ಎ, ಭೀಮಪ್ಪ ನಾಯಕ ಸ್ವಾತಂತ್ರ್ಯ ಹೋರಾಟಗಾರ

ಹರ್ತಿಕೋಟೆ ವೀರೇಂದ್ರಸಿಂಹ

ಜಗಳೂರು ತಾಲೂಕಿನ ಬಿಳಿಚೋಡು ಒಂದು ಐತಿಹಾಸಿಕ ಮಹತ್ವ ಪಡೆದ ಸ್ಥಳ ಚಿತ್ರದುರ್ಗ ಇತಿಹಾಸದಲ್ಲಿ ಮತ್ತಿ ವಂಶ ಕೊನೆಗೊಂಡ ನಂತರ ಬಿಳಿ ಚೋಡಿನ ರಾಜ ಬಿಚ್ಚುಗತ್ತಿ ಭರವನ್ನು ನಾಯಕರು ಚಿತ್ರದುರ್ಗ ಸಂಸ್ಥಾನದ ಪಟ್ಟವೇರುತ್ತಾರೆ. ಇದರಿಂದ ಬಿಳಿಚೋಡು ಸಂತತಿ ಪ್ರಾರಂಭವಾಗುತ್ತದೆ. ಈ ಸಂತತಿಯೇ ಕೊನೆಯ ವರೆಗೂ ಚಿತ್ರದುರ್ಗದಲ್ಲಿ ಆಳ್ವಿಕೆ ನಡೆಸುತ್ತದೆ. ಇಂಥಹ ಗಂಡು ಭೂಮಿಯಲ್ಲಿ ನಾಯಕ ಮನೆತನದ ಹನುಮಪ್ಪ ಮತ್ತು ಹಮುನಕ್ಕ ದಂಪತಿಗಳ ಎರಡನೇ ಪುತ್ರರಾಗ ಜನಿಸಿದವರೇ ದಿ.ಎ.ಭೀಮಪ್ಪ ನಾಯಕರು.

ಚತುರ ರಾಜಕಾರಣಿ ದಿಟ್ಟ ಆಡಳಿತಗಾರ ಚಲದಂಕ ಮಲ್ಲ ಎಂಟೆದೆಯ ಭಂಟ ರಾಜಕೀಯ ರಂಗದ ಹೆಬ್ಬುಲಿ ಚಿತ್ರದುರ್ಗದ ಹುಲಿ ಎಂದೇ ಹೆಸರುಸಿಯಾಗಿದ್ದ ಎ.ಭೀಮಪ್ಪ ನಾಯಕರು ೨೦ ನೇ ಶತಮಾನದ ಪೂರ್ವದಲ್ಲಿ (ಸುಮಾರು ೧೯೦೪) ರಲ್ಲಿ ಜಿನಿಸಿದರು. ಇವರ ಮನೆತನದ ಕಸುಬು ಕೃಷಿ ಅಂಚೆ ಮನೆತನದವರೆಂದು ಇವರ ಕುಟುಂಬದವರನ್ನು ಕರೆಯುತ್ತಿದ್ದರು. ಮಹಾ ಧೈರ್ಯಶಾಲಿಯಾದ್ದ ಭೀಮಪ್ಪ ನಾಯಕರು ಸ್ವಂತ ಪ್ರತಿಭೆಯಿಂದ ರಾಜ್ಯ ರಾಜಕಾರಣದಲ್ಲಿ ಹೆಸರು ಗಳಿಸಿದರು ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡು ಅನೇಕ ಸಂಕಷ್ಟಗಳಿಗೆ ಸಿಲಿಕಿಕೊಂಡು ಬಹಳ ಕಷ್ಟದಿಂದಲೇ ಶಿಕ್ಷಣವನ್ನು ಮುಂದುವರೆಸಿ ಬಿ.ಎ ಪದವಿಧರರಾದರು ನಂತರ ಸ್ವಲ್ಪ ನೌಕರಿ ಮಾಡಿ ಅದನ್ನು ತನ್ನ ಸ್ವಾಭಾವಕ್ಕೆ ವಗ್ಗದೇ ಇದ್ದಾಗ ಕಾನೂನು ಅಧ್ಯಯನ ಮಾಡಿ ವಕೀಲ ವೃತ್ತಿಗೆ ಇಳಿದು ಪ್ರಸಿದ್ಧ ಕ್ರಮಿನಲ್ ಲಾಯರ್ ಎಂದು ಹೆಸರು ಪಡೆದರು. ಅಷ್ಟು ಹೊತ್ತಿಗಾಗಲೇ ಇವರನ್ನು ಸ್ವತಂತ್ರ ಆಂದೋಲನ ಗಮನ ಸೆಳೆಯಿತು ಭಾರತದಾದ್ಯಂತ ಸ್ವಾತಂತ್ರö್ಯ ಚಳುವಳಿ ಬಿರುಸಿನಿಂದ ಸಾಗಿತ್ತು ಇವರು ಈ ಚಳುವಳಿಯಲ್ಲಿ ಧುಮಕಿದರು ಚಿತ್ರದುರ್ಗವನ್ನೇ ಇವರ ಕಾರ್ಯ ಕ್ಷೇತ್ರವನ್ನಾಗಿ ಆರಿಸಿಕೊಂಡರು ಚಳಿವಳಿಯ ಮುಖಂಡತ್ವವನ್ನು ವಹಿಸಿಕೊಂಡು ಬ್ರಿಟೀಷರ ವಿರುದ್ಧ ಜನಸಂಘಟಣೆ ಮಾಡಿ ಧಂಗೆ ಎದ್ದರು ೧೯೩೯ ರ ಅರಣ್ಯ ಸತ್ಯಾಗ್ರಹದಲ್ಲೂ ಇವರ ಚಳುವಳಿಯ ನೇತ್ರತ್ವ ತ್ರೀವವಾಗಿದ್ದನ್ನು ಕಂಡುಕೊAಡ ಬ್ರಿಟೀಷ ಅಧಿಕಾರಿಗಳು ಇವರನ್ನು ಬಂಧಿಸಿ ಒಂದು ವರ್ಷ ಜೈಲಿನಲ್ಲಿಟ್ಟರು ಶಿಕ್ಷೆ ಅನುಭವಿಸಿ ಹೊರಬಂದ ಶ್ರೀಯುತರು ಮಹಾತ್ಮ ಗಾಂಧಿಜೀಯವರ ಕರೆಗೆ ಓಗೊಟ್ಟು ಚಳುವಳಿಯನ್ನು ತ್ರೀವಗೊಳಿಸಿದರು ಆಗ ಎಸ್ ನಿಜಲಿಂಗಪ್ಪ ಮತ್ತು ಭೀಮಪ್ಪ ನಾಯಕ್ರು ಚಳುವಳಿಗಾರರ ಮುಖಂಡತ್ವವನ್ನು ವಹಿಸಿಕೊಂಡು ಸತ್ಯಾಗ್ರಹಗಳಿಗೆ ಕುಮ್ಮಕ್ಕು ಕೊಡುತ್ತಿದ್ದರು ಕ್ವಿಟ್ ಇಂಡಿಯಾ ಚಳುವಳಿಯಲ್ಲೂ ಇವರನ್ನು ಹಾಗೂ ಇತರೆ ಮುಖಂಡರನ್ನು ಬಂಧಿಸಿದರು. ಚಿತ್ರದುರ್ಗ ಹಾಗೂ ಬೆಂಗಳೂರು ಜೈಲುಗಳಲ್ಲಿ ಶಿಕ್ಷೆ ಅನುಭವಿಸಿದರು ೧೯೪೨-೪೩ ರಲ್ಲಿ ಜೈಲಿನಿಂದ ಹೊರಬಂದವರೇ ಬ್ರಿಟೀಷರ ಕಣ್ಣು ತಪ್ಪಿಸಿ ಭೂಗತ ಚಟುವಟುಕೆಗಳಲ್ಲಿ ತೊಡಗಿ ಬ್ರಿಟೀಷರ ವಿರುದ್ಧ ಉಗ್ರ ಹೋರಾಟಗಳನ್ನು ಆಂದೋಲನಗಳನ್ನು ಸಂಘಟಿಸಿ ಭಾರತ ಸ್ವಾತಂತ್ರö್ಯವಾಗುವರೆಗೂ ಚಳುವಳಿಗಳನ್ನು ಸತ್ಯಾಗ್ರಹಗಳನ್ನು ನಡೆಸುತ್ತ ಜನಗಳನ್ನು ಸಂಘಟಿಸುತ್ತಾ ಬಂದರು. ಸ್ವಾತಂತ್ರö್ಯ ನಂತರ ಸಂಪೂರ್ಣ ವಕೀಲ ವೃತ್ತಿಗೆ ಇಳಿದು ರಾಜಕೀಯ

ರಂಗಕ್ಕೆ ಪ್ರವೇಶಿಸಿ ಚಿತ್ರದುರ್ಗ ಪುರಸಭೆಗೆ ಆಯ್ಕೆಯಾಗಿ ಪ್ರಥಮ ಅಧ್ಯಕ್ಷರು ಆದರು ಭೀಮಪ್ಪ ನಾಯಕ್ರು ಚಿತ್ರದುರ್ಗ ನಗರಸಭೆ ಅಧ್ಯಕ್ಷರಾಗಿದ್ದಾಗ ನಗರವು ಸರ್ವತೋಮುಖ ಅಭಿವೃದ್ಧಿಯನ್ನು ಕಂಡಿತು. ಇವರ ಆಡಳಿತ ಅವಧಿಯನ್ನು ಸುಮರ್ಣಯುಗವೆಂದೇ ಕರೆಯಲು ಅಡ್ಡಿಯಿಲ್ಲ ಐತಿಹಾಸಿಕೆನಗರವಾಗಿ ಪ್ರಸಿದ್ಧಿ ಪಡಿದಿದ್ದ ಚಿತ್ರದುರ್ಗವನ್ನು ಒಂದು ಸುಂದರ ನಗರವನ್ನಾಗಿ ಪರಿವರ್ತಿಸಲು ಪಣತೊಟ್ಟರು. ಈ ದಿಶೆಯಲ್ಲಿ ನಗರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು ದೊಡ್ಡ ಪೇಟೆ, ಚಿಕ್ಕ ಪೇಟೆ, ಬುರುಜನಹಟ್ಟಿ ಕಾಮನಬಾವಿ, ಜೋಗಿಮಟ್ಟಿ ರಸ್ತೆಗಳಲ್ಲದ್ದ ಕಂದಕಗಳು ಅಗಳುಗಳನ್ನು ಮುಚ್ಚಿಸಿ ರಸ್ತೆಗಳನ್ನು ನಿರ್ಮಾಣ ಮಾಡಿಸಿದ್ದು ರಂಗಯ್ಯನ ಬಾಗಿಲಿನಿಂದ ನಗರ ಸಭೆವರೆಗೆ ದೊಡ್ಡ ಪೇಟಿಯಿಂದ ಚಿಕ್ಕ ಪೇಟಿಯ ಆನೆ ಬಾಗಿಲು ಸಂತೆಬಾಗಿಲುವರೆಗೂ ನಂತರ ಗಾಂಧಿ ಸರ್ಕಲ್ ನಿಂದ ಮೆದೇಹಳ್ಳಿ ರಸ್ತೆ, ಗಾಂಧಿ ಸರ್ಕಲ್ ನಿಂದ ನಗರ ಸಭೆವರೆಗೆ ದಾವಣಗೆರೆ ರಸ್ತೆ ಕರ್ಲಹಟ್ಟಿ ರಸ್ತೆ ಮತ್ತು ನಗರದ ಮಧ್ಯೆ ಹೋಗಿರುವ ರಾ.ಹೆದ್ದಾರಿ ರಸ್ತೆ ಅಗಲೀಕರಣ ಮಾಡಿಸಿ ನಗರವನ್ನು ಸುಂದರುಗೊಳಿಸಿದ್ದು ಇವರ ಅವಧಿಯಲ್ಲಿಯೇ ಐತಿಹಾಸಿಕ ತಿಮ್ಮಣ್ಣ ನಾಯಕನ ಕೆರೆ ಕುರ್ವರ್ತಿಕೆರೆ ಅಕ್ಕತಂಗಿಯ ಹೊಂಡ ಹೂಳನ್ನು ತೆಗೆಸಿ ಸ್ವಚ್ಛಗೊಳಿಸಿದ್ದು ಪ್ರಪ್ರಥಮವಾಗಿ ನಗರಕ್ಕೆ ನೀರು ಸರಬರಾಜು ಯೋಜನೆ ಜಾರಿಗೊಳಿಸಿದ್ದು ೧೯೫೦ ರಲ್ಲಿ ನಗರಕ್ಕೆ ಒಳಚರಂಡಿ ವ್ಯವಸ್ಥೆ ಮಾಡಿಸಿದ್ದು ಇವರ ಕಾಲದಲ್ಲೇ ಎನ್ನುವ ಅಂಶ ಇಂದಿಗೂ ಸ್ಮರಣೀಯವಾಗಿದೆ.

ಇವರ ಕಾಲದಲ್ಲಿ ಹಲವಾರು ಬಡಾವಣೆಗಳು ನಿರ್ಮಾಣಗೊಂಡವು ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಜೆ,ಸಿ,ಆರ್ ಬಡಾವಣೆ, ವಿ.ಪಿ.ಬಡಾವಣೆ, ಕಾಮನಬಾವಿ ಬಡಾವಣೆಗಳಾಗಿದೆ. ಅಂದಿನ ಮೈಸೂರು ಮಹಾರಾಜರಾಗಿದ್ದ ಶ್ರೀ ಶ್ರೀ ಜಯಚಾಮರಾಜೇಂದ್ರ ಒಡೆಯರ್‌ರವರನ್ನು ಚಿತ್ರದುರ್ಗಕ್ಕೆ ಕರೆಯಿಸಿ ಬಡಾವಣೆಗಳ ಉದ್ಘಾಟನೆಗಳನ್ನು ಬಹು ಅದ್ಧುರಿಯಾಗಿ ನೆರವೇರಿಸಿದ ಸಂಗತಿ ಜನಮನದಲ್ಲಿ ಅಚ್ಚಳಿಯದೇ ಉಳಿದಿದೆ ಬೆಂಗಳೂರಿನಲ್ಲಿ ರಾಜಾಜಿನಗರ ಮೊದಲಾದ ಬಡಾವಣೆಗಳು ಇವರ ಕರ್ನಾಟಕದ ಹೌಸಿಂಗ್ ಬೋರ್ಡಿನ ಪ್ರಥಮ ಅಧ್ಯಕ್ಷರಾಗಿದ್ದ ಕಾಲದಲ್ಲಿ ನಿರ್ಮಾನವಾದವುಗಳಾಗಿದೆ. ಎಲ್ಲಾ ಜನಾಂಗದವರನ್ನು ಸಮಾನವಾಗಿ ಕಾಣುತಿದ್ದ ಭೀಮಪ್ಪ ನಾಯಕರು ವಿದ್ಯರ್ಥಿ ನಿಲಯಗಳಿಗಾಗಿ (ಹಾಸ್ಟೇಲುಗಳು) ಆದಿ ಕರ್ನಾಟಕ ಆದಿ ದ್ರಾವಿಡ, ಬೋವಿ, ನಾಯಕ, ಲಂಬಾಣಿ ವಕ್ಕಲಿಗ, ಬ್ರಾಹಣ ಸಮಾಜದವರಿಗೆ ನಿವೇಶನಗಳನ್ನು ಮಂಜೂರು ಮಾಡಿ ಆಯಾ ಜನಾಂಗಗಳಲ್ಲಿ ವಿದ್ಯಾ ವಿಕಾಸಕ್ಕೆ ಸ್ಪೂರ್ತಿ ನೀಡಿದರು ಉನ್ನತ ಶಿಕ್ಷಣ ಅಭಿವೃದ್ಧಿಗಾಗಿ ಪುರಸಭೆಯ ಸುಮಾರು ೨೫ ಎಕರೆ ಜಮೀನನ್ನು ಮಂಜೂರು ಮಾಡಿದ್ದು ಅವರ ದೂರ ದೃಷ್ಠ ಸಮಯ ಪ್ರಜ್ಞೆಗೆ ಸಾಕ್ಷಿಯಾಗಿ ಇಂದು ಆಯಾ ನಿವೇಶನಗಳಲ್ಲಿ ಶಾಲಾ ಕಾಲೇಜು ಕಟ್ಟಡಗಳು ಆಟದ ಮೈದಾನಗಳು ರೂಪುಗೊಂಡಿರುವುದನ್ನು ಕಾಣಬಹುದಾಗಿದೆ. ಸಹಕಾರ ರುವಾರಿಗಳಾಗಿ ಹಲವಾರು ಸಹಕಾರಿ ಸಂಸ್ಥೆಗಳನ್ನು ಸ್ಥಾಪಿಸಿದ್ಧರು ಅವರೇ ಸ್ಥಾಪಿಸಿದ್ದ ಡಿ ಮರ್ಚಂಟ್ಸ ಕೊ ಆಪರೇಟಿವ್ ಸೋಸೈಟಿಯು ಇಂದು ದಿ ಮರ್ಚಂಟ್ಸ ಸೌಹಾರ್ದ ಸಹಕಾರಿ ಬ್ಯಾಂಕ ಚಿತ್ರದುರ್ಗ ಎಂದು ಕಾರ್ಯನಿರ್ವಹಿಸುತ್ತಿದ್ದು ನಗರದ ಅತ್ಯಂತ ಪ್ರಗತಿಪರ ಸಂಸ್ಥೆಯಾಗಿ ಮುನ್ನಡೆದಿದೆ.

ಜಿಲ್ಲಾ ಆಸ್ಪತ್ರೆ ಪ್ರಾರಂಭಿಸಿ ಅದರ ಅಭಿವೃದ್ದಿಗಾಗಿ ಅಂದಿನ ಕಾಲಕ್ಕೆ ಸುಮಾರು ೧೦ ಲಕ್ಷ ರೂ.ಗಳನ್ನು ಸಂಗ್ರಹಿಸಿಕೊಟ್ಟದ್ದು, ನಗರದಲ್ಲಿ ಯೂನಿಯನ್ ಚಿತ್ರಮಂದಿರ ನಿರ್ಮಿಸಿದ್ದು, ಜಿಲ್ಲಾಧಿಕಾರಿಗಳ ಗೃಹ ನಿವೇಶನ ಕ್ರಿಶ್ಚಿಯನ್‌ರಿಗೆ ರುದ್ರಭೂಮಿ ನಿರ್ಮಾಣಕ್ಕಾಗಿ ನಿವೇಶನ ಮಂಜೂರ ಮಾಡಿಸಿದ್ದು, ಇವರ ಅಧಿಕಾರ ಅವಧಿಯಲ್ಲಿ ಎಂಬುದು ಗಮನಾರ್ಹ ಭೀಮಪ್ಪ ನಾಯಕರು ಪರುಸಭೆಯ ಅಧ್ಯಕ್ಷರಾಗಿದ್ದ ಅವರ ಆಡಳಿತ ವೈಖರಿಯೇ ವಿಷಿಷ್ಠವಾದ್ದದೆಂದು ಅವರ ಕಾಲದ ಜನರ ಬಾಯಲ್ಲಿ ಇಂದಿಗೂ ಕೇಳಬಹುದಾಗಿದೆ.

೧೯೫೨ ರಲ್ಲಿ ರಾಜ್ಯದ ರಾಜ್ಯಕಾರಣಕ್ಕೂ ಪಾದಾರ್ಪಣೆ ಮಾಡಿದ ಭೀಮಪ್ಪ ನಾಯಕರು ಮೊಳಕಾಲ್ಮೂರು ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಜಯಗಳಿಸಿದರು. ಪುನ: ೧೯೫೭ ರಲ್ಲಿ ಚಳ್ಳಕೆರೆ ಮತ್ತು ಜಗಳೂರು ಜಂಟಿ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ದಿಸಿ ಬಹುಮತದಿಂದ ಜಯಗಳಿಸಿದ್ದರಿಂದ ಜನತೆ ನೂರಾವಂದು ಜೊತೆ ಎತ್ತಿನ ಬಂಡಿಯ ಮೆರವಣಿಗೆ ಮಾಡಿ ಒಂದು ವಿಶಿಷ್ಟ ರೀತಿಯಲ್ಲಿ ವಿಜಯೋತ್ಸವವನ್ನು ಆಚರಿಸಿ ವೈಭವವನ್ನು ಮೆರೆದಿದ್ದು ಈಗ ಇತಿಹಾಸ ನಂತರ ಭೀಮಪ್ಪ ನಾಯಕರಿಗೆ ಆಪ್ತ ಮಿತ್ರರಾಗಿದ್ದ ಎಸ್ ನಿಜಲಿಂಗಪ್ಪನವರ ಮಂತ್ರಿ ಮಂಡಲದಲಿ ಅಲ್ಪ ಕಾಲದವರೆಗೆ ಸಹಕಾರ ಸಚಿವರಾಗಿ ಸೇವೆ ಸಲ್ಲಿಸಿದರು ಬೆಂಗಳೂರಿನ ಸದಾಶಿವ ನಗರದಲ್ಲಿ ನಡೆದ ಎ.ಐ.ಸಿ.ಸಿ ಅಧಿವೇಶನದ ಮುಖ್ಯ ರೂವಾರಿಯಾಗಿ ಮುಂದಾಳುತನ ವಹಿಸಿಕೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸಿದವರು ಇವರಲ್ಲಿದ್ದ ಅಪಾರ ಜ್ಞಾನ ವಾಕ್ಪಟುತ್ವ, ಸಂಸದೀಯ ತಿಳುವಳಿಕೆಗಳು ರಾಜ್ಯಮಟ್ಟದ ಕಾಂಗ್ರೆಸ್ ಮುಖಂದತ್ವಕ್ಕೆ ಇವರನ್ನು ಕೊಂಡೊಯ್ದಿದ್ದರು ಇವೆ ವಾಗ್ದಾಳಿಗೆ ಕರ್ತವ್ಯಪ್ರಜ್ಷೆಗೆ ವಿರೋಧಿ ಬಣ ತಲ್ಲಣಿಸುತ್ತಿದ್ದವಂತೆ ಅಂದಿನ ಪತ್ರಿಕೆಗಳಲ್ಲಿ ಇವರನ್ನು ಗದೆಹಿಡಿದ ಭೀಮನಂತೆ ಚಿತ್ರಿಸಿ ಸುದ್ಧಿ ಪ್ರಕಟಿಸುತ್ತಿದ್ದನ್ನು ಅವರ ಆಪ್ತ ಗೆಳೆಯರು ಈಗಲೂ ನೆನೆಯುತ್ತಾರೆ. ಕರ್ನಾಟಕ ರಾಜ್ಯ ಹೌಸಿಂಗ್ ಬೋರ್ಡ ಪ್ರಥಮ ಅಧ್ಯಕ್ಷರಾಗಿ ಮೈಸೂರು ವಿಶ್ವವಿದ್ಯಾಲಯದ ಸಿಂಡಕೇಟ್ ಸದಸ್ಯರಾಗಿ ಲೆಜಸ್ಲೇಟಿವ್ ಕೌಂಸಲಿAಗ್‌ಗೆ ಚುನಾಯಿತ ಮೆಂಬರ್ ಆಗಿ ಹತ್ತು ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದರು. ಕರ್ನಾಟಕ ಎಕೀಕರಣದಲ್ಲೂ ಇವರ ಪ್ರಮುಖ ಪಾತ್ರ ವಹಿಸಿ ದುಡಿದವರಾಗಿದ್ದಾರೆ. ಇತ್ತಿಚೆಗೆ ದಿನಾಂಕ: ೨೧/೧೦/೨೦೧೭ ರಂದು ಇವರ ಸ್ಮರಣೆಗಾಗಿ ಚಿತ್ರದುರ್ಗ ನಗರಸಭೆಯ ಸಹಯೋಗದೊಂದಿಗೆ ಅಂಚೆ ಇಲಾಖೆಯು ಇವರ ಭಾವಚಿತ್ರವಿರುವ ವಿಶೇಷ ಅಂಚೆ ಲಕೋಟೆಯನ್ನು ಬಿಡುಗೆಡೆಗೊಳಿಸಿರುವುದು ಸ್ಮರಣೀಯ ಹಾಗೂ ಅವರಿಗೆ ಸಂದ ಗೌರವವಾಗಿದೆ.

ಕರ್ನಾಟಕ ರಾಜ್ಯದ ನಾಯಕ ಜನಾಂಗಕ್ಕೆ ಪ್ರಪ್ರಥಮವಾಗಿ ರಾಜ್ಯ ಮಟ್ಟದ ಮುಖಂಡತ್ವ ಬಂದಿದ್ದು ಇವರಿಂದಲೇ ನಂತರ ಇವರ ಸ್ಥಾನವನ್ನು ಹಿಂದುಳಿದ ವರ್ಗಗಳ ನೇತಾರ ಶ್ರೀ ಎಲ್.ಜಿ ಹಾವನೂರು ತುಂಬಿದ್ದರು ಚಿತ್ರದುರ್ಗ ನಗರದ ಕೀರ್ತಿ ಪತಾಕೆಯನ್ನು ರಾಜ್ಯದೆತ್ತರಕ್ಕೆ ಹಾರಿಸಿದ್ದ ದಿ. ಎ.ಭೀಮಪ್ಪ ನಾಯಕರನ್ನು ಆಧುನಿಕ ಚಿತ್ರದುರ್ಗದ ಶಿಲ್ಪಿ ಎಂದು ಕರೆದರೆ ಅತಿಶಯೋಕ್ತಿ ಎನಿಸದು. ನಗರದ ಅಭಿವೃದ್ಧಿಯೇ ತನ್ನ ಉಸಿರೆಂದು ಭಾವಿಸಿ ಅಹೋರಾತ್ರಿ ಸುಂದರ ನಗರ ನಿರ್ಮಾಣದ ಕನಸನ್ನು ಕಟ್ಟಿ ಅಂದಿನ ಮಟ್ಟಿಗೆ ಸಫಲತೆಯನ್ನು ಕಂಡ ಎಂಟೆದೆಯ ಭಂಟ ಕಲಿಭೀಮ ಎನ್ನಿಸಿಕೊಂಡಿದ್ದ ಎ.ಭೀಮಪ್ಪ ನಾಯಕರು ಹೃದಯಾಘಾತದಿಂದ ೧೯೬೬ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು ಅವರ ಜೀವಿತ ಕಾಲದ ಅಪೇಕ್ಷಯಂತೆ ಅವರ ಪರ್ಥೀವ ಶರೀರವನ್ನು ಅವರ ಕರ್ಮಭೂಮಿ ಚಿತ್ರದುರ್ಗದ ಗಂಡು ನೆಲಕ್ಕೆ ತಂದು ಸಂಸ್ಕಾರ ಮಾಡಿ ಜನತೆ ಧನ್ಯತೆ ಪಡೆಯಿತು.

© 2020, Shri Maharushi Valmiki Gurupeeta | All Rights Resever