಾಮದಲ್ಲಿ ಜಿನಿಸಿದವರು ಎಂ.ಎ, ಎಂ.ಫಿಲ್, ಪಿಹೆಚ್‌ಡಿ ಪದವೀಧರರು ಧಾರವಾಡದಲ್ಲಿ ಕರ್ನಾಟಕ ಕಲಾ ಮಹಾವಿದ್ಯಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಜಾನಪದ ಸಾಹಿತ್ಯ ಆಧುನಿಕ ಕನ್ನಡ ಸಾಹಿತ್ಯ ವಿಮರ್ಶೆ ಸಾರ್ವಜನಿಕರ ಸೇವೆ ಇವರ ಆಸಕ್ತಿಯ ಕ್ಷೇತ್ರಗಳು. ೩೦ ವರ್ಷಗಳ ಭೋದನಾನುಭವವುಳ್ಳವರು. ಜನಪದ ಸಾಹಿತ್ಯದಲ್ಲಿ ಕುಮಾರರಾಮ, ಆನೆಗೊಂದಿ ಸಾಂಸ್ಕೃತಿಕ ಅಧ್ಯಯನ ಚಳ್ಳೂರು ಗ್ರಾಮ ಅಧ್ಯಯನ ಸ್ಥಳೀಯ ಸಂಕಥನಗಳಸುತ್ತ ಜನಪದ ಸಂಸ್ಕೃತಿಯಲ್ಲಿ ಕುಮಾರರಾಮ, ಲಲಿತ ಪ್ರಬಂಧಗಳ ಸಂಗ್ರಹ ಮೊದಲಾದ ಕೃತಿಗಳು ಪ್ರಕಟಗೊಂಡಿವೆ. ರಾಜ್ಯಮಟ್ಟದ ರಾಷ್ಟಿçÃಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಈ ಮೂಲಕ ಕನ್ನಡ ಸಾಂಸ್ಕೃತಿಕ ಸಾಹಿತ್ಯಕ ಲೋಕಕ್ಕೆ ಕೊಡುಗೆ ಅಮೂಲ್ಯವಾದುದು.

ಡಾ.ಜೆ.ಎಸ್.ಬೊಂಬ್ರಿ: ಇವರು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಮಲ್ಲಾಪುರ ಗ್ರಾಮ (ಅಂಕಲಗಿ)ದವರು. ಲೇಖಕರು ಮತ್ತು ನಾಟಕಕಾರರು ದಿನಾಂಕ ೩-೯-೧೯೪೩ ರಲ್ಲಿ ಜಿನಿಸಿದ ಇವರು ವೃತ್ತಿಯಿಂದ ಶಿಕ್ಷಕರು ಎಂ,ಎ,ಬಿ,ಇಡಿ ಪದವೀಧರರು, ೩೪ ವರ್ಷಗಳ ಅಧ್ಯಾಪನ ಅನುಭವವುಳ್ಳವರು. ಸಾಹಿತ್ಯ ಮತ್ತು ಇತಿಹಾಸವನ್ನು ಪ್ರೀತಿಸುವ ಇವರು ಕವಿತೆಗಳನ್ನು ನಾಟಕಗಳನ್ನು ಲೇಖನಗಳನ್ನು ಹಲವಾರು ಸಂಚಿಕೆಗಳಲ್ಲಿ ವಾಲ್ಮೀಕಿ ಕರ್ನಾಟಕ ಪತ್ರಿಕೆಗಳಲ್ಲಿ. ಮಹರ್ಷಿ ವಾಲ್ಮೀಕಿ ನಾಟಕ ರಚಿಸಿ ಪ್ರಕಟಸಿದ್ದಾರೆ. ಇವರ ಕೃತಿಯಾಗಿದೆ. ನಾಯಕ ಜನಾಂಗದ ಚರಿತ್ರೆಯ ಅಧ್ಯಯನ ಇವರ ಮುಖ್ಯ ವಸ್ತುವಾಗಿದೆ.

ಮೋಹನ ಕುರುಡಿಗಿ: ರೋಣ ತಾಲ್ಲೂಕಿನ ತೋಟಗಂಟಿ ಎಂಬ ಬೆಳವಲ ನಾಡಿನಿಂದ ಬಂದ ಕನ್ನಡದ ಇವತ್ತಿನ ಬಹುಮುಖ್ಯ ಕವಿ. ಮಸ್ಸö್ಯಗಂಧಿ ಕವನ ಸಂಕಲನದ ಮೂಲಕ ನಾಡಿನ ಕವಿಗಳ ಗಮನ ಸೆಳೆದ ಮೋಹನ ಕುರಡಗಿ ಮೂಲಭೂತವಾಗಿ ಗಹನ ಸಂವೇದನಾಶೀಲ ಕವಿ.ಗಾಢ ಅಧ್ಯಯನ ಹಾಗೂ ಉತ್ತಮ ಮಾತುಗಾರಿಕೆಗೆ ಮೋಹನ ಕುರಡಗಿ ಹೆಸರುವಾಸಿ. ಇವರ ಇತ್ತೀಚ್ಚಿನ ` ಶೋಭನಾ ' ಒಂದು ಖಂಡಕಾವ್ಯ ಪ್ರಿಯತಮೆಯ ಮುಂದೆ ತನ್ನ ಪ್ರೇಮವನ್ನು ತೋಡಿಕೊಳ್ಳವ ಕವಿಯ ಬಗ್ಗೆ ಕಾಳಿದಾಸನ ಮೇಘದೂತದ ಯಕ್ಷನ ನೆನಪನ್ನು ತರುತ್ತದೆ. ಕಲ್ಲಿನಾಥ ಮಾಧವನವರ :ಈಗ ನಮ್ಮ ನಡುವಿನ ಭರವಸೆಯ ಬರಹಗಾರ, ಸಾಮಾಜಿಕ ಚಿಂತನೆಯನ್ನು ಅರ್ಥವತ್ತಾಗಿ ಮಂಡಿಸುವಲ್ಲಿ ಸಿದ್ದಹಸ್ಥರು ನಾಡಿನ ಶ್ರೇಷ್ಠ ಪತ್ರಿಕೆಗಳಲ್ಲಿ ಇವರ ಅನೇಕ ಲೇಖನಗಳ ಪ್ರಕಟವಾಗಿವೆ. ದಾವಣಗೆರೆ ಟಿ.ಎಸ್.ಷಣ್ಮುಖ ವೈಚಾರಿಕ ಮತ್ತು ಬಂಡಾಯ ಬರಹಗಳಿಗೆ ಹೆಸರಾದವರು. ` ಪ್ರಜಾಕೂಗು ' ಪತ್ರಿಕೆ ಸಂಪಾದಕರಾಗಿ ಕಾಣಿಸಿಕೊಂಡವರು ಅದು ಪ್ರಕಟಗೊಂಡಷ್ಟು ಕಾಲ ಕೂಗೆಬ್ಬಿಸಿದ್ದು ನಿಜ. ಇವರ ಲೇಖನ ಸಂಗ್ರಹ ಕೃತಿಯ ಪ್ರಕಟವಾಗಿದೆ. ಹರಿಹರದ ಡಾ.ಎ.ಬಿ.ರಾಮಚಂದ್ರಪ್ಪಾ ಇವರು ಉತ್ತಮ ಬರಹಗಾರರಾಗಿದ್ದರೆ ಡಾ.ಅರಣು ಜೋಳದಕೂಡಲಗಿ ಸಮ್ಮ ಸಮುದಾಯದ ಮಹತ್ವದ ಕವಿ ಮತ್ತು ಚಿಂತಕ ಜನಪದವನ್ನು ಆಧುನಿಕ ಸಂಧರ್ಬಕ್ಕೆ ಅನ್ವಯಿಸುವ ಅಪರೂಪದ ವಿಚಾರವಾದಿ. ಡಾ.ವೆಂಕಟಗಿರಿ ದಾಳವಾಯಿ ಇವರು ಹಲವು ಕೃತಿಗಳನ್ನು ವಿಮರ್ಶಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅದರಂತೆ ಡಾ.ಎಸ್.ಎಂ.ಮುತ್ತಯ್ಯ ಅವರು ಜನಪದ ಸಾಹಿತ್ಯ ಮತ್ತು ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾರೆ. ಜನಪಸ ಮಹಾಕಾವ್ಯಗಳ ಬಗ್ಗೆ ಪಿ.ಹೆಚ್.ಡಿ ಅಧ್ಯಯನ ಮಾಡುವ ಮೂಲಕ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಡಾ.ಹೆಚ್.ಆರ್. ತಿಪ್ಪೇಸ್ವಾಮಿಯವರು ಬೇಡರ ಕಟ್ಟೇಮನೆಗಳು ಕುರಿತಂತೆ ವಿಶೇಷ ಅಧ್ಯಯನ ಮಾಡಿದ್ದಾರೆ. ಸಂಘಟನೆಯಲ್ಲಿ ವಿಶೇಷತೆ ಹೊಂದಿದ್ದಾರೆ. ಅದರಂತೆ ಗೋಪಜ್ಜಿ ನಾಗಪ್ಪ ಇವರು ಅನೇಕ ನಾಟಕಗಳನ್ನು ಬರೆದಿದಾರೆ.

ಕರ್ನಾಟಕ ವಿಶ್ವವಿದ್ಯಾನಿಲಯ ಪ್ರೊ. ಎಸ್.ಎಸ್.ಭದ್ರಾಪೂರ., ಡಾ ಆರ್. ಹೆಚ್. ತಳವಾರ, ಅದರಂತೆ ಡಾ.ವೈ.ಎನ್ ಸೈದಾಪುರ, ಬೆಳಗಾವಿಯ ಶಿ.ಗು. ಕುಸುಗಲ್ಲ, ಗದುಗಿನ ವ್ಯಾಕರಣಕಾರ ರಾ.ಯ.ಮೂಲಿಮನಿ, ಸಂಶೋಧಕ ಬಿ.ಆರ್.ತುಬಾಕಿ, ಧಾರವಾಡದ ಡಾ.ಸುರೇಶ್ ಬಿ. ಹರ್ಲಾಪುರ, ಮಂಗಳೂರು ವಿ.ವಿ.ಯ ಡಾ ಹನುಮನಾಯಕ ಇವರೆಲ್ಲ ಬಹು ಮುಖ್ಯ ಬರಹಗಾರರು. ಕಾರವಾರದ ಕರಾವಳಿ ಮುಂಜಾವು ಪತ್ರಿಕೆಯ ಪರಶುರಾಮ, ವಾಲ್ಮೀಕಿವಾಣಿಯ ಚಿತ್ರದುರ್ಗದ ದಿ ಎಂ.ಕೆ.ನಾಯಕ, ಜೀವರ್ಗಿಯ ಗೋವಿಂದರಾಜು ಆಲ್ದಾಳ, ಕುವೆಂಪು ವಿಶ್ವವಿದ್ಯಾಲಯದ ಡಾ ಅಪ್ಪಣ್ಣ ಗಸ್ತಿ, ಡಾ.ಎಸ್.ಮಾರುತಿ, ಡಾ,ಟಿ,ನರಸಿಂಹರಾಜು ಡಾ.ಎಸ್.ಎಂ ಮುತ್ತಯ್ಯ ಡಾ.ಎಚ್.ಆರ್. ತಿಪ್ಪೇಸ್ವಾವಿ ಎಂ.ಎಚ್ ತುಗ್ಗಲದೋಣಿ ಚಿತ್ರದುರ್ಗದ ಅಹೋಬಳನಾಯಕ, ಪಾಪಯ್ಯನೇತ್ರ ಡಾ.ಜಿ.ಬಸವಂತಪ್ಪ ಹರಪ್ಪನಹಳ್ಳಿ ಚಳ್ಳಕೆರೆಯ ದಿವಂಗತ ಆರ್.ವೈ. ನಾಯಕ, ಲಕ್ಷೇಶ್ವರದ ಪ್ರೊ ಟಿ, ಈಶ್ವರ ತಳವಾರ ಎಂ.ಬಿ. ಕಗ್ಗಲಗೌಡರ, ವಾಲ್ಮೀಕಿ ಸಂದೇಶ ಪತ್ರಿಕೆಯ ದಿ ಎನ್.ಎಚ್.ಕೋಲಕಾರ, ಬೆಂಗಳೂರಿನ ಟಿ.ಎಸ್. ರಾಮಚಂದ್ರ ಗದುಗಿನ ಹೆಚ್.ಬಿ.ತಳವಾರ ಧಾರವಾಡದ ಶಂಕರ ಧಾರವಾಡದ ಕುರೇರ, ಆರ್.ಬಿ.ಕಿತ್ತೂರ, ವಾಲ್ಮೀಕಿ ಕರ್ನಾಟಕ ಪತ್ರಿಕೆಯ ಸಂಪಾದಕರಾದ ನರಸಿಂಹ್ಯ, ಏಕಲವ್ಯ ವಾರ್ತೆ ಮಾಸಿಕದ ಜಿ. ರಾಮಯ್ಯ ತುಮಕೂರಿನ ಪಾಳೇಗಾರ ಅಸ್ತಿತ್ವ ಮಾಸಿಕದ ಶಿವುಚಂಗಾವರ, ವಾಲ್ಮೀಕಿ ವಾಹಿನಿಯ ಸಂಪಾದಕರಾದ ಸಿರಿಗೆರೆ ತಿಪ್ಪೇಶ್ , ಸ್ಟಾರ್ ಆಫ್ ರಾಯಚೂರು ಪತ್ರಿಕೆಯ ಭೀಮರಾಯ ಹದ್ದಿನಾಳ, ಮಹಾನಂದನಾಯಕ ಪತ್ರಕರ್ತಾ ಮಂಜುನಾಥ ಜಿ, ಗೊಂಡಬಾಳ, ಪ್ರತಕರ್ತ ರಮೇಶ್ ಗೋರೇಬಾಳ ವಾಲ್ಮೀಕಿ ಧ್ವನಿ ಪತ್ರಿಕೆ ಸಂಪಾದಕ ಸೊಂಡೇಕೆರೆ ಶಿವಣ್ಣ ತುಮಕೂರು ವಾಲ್ಮೀಕಿ ಮಿತ್ರ ಪತ್ರಿಕೆಯ ರಾಜಣ್ಣ ಪತ್ರಕರ್ತ ಪ್ರಕಾಶ್ ಗುಳೇದಗುಡ್ಡ ಕವಿ ರಮೇಶ್ ಹಿರೇ ಜಂಬೂರು ಇಳಕಲ್‌ನ ಕವಯತ್ರಿ ಪ್ರೇಮ ಕಾಟನಾಯಕ, ಡಾ,ಹೆಚ್.ವಿ ವಿಕ್ರಮ್ ಸಿಂಹ ಬೆಂಗಳೂರಿನ ಡಾ.ಗೋಮತಿದೇವಿ, ಡಾ.ಅನ್ನಪೂರ್ಣಮ್ಮ ಪಾಮನಕಲ್ಲೂರು ಐಯ್ಯಣ್ಣನಾಯಕ, ಮುಂತಾದವರ ಬರಹಗಳು ಕನ್ನಡ ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ಕಾಣಿದಿಕೊಂಡೆವೆ.

ಒಟ್ಟಾರೆ, ಇದುವರೆಗಿನ ಸಮೀಕ್ಷೆಯನ್ನು ಸೂಕ್ಷö್ಮವಾಗಿ ಗಮನಿಸಿದರೆ ನಾಲ್ಕಾರು ಪ್ರಮುಖ ಸಂಗತಿಗಳು ಎದ್ದು ಕಾಣುತ್ತವೆ. ಕರ್ನಾಟಕ ಸಂಸ್ಕೃತಿಯಲ್ಲಿ ವಾಲ್ಮೀಕಿ ನಾಯಕ ಜನಾಂಗದವರ ಸಾಹಿತ್ಯಿಕ ಪಾತ್ರ ಶ್ರೀಮಂತವಾಗಿದೆ ಎಂಬುದು. ಅದರಂತೆ ಅದು ಬೇಟೆ ಸಂಸ್ಕೃತಿ/ಶ್ರಮ ಸಂಸ್ಕೃತಿ/ ಬುಡಕಟ್ಟು ಸಂಸ್ಕೃತಿ ಕಾರಣಕ್ಕೆ ಸಿಂಹಪಾಲು ಸ್ಥಾನ ಪಡೆದುಕೊಂಡಿದೆ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಈ ವರ್ಗದ ಸಾಹಿತಿಗಳು ಬರೆದದ್ದು ಮತ್ತು ತಮ್ಮ ಸಮುದಾಯದ ಸಂವೇದನಗಳನ್ನು ಸಹಜವಾಗಿ ದಾಖಲಿಸಿದ್ದು ಪ್ರಧಾನವಾಗಿದೆ. ಶೋಷಿತ ಬದುಕಿನ ನೋವುಗಳನ್ನು ಹೇಳುತ್ತಲೆ ಅದರಿಂದ ಬಿಡುಗಡೆಗೊಳ್ಳುವ ಆಶಯ ಬಹುತೇಕ ಓದುಗರನ್ನು ಆಪ್ತವಾಗಿ ಕಾಡಿದೆ. ಈ ಎಲ್ಲಾ ಕಾರಣಕ್ಕೆ ಈ ಎಲ್ಲಾ ಮತ್ತು ಸಕಲ ಶೋಷಿತ ಸಮುದಾಯಗಳ ಸಂವೇದನೆಯ ಸರ‍್ಪಡೆ ಕಾರಣಕ್ಕೆ `ಕರ್ನಾಟಕ ಸಂಸ್ಕೃತಿ' ಜೀವಪರವಾಗಿದೆ.

ಈ ಲೇಖನ ಸಿದ್ದಗೊಳಿಸುವಲ್ಲಿ ಸಹಕರಿಸಿದ ಹಾಗೂ ಕೆಲವು ಮಾಹಿತಿಗಳನ್ನು ತಮ್ಮ ಲೇಖನದಿಂದ ಯಥಾವತ್ತಾಗಿ ಬಳಸಿಕೊಳ್ಳಲು ಅನುಮತಿ ನೀಡಿದ ಡಾ.ರಂಗರಾಜ ವನದುರ್ಗ ಅವರಿಗೆ ಕೃತಜ್ಙತೆಗಳು.

© 2020, Shri Maharushi Valmiki Gurupeeta | All Rights Resever